ನನ್ನ ದೇಶ ನನ್ನ ಮಣ್ಣು ಕಾರ್ಯಕ್ರಮ:ಮಾಜಿ ಸೈನಿಕರಿಗೆ ಸನ್ಮಾನ

0
15

ಸುರಪುರ: ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನನ್ನ ದೇಶ ನನ್ನ ಮಣ್ಣು ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಬಿ.ಎಸ್.ರಾಠೋಡ ಮಾತನಾಡಿ,ನನ್ನ ದೇಶ ನನ್ನ ಮಣ್ಣು ಒಂದು ಭಾವನಾತ್ಮಕವಾದ ಕಾರ್ಯಕ್ರಮವಾಗಿದೆ,ದೇಶದ 25 ಸಾವಿರ ಸ್ಥಳಗಳಿಂದ ಈ ರೀತಿಯಾಗಿ ಮಣ್ಣು ಸಂಗ್ರವಾಗಲಿದ್ದು,ಈ ಮಣ್ಣು ರಾಜಧಾನಿ ದೆಹಲಿಯಲ್ಲಿ ವೀರ ಸೈನಿಕರ ಸ್ಮಾರಕದ ಬಳಿ ಸ್ಮಾರಕ ವನ ನಿರ್ಮಾಣಕ್ಕೆ ಬಳಸುವ ಮೂಲಕ ಉದ್ಯಾನವನ ಇಡೀ ದೇಶದ ಮಣ್ಣಿನಿಂದ ನಿರ್ಮಾಣವಾಗಲಿದೆ ನಿಜಕ್ಕೂ ಇದು ತುಂಬಾ ಹೆಮ್ಮೆಯ ಯೋಜನೆಯಾಗಿದೆ ಎಂದರು.ಅಲ್ಲದೆ ಇಂತಹ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರನ್ನು ಆಹ್ವಾನಿಸಿ ಸನ್ಮಾನಿಸಿರುವುದು ತುಂಬಾ ಅಭಿಮಾನ ಮೂಡಿಸಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಮಾತನಾಡಿ,ಇದೊಂದು ದೇಶಭಿಮಾನ ಮೂಡಿಸುವ ಕಾರ್ಯಕ್ರಮವಾಗಿದೆ,ಇಂದಿನ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು ಭಾಗವಹಿಸಿದ್ದು ಕಾರ್ಯಕ್ರಮದ ಮೆರಗು ಹೆಚ್ಚಿಸಿದೆ,ಇಂದು ತಾವೆಲ್ಲರು ಪ್ರತಿ ಗ್ರಾಮಗಳಿಂದ ಸಂಗ್ರಹಿಸಿ ತಂದಿರುವ ಮಣ್ಣನ್ನು ತಾಲೂಕಿನಿಂದ ಜಿಲ್ಲೆಗೆ ಕಳುಹಿಸಿ,ಜಿಲ್ಲೆಯಿಂದ ರಾಜ್ಯಕ್ಕೆ ನಂತರ ದೇಶದ ರಾಜಧಾನಿಗೆ ತಲುಪಲಿದೆ ಎಂದರು.ತಾವೆಲ್ಲರು ನಮ್ಮ ಕರೆಗೆ ಓಗೊಟ್ಟು ಮಣ್ಣನ್ನು ಸಂಗ್ರಹಣೆ ಮಾಡಿಕೊಂಡು ಬಂದಿರುವುದು ತುಂಬಾ ಸಂತೋಷ ಮೂಡಿಸಿದೆ,ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದರು.

ಇದೇ ಸಂದರ್ಭದಲ್ಲಿ ಎಲ್ಲರಿಗೂ ದೇಶ ಸೇವೆಗೆ ಮುಂದಾಗುವ ಕುರಿತು ಪ್ರಮಾಣ ವಚನ ಬೋಧಿಸಲಾಯಿತು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕರಾದ ತಿಪ್ಪಣ್ಣ ಬಾದ್ಯಾಪುರ,ಭೀಮಪ್ಪ ಲಕ್ಷ್ಮೀಪುರ,ವಿಶ್ವನಾಥ ಸುರಪುರ,ನಿಂಗಣ್ಣಗೌಡ ಬಾದ್ಯಾಪುರ,ಹಣಮಂತ್ರಾಯ ಹೆಮನೂರ,ಮಲ್ಲೇಶಿ ರುಕ್ಮಾಪುರ ಇವರುಗಳನ್ನು ಸನ್ಮಾನಿಸಿ ಗೌರವಿಸಿದರು.

ಇದಕ್ಕೂ ಮುನ್ನ ನಗರದ ಹುತಾತ್ಮ ಯೋಧ ಶರಣಬಸವ ಕೆಂಗುರಿ ಪುತ್ಥಳಿಯಿಂದ ತಾ.ಪಂ ಸಭಾಂಗಣದವರೆಗೆ ಮಹಿಳೆಯರಿಂದ ಮಣ್ಣು ಮತ್ತು ಅಕ್ಕಿ ತುಂಬಿದ ಕುಂಭಗಳ ಹೊತ್ತ ಮಹಿಳೆಯರಿಂದ ಮೆರವಣಿಗೆ ನಡೆಸಲಾಯಿತು.ತಾ.ಪಂ ಕಚೇರಿ ಆವರಣದಲ್ಲಿ ಮಹಿಳಾ ಸಂಘಗಳಿಂದ ಕೌಶಲ್ಯಭೀವೃದ್ಧಿ ಯೋಜನೆಯಡಿ ತಯಾರಿಸಿದ ವಸ್ತುಗಳ ಪ್ರದರ್ಶನವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ತಹಸೀಲ್ದಾರ್ ಕೆ.ವಿಜಯಕುಮಾರ್ ಮಾತನಾಡಿದರು,ಪಿಡಿಓ ವಿಜಯಚಾರ್ಯ ಪುರೋಹಿತ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಅನೇಕ ಜನ ಪಿಡಿಓಗಳು ಹಾಗೂ ತಾ.ಪಂ ಸಿಬ್ಬಂದಿಗಳು ಮತ್ತು ಮಹಿಳೆಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here