ಶರಣಬಸವೇಶ್ವರ ಕಲಾ ಮಹಾವಿದ್ಯಾಲಯಕ್ಕೆ ಎ + ಮಾನ್ಯತೆ

0
23
  • 3.39 ಸಿಜಿಪಿ ಅಂಕ ನೀಡಿದ ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿ

ಕಲಬುರಗಿ: ನಗರದ ಪ್ರತಿಷ್ಠಿತ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯಕ್ಕೆ ನ್ಯಾಕ್ ಸಮಿತಿ ಎ + ಮಾನ್ಯತೆ (ಗ್ರೇಡ್) ನೀಡಿದೆÉ ಎಂದು ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ತಿಳಿಸಿದರು.

ನ್ಯಾಕ್ ತಂಡದ ಅಧ್ಯಕ್ಷ ಡಾ. ಜೋಗೇಶ ಕಾಕತಿ, ಸಂಯೋಜಕ ಶಾಂತನು ಕುಮಾರ, ಸದಸ್ಯ ರಮಣಲಾಲ್ ಈ ಮೂರು ಜನರನ್ನು ಒಳಗೊಂಡ ತಂಡವು ಕಳೆದ ವಾರ ಕಾಲೇಜಿಗೆ ಭೇಟಿ ನೀಡಿ ಎರಡು ದಿನಗಳ ಕಾಲ ಮಹಾವಿದ್ಯಾಲಯದ ವಿವಿಧ ವಿಭಾಗಗಳ ಮೌಲ್ಯಾಂಕನ ಮಾಡಿ ಫಲಿತಾಂಶವನ್ನು ಈ ಫಲಿಮಾಂಶ ನೀಡಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಇಂದಿನ ಕಾಲದಲ್ಲಿ ಕಲಾ ವಿಭಾಗಕ್ಕೆ ವಿದ್ಯಾರ್ಥಿಗಳು ಅಡ್ಮಿಷನ್ ಮಾಡುವುದೇ ಕಡಿಮೆಯಾಗಿದ್ದರೂ ನಮ್ಮ ಸಂಸ್ಥೆಯಲ್ಲಿನ ಪ್ರಾಯೋಗಿಕ ಶಿಕ್ಷಣ ಪದ್ಧತಿಯಿಂದಾಗಿ ಕಾಲೇಜು ಈ ಹಂತಕ್ಕೆ ಬರಲು ಸಾಧ್ಯವಾಗಿದೆ. ಶರ ಣಬಸವೇರ್ಶವರ ಸಂಸ್ಥಾನದ ಮಹಾದಾಸೋಹ ಪೀಠದ 9ನೇ ಪೀಠಾಧಿಪತಿಗಳು ಹಾಗೂ ಸಂಘದ ಅಧ್ಯಕ್ಷರಾದ ಡಾ. ಶರಣಬಸವಪ್ಪ ಅಪ್ಪ ಹಾಗೂ ಚೇರ್ ಪರ್ಸ್‍ನ್ ಮಾತೋಶ್ರೀ ದಾಕ್ಷಾಯಿಣಿ ಎಸ್ ಅಪ್ಪ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹವೇ ಕಾರಣ ಎಂದು ಹೇಳಿದರು.

ಈ ಹಿಂದೆ ಸರ್ಕಾರಿ ಮಹಾವಿದ್ಯಾಲಯ ಬಿಟ್ಟರೆ ವಿದ್ಯಾವರ್ಧಕ ಸಂಘದ ಶರಣಬಸವೇರ್ಶವರ ಕಲಾ ಕಾಲೇಜು ಮಾತ್ರ ಇತ್ತು. ಪೂಜ್ಯ ಅಪ್ಪ ಅವರ ದೂರದೃಷ್ಠಿ ಎನ್ನುವಂತೆ ಬೃಹತ್ತಾದ ಗ್ರಂಥಾಲಯ ಹಾಗೂ ಅಷ್ಟೇ ಸಂಖ್ಯೆಯ ಗ್ರಂಥಗಳು ಇರುವುದನ್ನು ನೋಡಿ ನ್ಯಾಕ್ ಸಮಿತಿ ಸದಸ್ಯರು ಮೆಚ್ಚುಗೆ ಸೂಚಿಸಿದರು ಎಂದು ಅವರು ವಿವರಿಸಿದರು.

