ಪೊಲೀಸರ ಬಿಗಿ ಭದ್ರತೆಯ ನಡುವೆ ಕಲಬುರಗಿ ಕೇಂದ್ರೀಯ ವಿವಿ ಮುತ್ತಿಗೆ ಯತ್ನ

0
98

ಕಲಬುರಗಿ: ಇಲ್ಲಿನ ಕಡಗಂಚಿ ಬಳಿ ಇರುವ ಕೇಂದ್ರೀಯ ವಿವಿಯಲ್ಲಿ ಕೋಮುವಾದ ಹಾಗೂ ಆರ್ ಎಸ್ ಎಸ್ ಚಟುವಟಿಕೆ ನಡೆಯುತ್ತಿವೆ ಎಂದು ಆರೋಪಿಸಿ ದಲಿತ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ವಿವಿಗೆ ಮುತ್ತಿಗೆ ಯತ್ನಿಸಲಾಯಿತು.

ವಿವಿಧ ಸಂಘಟನೆಗಳು ಪಾದಯಾತ್ರೆ ನಡೆಸುವ ಮೂಲಕ ಕಡಗಂಚಿಯಲ್ಲಿ ನ ಡಾ.ಬಿ ಆರ್ ಅಂಬೇಡ್ಕರರ ಪ್ರತಿಮೆ ಬಳಿಯಿಂದ ಬೃಹತ್ ಮೆರವಣಿಗೆ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಕೇಂದ್ರೀಯ ವಿವಿಗೆ ಆಗಮಿಸಿದ ಪ್ರತಿಭಟನಾಕಾರರು, ಕೇಂದ್ರೀಯ ವಿವಿ ಕುಲಪತಿ ಪೆÇ್ರೀ ಬಟ್ಟು ಸತ್ಯನಾರಾಯಣ ಅಟಾವೋ ಕೇಂದ್ರೀಯ ವಿವಿ ಬಚಾವೋ ಎಂದು ಮುತ್ತಿಗೆ ಹಾಕಿ ಘೋಷಣೆ ಕೂಗಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ದಲಿತ ಹಿಂದುಳಿದ, ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಎಲ್ಲವನ್ನೂ ಕೈ ಬಿಡಬೇಕು ಎಂದು ಹೆಚ್ಚರಿಕೆ ನೀಡಿದರು.ತಕ್ಷಣವೆ ಬಟ್ಟು ಸತ್ಯನಾರಾಯಣ ಅವರನ್ನು ವರ್ಗಾವಣೆ ಮಾಡಬೇಕು, ಇಲ್ಲ ಅಮಾನತ್ತು ಮಾಡುವಂತೆ ಕೂಡ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಡಿ.ಜಿ ಸಾಗರ, ಆರ್ ಕೆ ಹುಡುಗಿ, ಕೆ ನೀಲಾ, ಲಚ್ಚಪ್ಪ ಜಮಾದರ್, ಸುರೇಶ್ ಆದಿಮನಿ, ಶರಣಬಸಪ್ಪಾ ಮಮಶೇಟಿ, ಮೊಹಮ್ಮದ್ ಜಾವಿದ್, ಸೈಬಣ ಗುಡ್ಬಾ, ಆಸ್ವಿನಿ ಮದನಕ್, ವಿಕ್ರಮ್ ತೇಜಸ್, ಶರಣಬಸಪ್ಪ ಮಮಶೆಟ್ಟಿ, ಮಿನಾಕ್ಷಿ ಬಾಳೆ, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here