ವಿಜಿ ವುಮೆನ್ಸ್ ಕಾಲೇಜಿನಲ್ಲಿ ಪರಿಸರ ಸ್ನೇಹಿ ಗಣೇಶ ತಯಾರಿಕಾ ಶಿಬಿರ

0
56

ಕಲಬುರಗಿ: ಮಣ್ಣಿನ ಗಣಪತಿಯನ್ನು ಮಹಿಳೆತಯರೇ ತಮ್ಮ ಕೈಯಾರೆ ತಯಾರಿಸಿ ಪೂಜಿಸಿದರೆ ಗಣೇಶ ಚತುರ್ಥಿಗೆ ಹೆಚ್ಚಿನ ಅರ್ಥ ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ವೀರಭಾರತಿ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಮತಿ ಅರುಣಾಕುಮಾರಿ ವೈಜನಾಥ ಹಿರೇಮಠ ತಿಳಿಸಿದರು.

ನಗರದ ವಿಜಿ ವುಮೆನ್ಸ್ ಕಾಲೇಜಿನಲ್ಲಿ ಮಹಿಳೆಯರಿಗೆ ಏರ್ಪಡಿಸಿದ್ದ ಪರಿಸರ ಸ್ನೇಹಿ ಮಣ್ಣಿನ ಗಣೇಶನ ತಯಾರಿಕಾ ಶಿಬಿರದಲ್ಲಿ ಮುಖ್ಯ ತರಬೇತುದಾರರಾಗಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಾತ್ಯಕ್ಷಿಕೆ ಮೂಲಕ ಗಣೇಶನ ವಿಗ್ರಹ ಸಿದ್ಧಪಡಿಸುವುದನ್ನು ಹೇಳಿಕೊಟ್ಟು ಮಾತನಾಡಿದರು. ಪೌರಾಣಿಕವಾಗಿಯೂ ಗಣೇಶನನ್ನು ಮಣ್ಣಿನಿಂದ ಗೌರಿ ಸೃಷ್ಟಿಸಿದ ಬಗ್ಗೆ ಉಲ್ಲೇಖ ಇರುವುದರಿಂದ ಮಹಿಳೆಯರು ಗಣೇಶನನ್ನು ಕೈಯಿಂದಲೇ ತಯಾರಿಸಿ ಪೂಜಿಸಬೇಕು ಮತ್ತು ಹಸಿ ಗಣೇಶನ ಮೂರ್ತಿಯೇ ಪೂಜೆಗೆ ಹೆಚ್ಚು ಅರ್ಹ ಅಲ್ಲದೇ ಮಹಿಳೆಯರಿಂದ ತಯಾರಾದ ವಿಘ್ನೇಶ್ವರನಿಗೆ ಪೂಜೆ ಸಲ್ಲಿಸುವುದು ನಮ್ಮ ಪರಂಪರೆಯ ಭಾಗವೇ ಆಗಿದೆ ಅದು ಇನ್ನು ಮುಂದೆ ಮತ್ತೆ ತನ್ನ ಗತವೈಭವವನ್ನು ಮರಳಿ ಹೊಂದುವಂತಾಗಲು ಕೈಯಿಂದಲೇ ಗಣೇಶ ತಯಾರಿಸಿ ಪೂಜಿಸಿ ಎಂದು ಅವರು ಹೇಳಿದರು.

Contact Your\'s Advertisement; 9902492681

ಗಣೇಶನ ಮೂರ್ತಿ ಸಿದ್ಧಪಡಿಸಲು ಶುದ್ಧ ಮನಸ್ಸಿರಬೇಕು ಅಂತಃಕರಣದಿಂದ ಸಂಕಲ್ಪ ಮಾಡಿಕೊಂಡು ಏಕಾಗ್ರತೆ ಸಾಧಿಸಿ ಜೆಡಿಮಣ್ಣು ತೆಗೆದುಕೊಂಡು ಮೂರ್ತಿಯನ್ನು ತಯಾರಿಸಬೇಕೆಂದು ಅವರು ವಿವರಿಸಿ ಅತ್ಯಂತ ಖರ್ಚಿಲ್ಲದ, ಸರಳವಾಗಿ ತಯಾರಿಸುವ ವಿಧಾನಗಳನ್ನು ತಂತ್ರಗಳನ್ನು ವಿದ್ಯಾರ್ಥಿನಿಯರಿಗೆ ತಿಳಿಸಿದರು. ಕಾರ್ಯಕ್ರಮಕ್ಕೆ ವಿಜಿ ಮಹಿಳಾ ಕಾಲೇಜು ಪ್ರಾಚಾರ್ಯ ಶ್ರೀಮತಿ ಚಂದ್ರಕಲಾ ಪಾಟೀಲ್ ಚಾಲನೆ ನೀಡಿ ಮಾತನಾಡಿ ಪರಿಸರ ಸಂರಕ್ಷಣೆ ಮಾಡಲು ಪ್ರತಿಯೊಬ್ಬ ಪ್ರಜೆಯೂ ಸಂಕಲ್ಪ ಮಾಡಬೇಕು ಆ ನಿಟ್ಟಿನಲ್ಲಿ ಮಾಡಬೇಕಾದ ಯಾವುದೇ ಕಾರ್ಯವನ್ನು ಅದು ಧಾರ್ಮಿಕವಾಗಿರಬಹುದು ಇಲ್ಲವೇ ಸಾಮಾಜಿಕವಾಗಿರಬಹುದು ಅದನ್ನು ಪರಿಸರ ಸ್ನೇಹಿಯಾಗಿಸಿ ಆಚರಿಸುವತ್ತ ಪ್ರಜ್ಞಾವಂತಿಕೆಯಿಂದ ಯೋಚಿಸಿ ಮುಂದಡಿ ಇಡಬೇಕು ಎಂದು ತಿಳಿಸಿ ಪರಿಸರ ಸ್ನೇಹಿ ಗಣೇಶನ ತಯಾರಿಸುವುದನ್ನು ಎಲ್ಲ ವಿದ್ಯಾರ್ಥಿನಿಯರು ಮೈಗೂಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಪ್ರೌಢದೇವರಾಯ ಕಾಲೇಜು ಪ್ರಾಚಾರ್ಯ ಜೀವಣಗಿ, ಉಪನ್ಯಾಸಕರಾದ ರಷ್ಮೀ ಅಂತೂರಮಠ ಸೇರಿದಂತೆ ಕಾಲೇಜು ಉಪನ್ಯಾಸಕರು ಇದ್ದರು. ನಂತರ ಜರುಗಿದ ತರಬೇತಿ ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಸಕ್ತಿಯಿಂದ ಭಾಗವಹಿಸಿ ಪರಿಸರ ಸ್ನೇಹಿ ಗಣೇಶನ ತಯಾರಿಸುವುದನ್ನು ಕಲಿತುಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here