ಹಲಕರ್ಟಿ- ಬಸವೇಶ್ವರ ಭಾವಚಿತ್ರಕ್ಕೆ ಅಪಮಾನ: ದಿಗ್ಗಾಂವಕರ ಖಂಡನೆ

0
69

ಚಿತ್ತಾಪುರ: ತಾಲ್ಲೂಕಿನ ಹಲಕರ್ಟಿ ಗ್ರಾಮದ ಗ್ರಾಮ ಪಂಚಾಯಿತಿ ಎದುರು ಇರುವ ವಿಶ್ವಗುರು ಜಗಜ್ಯೋತಿ ಬಸವೇಶ್ವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿದನ್ನು ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಯುವ ಕಾರ್ಯದರ್ಶಿ ಜಗದೇವ ದಿಗ್ಗಾಂವಕರ ಅವರು ತೀವ್ರವಾಗಿ ಖಂಡಿಸಿದ್ದಾರೆ.

ವೀರಶೈವ ಲಿಂಗಾಯತರು ಶಾಂತಿ ಪ್ರಿಯರು ಅದರ ದುರುಪಯೋಗ ಪಡೆದುಕೊಂಡು ಕೆಲವು ಕಿಡಿಗೇಡಿಗಳು ಅವರ ತಾಳ್ಮೆ ಪರೀಕ್ಷೆ ಮಾಡಲು ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡಲು ಇಂತಹ ಕೃತ್ಯ ಮಾಡುತ್ತಿರುವುದು ಸರಿ ಅಲ್ಲ.ಈ ಕೃತ್ಯಕ್ಕೆ ಕಾರಾಣವಾದವರನ್ನು ಪೊಲೀಸ್ ಇಲಾಖೆ ಆದಷ್ಟು ಬೇಗನೆ ಪತ್ತೆ ಹಚ್ಚಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು.ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ವಿಳಂಬವಾದರೆ ಕಲಬುರ್ಗಿ ಜಿಲ್ಲೆಯಲ್ಲಿ ಅಷ್ಟೇ ಅಲ್ಲಾ ಇಡೀ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here