ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದ ಶರಣಬಸವರು

0
55

ಮಹಾದಾಸೋಹಿ ಶರಣಬಸವೇಶ್ವರರು ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿ ಕೃಷಿ ಕಾಯಕ ದಾಸೋಹ ಮಾಡಿ ದೇವರಾಗಿದ್ದರು ಎಂದು ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಪ್ರೊ. ಅನಿತಾ ಕೃಪಾಸಾಗರ ಗೊಬ್ಬುರ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ 40 ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶನಿವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು. ಒಂದು ಸಲ ಮಶಾಕ ಎನ್ನುವ ಮುಲ್ಲಾನೊಬ್ಬ ಶರಣರ ಮೇಲೆ ಯಾವಾಗಲೂ ನಿಂದೆ ಮಾಡುತ್ತಲೇ ಅವರ ಬಗ್ಗೆ ಅವಾಚ್ಯ ಮಾತಾಡುತ್ತಿದ್ದ. ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಬೇಕೆಂದು ನಿರ್ಧಾರ ಮಾಡಿ ಮೌಂಸ ಸಿಂದಿ ಸರಾಯಿ ತೆಗೆದುಕೊಂಡು ಶರಣಬಸವರ ಮಹಾಮನೆಯ ಕಡೆ ಹೊರಟ. ಭಕ್ತಿಯ ಸೋಗು ಹಾಕುತ್ತಲೇ ಬಂದ ಶರಣರಿಗೆ ತಿಳಿಯಿತು. ತಾನು ತಂದ ತಾಟನ್ನು ಶರಣರ ಮುಂದೆ ಇಟ್ಟಾಗ ಮೌಂಸಹೋಗಿ ಮಲ್ಲಿಗೆ ಮಾಲೆ ಮತ್ತು ಸರಾಯಿ ಹೋಗಿ ಮಜ್ಜಿಗೆ ಆಯಿತು. ಮಶಾಕ ಗಾಬರಿಗೊಂಡು ಶರಣರಿಗೆ ಶರಣಾದ.

Contact Your\'s Advertisement; 9902492681

ಬೆಳಗುಂಪಿ ಊರಿನ ಸಾಹುಕಾರ ರಾಜಣ್ಣನಿಗೆ ಹೊಲ, ಮನೆ ಬಂಗಾರ ಹಣ ಲೆಕ್ಕವಿಲ್ಲದಷ್ಟು. ರಾಜಣ್ಣನಿಗೆ ಶರಣರ ಮೇಲೆ ಸಿಟ್ಟು, ಸುಮ್ಮನೆ ಅವರಿಗೆ ಬಯ್ಯುತ್ತಿದ್ದ. ಒಂದು ಸಲ ಹೊಲದ ಕಬ್ಬು ಬೆಂಕಿ ಹತ್ತಿ ಉರಿಯಿತು. ಕಬ್ಬು ಭಸ್ಮವಾಯಿತು. ತನ್ನ ತಪ್ಪು ತನಗೆ ಅರಿವಾಗಿ ರಾಜಣ್ಣ ಶರಣರ ಹತ್ತಿರ ಬಂದು ’ ಬುದ್ದಿಯಿಲ್ಲದ ಕುನ್ನಿ ನಾನು ಕಾಪಾಡಪ್ಪಾ’ ಎಂದು ರೋಧಿಸಿದ ಶರಣರು ಅವನಿಗೆ ಬುದ್ಧಿವಾದ ಹೇಳಿ ಭಸ್ಮವನ್ನು ಕೊಟ್ಟು ಹೊಲದ ತುಂಬೆಲ್ಲ ಸಿಂಪಡಿಸಲು ಹೇಳುತ್ತಾರೆ. ಮುಂದೆ ಕೆಲವೇ ದಿನಗಳಲ್ಲಿ ಕಬ್ಬು ಮತ್ತೆ ಬೆಳೆಯಿತ್ತದೆ. ಶರಣಬಸವರು ಇಪ್ಪತ್ತು ವರ್ಷದ ಮಗನಿಗೆ ಬುದ್ಧಿ ಕರುಣಿಸಿದರು, ಮೂರ್ಛೆ ರೋಗ ನಿವಾರಿಸಿ ಭಾಗ್ಯ ಕರುಣಿಸಿರುವ ಮತ್ತು ರೈತ ಮಹಿಳೆಯ ಭಕ್ತಿಗೆ ಒಲಿದ ಲೀಲೆಗಳನ್ನು ಹೇಳಿದರು.