ಮಹಾವಿದ್ಯಾಲಯ ಪ್ರಾಚಾರ್ಯರಾದ ಡಾ. ಸುರೇಶ್ ಕುಮಾರ್ ನಂದಗಾವ್ ಮಾತನಾಡಿ, ಕಾಲೇಜಿನ ನ್ಯಾಕ್ ಸಂಯೋಜಕಿ ಪೆÇ್ರ. ಶರಣಮ್ಮ ವಾರದ ಮತ್ತು ಐಕ್ಯೂಎಸಿ ಸಂಯೋಜಕಿ ಡಾ. ಸಂಗೀತಾ ಪಾಟೀಲ ಎಲ್ಲಾ ವಿಭಾಗದ ಮುಖ್ಯಸ್ಥರು ಬೋಧಕ ಮತ್ತು ಬೋಧಕೇತರ ವರ್ಗದವರ ನಿರಂತರ ಪರಿಶ್ರಮ ಮತ್ತು ಪೂಜ್ಯ ಡಾ. ಅಪ್ಪಾಜಿ ಮತ್ತು ಅವ್ವಾಜಿ ಹಾಗೂ ಬಸವರಾಜ ದೇಶಮುಖ ಅವರ ಸಹಕಾರದಿಂದ ಈ ಸಾಧನೆಯನ್ನು ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.

ಪ್ರಾಚಾರ್ಯರ ಜೊತೆ ಎರಡು ದಿನಗಳ ಕಾಲ ಮೌಲ್ಯಾಂಕನ ಮಾಡುವ ವಿವಿಧ ವಿಭಾಗಗಳ ಕ್ರಮಾನುಗತ ವೇಳಾಪಟ್ಟಿಯನ್ನು ಚರ್ಚಿಸಿ ಅವರು ನಿಗದಿ ಪಡಿಸಿದಂತೆ ವೇಳಾಪಟ್ಟಿಗೆ ಅನುಗುಣವಾಗಿ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ಎಲ್ಲಾ ಪ್ರಕ್ರಿಯೆಗಳನ್ನು ಗಮನಿಸಿದ ನ್ಯಾಕ್ ತಂಡ ನಮ್ಮ ಕಾಲೇಜಿಗೆ ಎ+ ಗ್ರೇಡ್ ನೀಡಿದೆ. ಮೇಲಾಗಿ 3.39 ಸಿಜಿಪಿ ಅಂಕ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಶಾಸಕ ಬಿ.ಆರ್. ಪಾಟೀಲ್, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಅಪ್ಪ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಶಂಕರಗೌಡ ಹೊಸಮನಿ, ಕೆ.ಎಸ್. ಮಾಲಿ ಪಾಟೀಲ್, ಶರಣಬಸಪ್ಪ ನಿಷ್ಠಿ ಮುಂತಾದವರ ಜೊತೆ ಸಮಾಲೋಚನೆ ನಡೆಸಿದ ನ್ಯಾಕ್ ಕಮೀಟಿ ಮಹಾವಿದ್ಯಾಲಯದ ಚಟುವಟಿಕೆ ಗಮನಿಸಿ ಹರ್ಷ ವ್ಯಕ್ತಪಡಿಸಿತು ಎಂದು ತಿಳಿಸಿದರು.

ಕಾರ್ಯಾಲಯದ ಮುಖ್ಯಸ್ಥರ ಜೊತೆ ಸಮಾಲೋಚನೆ ಸಭೆಯನ್ನು ನಡೆಸಿ ಎಲ್ಲಾ ದಾಖಲೆಗಳನ್ನು ವೀಕ್ಷಿಸಿದ ನ್ಯಾಕ್ ಸ್ಟೇರಿಂಗ್ ಕಮಿಟಿ ಆಡಳಿತ ಮಂಡಳಿಯ ಜೊತೆ ಮಹಾವಿದ್ಯಾಲಯದ ಪ್ರಗತಿಪರ ಚಟುವಟಿಕೆಗಳನ್ನು ಕುರಿತು
ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಸಭೆಯಲ್ಲಿ ಆಡಳಿತ ಮಂಡಳಿಯ ಸಹಕಾರ ಮತ್ತು
ಪೆÇ್ರೀತ್ಸಾಹವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು.

ಡಾ. ಶರಣಬಸವ ಅಪ್ಪ, ಡಾ. ದಾಕ್ಷಾಯಿಣಿ ಎಸ್. ಅಪ್ಪ, ಕುಲಪತಿ ಡಾ. ನಿರಂಜನ ನಿಷ್ಠಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here