ಕಲಬುರಗಿ: ಅಂಗವಿಕಲರ ಆರೈಕೆದಾರರ ದಿನಾಚರಣೆ ನಿಮಿತ್ತ ಶನಿವಾರ ವಾಕ್ ತರಬೇತಿ ಕೇಂದ್ರದಲ್ಲಿ ಆರೈಕೆದಾರರ ದಿನಾಚರಣೆ ಅಂಗವಿಕಲರ ಕಲ್ಯಾಣಾಧಿಕಾರಿ ಸಾಧಿಕ್ ಹುಸೈನ್ ಖಾನ್ ಅವರ ನೇತೃತ್ವದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿ ವರ್ಷ ಅಂಗವಿಕಲ ಮಕ್ಕಳ ಆರೈಕೆ ದಿನಾಚರಣೆ ಮಹತ್ವದಾಗಿದೆ. ಮುಂದಿನ ದಿನಗಳಲ್ಲಿ ಅಂಗವಿಕಲ ಮಕ್ಕಳ ಆರೈಕೆದಾರರ (ತಾಯಂದಿರಿಗೆ) ಆರೈಕೆದಾರರ ಪೋಷಣೆ ಭತ್ಯೆ, ಮಕ್ಕಳ ತಾಯಂದಿರಿಗೆ ಒಂದು ದ್ವಿಚಕ್ರ ವಾಹನ ಇನ್ನು ಹಲವು ಸೌಲಭ್ಯಳನ್ನು ಒದಗಿಸಲು ಮತ್ತು ಪೋಷಕರ ಆರೈಕೆ ತೊಡಕುಗಳು ನಿವಾರಿಸಲು ಆರೈಕೆದಾರರ ದಿನಾಚರಣೆ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ, ವಾಕ ತರಬೇತಿ ಕೇಂದ್ರ ಮುಖ್ಯಸ್ಥರು, ಜಿಲ್ಲಾ APD ಸಂಸ್ಥೆ, ಜಿಲ್ಲಾ RPD ಟಾಸ್ಕ್ ಫೋರ್ಸ್, ಜಿಲ್ಲೆಯ ಎಲ್ಲಾ MRW , ಅಂಗವಿಕಲರು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.