ಒಂದು ದಿನದ ಹಿಂಗಾರು ಬೆಳೆಗಳ ತರಬೇತಿ ಕಾರ್ಯಾಗಾರ

0
18

ಸೇಡಂ; ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ಮತ್ತು ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಮತ್ತು ವಿಕಾಸ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಹಿಂಗಾರು ಬೆಳೆಗಳ ತರಬೇತಿ ಕಾರ್ಯಾಗಾರವನ್ನು ತಾಲೂಕಿನ ನೀಲಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಶ್ರೀಮತಿ ಅನುಸೂಯಾ ಹೂಗಾರ, ಕೃಷಿ ಉಪನಿರ್ದೇಶಕರು, ಸೇಡಂ ರವರು ಉದ್ಘಾಟಿಸಿ ಕೃಷಿ ಇಲಾಖೆಯಲ್ಲಿ ಲಭ್ಯವಿರುವ ವಿವಿಧ ಸೌಲಭ್ಯಗಳು ಮತ್ತು ಸೆಕೆಂಡರಿ ಕೃಷಿಯ ಕುರಿತು ಮಾಹಿತಿ ನೀಡಿದರು.

Contact Your\'s Advertisement; 9902492681

ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರಾದ ಡಾ. ರಾಜು ಜಿ. ತೆಗ್ಗಳ್ಳಿಯ ರವರು ಮಾತನಾಡಿ ತೊಗರಿಯಲ್ಲಿ ಕಂಡುಬರುವ ವಿವಿಧ ಕೀಟಗಳ ಹತೋಟಿ ಕುರಿತು ಮತ್ತು ಹಿಂಗಾರು ಬೆಳೆಗಳಲ್ಲಿ ಕೈಗೊಳ್ಳಬಹುದಾದ ಮುಂಜಾಗೃತ ಕ್ರಮಗಳನ್ನು ವಿವರಿಸಿದರು. ಕೆವಿಕೆಯ ಮಣ್ಣು ವಿಜ್ಞಾನಿಯವರಾದ ಡಾ. ಶ್ರೀನಿವಾಸ ಬಿ.ವಿ ರವರ ಮಣ್ಣು ಪರೀಕ್ಷೆ ಮತ್ತು ಮಣ್ಣಿನ ಆರೋಗ್ಯದ ಕುರಿತು ತಿಳಿಸಿದರು.

ವಿ. ಶಾಂತರೆಡ್ಡಿ, ಕೃಷಿ ಪ್ರಮುಖರು, ವಿಕಾಸ ಆಕಾಡೆಮಿ, ಕಲಬುರಗಿ ರವರು 2025ರಲ್ಲಿ ನಡೆಯುವ ಭಾರತೀಯ ಸಂಸ್ಕøತಿ ಉತ್ಸವದ ಸ್ವರ್ಣ ಜಯಂತಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಕೊನೆಯಲ್ಲಿ ಸುರಕ್ಷಿತ ಕೀಟನಾಶಕ ಸಿಂಪರಣೆಯ ಪ್ರಾತ್ಯಕಿಹಿಂಗಾರು ಬೆಳೆಗಳ ಮಾಹಿತಿ ಕಾರ್ಯಾಗಾರ ್ಷಕೆಯನ್ನು ತೋರಿಸಲಾಯಿತು. ಕಾರ್ಯಕ್ರಮವನ್ನು ಭಗವಂತರಾವ ಪಾಟೀಲ್ ರವರು ನಿರೂಪಿಸಿ ವಂದಿಸಿದರು. ಸುಮಾರು 100 ಕ್ಕೂ ಹೆಚ್ಚು ಭಾಗವಹಿಸಿ ತರಬೇತಿಯ ಸದಪಯೋಗ ಪಡೆಸಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here