ಕಲಬುರಗಿ: ಸಪ್ತ ನೇಕಾರ ಸೇವಾ ಕೇಂದ್ರದಲ್ಲಿ 50 ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ವಿಶೇಷ ಉಪನ್ಯಾಸ ಜರುಗಿತು.
ಇಲ್ಲಿನ ನೇಕಾರ ಸೇವಾ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶೇಷ ಗೌರವ ಉಪನ್ಯಾಸಕರಾಗಿ ಆಗಮಿಸಿದ ಪ್ರೋ. ಬಸವರಾಜ ಭಾವಿ ಮಾತನಾಡುತ್ತ ಜಗತ್ತಿನ ಮಾನವ ಕುಲಕೋಟಿಗೆ ವಸ್ತ್ರನೀಡಿದ ದೇವಲ ಮಹರ್ಷಿ ನಂತರ ನಮ್ಮ ಹೆಮ್ಮೆಯ ಧರ್ಮ ಗುರು ದಾಸಿಮಯ್ಯ, 11 ನೇ ಶತಮಾನದ ವಿಶ್ವ ಮಾನ್ಯ ಶರಣ, ಕನ್ನಡದಲ್ಲಿ ವಚನ ಸಾಹಿತ್ಯ ನೀಡಿದ ಆದ್ಯ ವಚನಕಾರರು, ನಮ್ಮ ಅಸ್ಮಿತೆ ಮರೆತ ಕಾರಣ ಹಿಂದುಳಿದ ವರ್ಗಗಳಿಗೆ ಸೀಮಿತವಾಗಿ ಇಟ್ಟು, ನಮ್ಮನು ಎಲ್ಲಾ ಕ್ಷೇತ್ರದಲ್ಲಿ ಅನ್ಯಾಯ ಮಾಡುತ್ತ ಬರಲಾಗುತ್ತಿದೆ ಎಂದರು.
ರೈತ ಅನ್ನದಾತ ನಾದರೆ ನೇಕಾರ ವಸ್ತ್ರದಾತ, ಮನುಷ್ಯ ಮೊದಲು ಮಾನ ಮರ್ಯಾದೆ ಮುಚ್ಚಿಕೊಂಡ ನಂತರ ಊಟ ಬಯಸುತ್ತಾನೆ, ಅದಕ್ಕೆ ನೇಕಾರನೇ ಶ್ರೇಷ್ಠ ಎಂದು ತಿಳಿಸಿದರು.
ಮೊದಲಿಗೆ, ನ್ಯಾಯವಾದಿ ವಿನೋದ ಕುಮಾರ ಜೇನವೆರಿ ಎಲ್ಲರಿಗೂ ಸ್ವಾಗತಿಸಿದರು, ರಾಜ್ಯೋತ್ಸವ ಪ್ರಯುಕ್ತ ಹಿರಿಯ ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ, ಕನ್ನಡ ಗೀತೆಯಾದ, ಸಿದ್ದಯ್ಯ ಪುರಾಣಿಕ ಬರೆದ, ಹೊತ್ತಿತು ಹೊತ್ತಿತ್ತು ಕನ್ನಡದ ದೀಪ ಹಾಡು ಹಾಡಿ ಕಾರ್ಯಕ್ರಮ ಪ್ರಾರಂಭವಾಯಿತು. ಕುರಹಿನಶೆಟ್ಟಿ ಸಮಾಜದ ಮ್ಯಾಳಗಿ ಚಂದ್ರಶೇಖರ್ ಉಪನ್ಯಾಸಕರಿಗೆ ಕನ್ನಡದ ಶಾಲು ಹೊದಿಸಿ ಗೌರವಿಸಿದರು. ನಂತರ ತೊಗಟವೀರ ಸಮಾಜದ ಶ್ರೀನಿವಾಸ ಬಲಪೂರ್ ಕನ್ನಡದ ಆದ್ಯ ವಚನಕಾರ ದಾಸಿಮಯ್ಯ ಮತ್ತು ವಚನ ಸಾಹಿತ್ಯದ ಪಿತಾಮಹ ಫ.ಗು.ಹಳಕಟ್ಟಿ ಯವರ ಭಾವಚಿತ್ರ ನೀಡಿದರು.
ಕಾರ್ಯಕ್ರಮದಲ್ಲಿ ಸಂತೋಷ ಗುರುಮಿಟ್ಟಕಲ, ಜೋಳದ ಲಕ್ಷಿಕಾಂತ್, ತ್ರಿವೇದಿ ವಿಜಯಕುಮಾರ, ಸಂತೋಷ ಲಖಮಣ ಕಲಬುರಗಿಯ ಡಾ. ರಾಜಕುಮಾರ ಸದೃಪಿ ಹಾಗೂ ಅಭಿಮಾನಿ ಮುನ್ನೋಳ್ಳಿ, ಕಾರ್ಯಕ್ರಮದ ದಾಸೋಹಿ ರಾಜಗೋಪಾಲ ಭಂಡಾರಿ ಇತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಹಿರಿಯ ಸದಸ್ಯರಾದ ಬಸವರಾಜ ವದಗಾ, ರವರು ವಂದಿಸಿದರು. ಶಿಕ್ಷಕ ಕುಶಲ ಯಡವಳ್ಳಿ ಕಾರ್ಯಕ್ರಮ ನಿರೂಪಿಸಿದರು.