ಸುರಪುರ:ನಗರದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘ ದಿಂದ 81ನೇ ನಾಡ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಬುರ್ಗಿಯ ಪ್ರಾಧ್ಯಾಪಕ ಡಾ. ಕಲ್ಯಾಣರಾವ್ ಪಾಟೀಲ್ ಭಾಗವಹಿಸಿ ಮಾತನಾಡಿ,ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘ 81ನೇ ರಾಜ್ಯೋತ್ಸವ ಆಚರಿಸುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.
ಅಲ್ಲದೆ ಕನ್ನಡ ನಾಡು ನುಡಿಯ ಸಾಂಸ್ಕøತಿ ವೈಭವದ ಕುರಿತು ಮಾತನಾಡಿ,ಕನ್ನಡವೆಂದರೆ ಇದು ಬರೀ ರಾಜ್ಯವಲ್ಲ ಕುವೆಂಪು ಅವರು ಹೇಳುವಂತೆ ಇದು ಮಂತ್ರ ಕಣಾ ಶಕ್ತಿ ಕಣಾ ಎನ್ನುವುದು ಸತ್ಯವಾಗಿದೆ,ಕನ್ನಡಿಗರಲ್ಲಿನ ಹೃದಯ ವೈಶಾಲ್ಯತೆ ಹಾಗೂ ಸಂಸ್ಕಾರ ದೇಶದ ಬೇರೆ ಯಾವುದೇ ರಾಜ್ಯದವರಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ,ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸೂಗುರೇಶ ವಾರದ್, ಐಶ್ವರ್ಯ ದೇವಿಕೇರಾ ಮಾತನಾಡಿದರು,ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಪ್ರೋ ಎಮ್.ಡಿ ವಾರಿಸ್ ಕುಂಡಾಲೆ,ಸಂತೋಷ ಬಸವರಾಜಪ್ಪ ಹೆಸಗಿನಾಳ,ರಾಘವೇಂದ್ರ ಗುಳಗಿ,ಮಲ್ಲಿಕಾರ್ಜುನ ಸತ್ಯಂಪೇಟೆ,ಚಂದ್ರಕಾಂತ ಪಾಡಮುಖಿ,ಪೌರಕಾರ್ಮಿಕರಾದ ಮರೆಪ್ಪ ಝಂಡದಕೇರ,ಶಕ್ಕವ್ವ ಸೂಲಗಿತ್ತಿ,ಸಂಜಯ ರಮೇಶ ನಾಡಗೇರ ಇವರುಗಳಿಗೆ ಸನ್ಮಾನಿಸಿ ಗೌರವಿಸಿದರು.
ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸುಭಾಷ ಬೋಡಾ,ಅಬ್ದುಲ್ ಗಫೂರ ನಗನೂರಿ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃಧ್ಧಿ ಯೋಜನೆ ಬಿ.ಸಿ ಟ್ರಸ್ಟ್ ಯೋಜನಾಧಿಕಾರಿ ಸಂತೋಷ,ನ್ಯಾಯವಾದಿ ಹಣಮಂತಪ್ಪ ಗೋಗಿ,ಯಂಕಣ್ಣ ಗದ್ವಾಲ,ಅರವಿಂದ್ ಬಿಲ್ಲವ್,ಸೋಮರಾಯ ಶಖಾಪುರ,ರಮೇಶ ಶಹಾಪುರಕರ್,ಮುದ್ದಪ್ಪ ಅಪ್ಪಾಗೊಳ ಉಪಸ್ಥಿತರಿದ್ದರು.ಶಿಕ್ಷಕ ಮಹಾಂತೇಶ ಗೋನಾಲ ನಿರೂಪಿಸಿದರು,ಬಿ.ಆರ್.ಸಿ ಮಹಾದೇವಪ್ಪ ಗುತ್ತೇದಾರ ಸ್ವಾಗತಿಸಿ ವಂದಿಸಿದರು.