ಬೆಂಗಳೂರು; ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸಲು ಒಬ್ಬ ಅರ್ಹ ಪಶುವೈದ್ಯರು (Preferably Masters in clinical Discipline / Subjects) ಹಾಗೂ ಪಶುವೈದ್ಯಕೀಯ ಸಹಾಯಕರ (Diploma in Animal Husbandary) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳು ಸಂಪೂರ್ಣವಾಗಿ ಗುತ್ತಿಗೆ ಆಧಾರದಲ್ಲಿದ್ದು, ಪಶುವೈದ್ಯರಿಗೆ ರೂ. 50,000/- ಹಾಗೂ ಪಶುವೈದ್ಯಕೀಯ ಸಹಾಯಕರಿಗೆ ರೂ. 20,000/- ಮಾಸಿಕ ಸಂಭಾವನೆಯನ್ನು ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಅರ್ಜಿಯೊಂದಿಗೆ ರೆಸ್ಯೂಮ್ / ಸಿವಿಯನ್ನು ನವೆಂಬರ್ 10 ಸಂಜೆ 5.30 ಗಂಟೆಯೊಳಗೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರ ಕಛೇರಿ, ಶ್ರೀ ಚಾಮರಾಜೇಂದ್ರ ಮೃಗಾಲಯ, ಇಂದಿರಾನಗರ, ಮೈಸೂರು- 570010 ಇಲ್ಲಿಗೆ ಅಂಚೆಯ ಮೂಲಕ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ಸಂದರ್ಶನ ನಡೆಸಲಾಗುವುದು ಎಂದು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.