ನಂತರ ಗೋದುತಾಯಿ ಶಿಕ್ಷಣ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಪ್ರೊ. ಸುಂದರಬಾಯಿ ನಾಗಶೆಟ್ಟಿ ಅವರು ಉಪನ್ಯಾಸ ನೀಡಿದರು. ಮೂಕನ ತಾಯಿಯೊಬ್ಬಳು ಮಗನಿಗೆ ಕರೆದುಕೊಂಡು ಶರಣರಲ್ಲಿ ಬಂದು ’ ಯಪ್ಪಾ ಗಂಡ ಇಲ್ಲದ ವಿಧವೆ, ಬಡತನ ಇದ್ದೊಬ್ಬ ಮಗ ಮೂಕ’ ಎಂದು ಅಳಲು ಪ್ರಾರಂಭಿಸಿದಾಗ ಶರಣರು ಅವಳನ್ನು ಸಮಾಧಾನ ಮಾಡಿ ವಿಭೂತಿ ತಂದು ಆ ಕೂಸಿನ ಹಣೆಗೆ ಹಚ್ಚುತ್ತಾರೆ. ಆಗ ಆ ಮಗು ’ ಯಪ್ಪಾ ಎನ್ನುತ್ತ ಅವರ ಕಾಲಿಗೆ ಎರಗುತ್ತದೆ’ ತಾಯಿಯು ’ ಯಪ್ಪಾ ಶರಣಾ ಶಿವನೇ ನೀನಾಗಿದೆಯಪ್ಪಾ ನಮ್ಮಂತಹವರಿಗಾಗಿ ಹುಟ್ಟಿ ಬಂದಿರುವೆ ತಂದೆ’ ಎಂದು ಶರಣರ ಪಾದಕ್ಕೆ ನಮಸ್ಕರಿ ಶರಣರ ನಾಮ ಸ್ಮರಣೆ ಮಾಡುತ್ತಾ ಬದುಕುತ್ತಾಳೆ.

ಒಬ್ಬ ಕುರುಡನಿಗೆ ಅವನ ಮಡದಿ ಮಕ್ಕಳು ನಿರ್ಲಕ್ಷ ಮಾಡುತ್ತಿದ್ದರು. ಆಗ ಆ ಕುರುಡನಿಗೆ ದಿಕ್ಕು ತೋಚದೆ ಸಾಯಬೇಕೆಂದು ನಿರ್ಧರಿಸುತ್ತಾನೆ. ಒಂದು ದಿನ ಶರಣರ ದರ್ಶನಕ್ಕೆ ಭಕ್ತ ಸಮೂಹ ಹೊರಟಿರುತ್ತದೆ. ಅವನು ಒಬ್ಬಾತನ ಕೈ ಹಿಡಿದು ಹೊರಡುತ್ತಾನೆ. ಶರಣರಲ್ಲಿ ಬಂದು ಅವರ ಪಾದವಿಡಿದು ತನ್ನ ಕತೆಯನ್ನು ಅವರಿಗೆ ಹೇಳುತ್ತಾನೆ. ಶರಣರು ಭಸ್ಮ ತಂದು ಅವನ ಕಣ್ಣಿಗೆ ಹಚ್ಚುತ್ತಾರೆ. ದೃಷ್ಟಿ ಬರುತ್ತದೆ. ಮೊದಲಿಗೆ ಆತ ನೋಡಿದ್ದು ಶರಣಬಸವರನ್ನೆ ತನಗೆ ದೃಷ್ಟಿ ಕೊಟ್ಟ ಶರಣರ ಸಾನಿಧ್ಯದಲ್ಲಿ ಕೊನೆಯವರಿಗೂ ಇರುತ್ತಾನೆ. ಹೆಳವನಿಗೆ ಕಾಲು ಕರುಣಿಸಿದ, ದುಷ್ಟ ಅತ್ತಿಗೆಯರ ದುಷ್ಟತನ ಅಳಿಸಿದ ಮತ್ತು ಚೀಲ ಚೀಲ ಜೋಳ ಬೀಸುವಂತೆ ಮಾಡಿದ ಲೀಲೆಗಳನ್ನು ಹೇಳಿದರು.

ಪ್ರೊ. ಅನಿತಾ ಕೃಪಾಸಾಗರ ಗೊಬ್ಬುರ, ಸಹ ಪ್ರಾಧ್ಯಾಪಕಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here