ಸುರಪುರ: ತಹಸೀಲ್ದಾರ್ ಕಚೇರಿಯಲ್ಲಿ ಇ-ಕಚೇರಿ ಉದ್ಘಾಟನೆ

0
20
  • ಸರಕಾರ ಚುರುಕಾಗಿ ಕೆಲಸ ಮಾಡಲು ಇ-ಕಚೇರಿ ವ್ಯವಸ್ಥೆ ಜಾರಿ

ಸುರಪುರ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸರಕಾರ ನೂತನವಾಗಿ ಜಾರಿಗೊಳಿಸಿರುವ ಇ-ಕಚೇರಿ ಉದ್ಘಾಟನಾ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ರಾಜಾ ವೆಂಕಟಪ್ಪ ನಾಯಕ ಇ-ಕಚೇರಿ ಉದ್ಘಾಟಿಸಿ ಮಾತನಾಡಿ,ಸಾರ್ವಜನಿಕರಿಗೆ ಪಾರದರ್ಶಕ ಮತ್ತು ಸಮಯಕ್ಕೆ ಅನುಗುಣವಾಗಿ ಸೇವೆಗಳನ್ನು ಒದಗಿಸುವುದರೊಂದಿಗೆ ಸರಕಾರವು ಚುರುಕಾಗಿ ಕೆಲಸ ಮಾಡಲು ಇ-ಕಚೇರಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು ಇದು ತುಂಬಾ ಸಹಕಾರಿಯಾಗಿದೆ ಎಂದರು.ಇ-ಕಚೇರಿಯ ಕಂಪ್ಯೂಟರ್ ಆನಲೈನ್‍ನಲ್ಲಿ ಸಾರ್ವಜನಿಕರು ಕೊಟ್ಟ ಅರ್ಜಿಗಳು ದಾಖಲೆಯಾಗುತ್ತವೆ. ನಂತರ ವಿಲೇವಾರಿ ಬಹಳ ಸುಲಭವಾಗಿ ನಾಗರಿಕರಿಗೆ ಅನುಕೂಲವಾಗುತ್ತದೆ. ಪ್ರತಿಯೊಬ್ಬರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

Contact Your\'s Advertisement; 9902492681

ತಹಸೀಲ್ದಾರ್ ಕೆ.ವಿಜಯಕುಮಾರ ಮಾತನಾಡಿ, ಇ-ಕಚೇರಿ ವ್ಯವಸ್ಥೆ ತುಂಬಾ ಚೆನ್ನಾಗಿದೆ. ಈ ವ್ಯವಸ್ಥೆಯು ಸಾಮಾನ್ಯ ನಾಗರಿಕರ ಕೆಲಸವನ್ನು ವೇಗಗೊಳಿಸುತ್ತದೆ. ಕಡತಗಳನ್ನು ಸರಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಜನಗಳ ಸಮಯ ಮತ್ತು ಹಣವನ್ನು ಉಳಿಸಲು ಪ್ರಯೋಜನಕಾರಿಯಾಗಿದೆ. ಈಗಾಗಲೇ 87 ಅರ್ಜಿಗಳು ನೋಂದಣಿಯಾಗಿವೆ. ಇ-ಕಚೇರಿ ಸೇವೆಯಲ್ಲಿ ನಮ್ಮ ತಾಲೂಕು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಪ್ರಥಮ ಸ್ಥಾನದಲ್ಲಿ ಬರುವ ನಿಟ್ಟಿನಲ್ಲಿ ಸೇವೆ ನೀಡುವುದಾಗಿ ಭರವಸೆ ನೀಡಿದರು.

ತಾಲೂಕು ಪಂಚಾಯಿತಿ ಇಒ ಬಸವರಾಜ ಸಜ್ಜನ್, ಗ್ರೇಡ್-2 ತಹಸೀಲ್ದಾರ್ ಮಲ್ಲಯ್ಯ ದಂಡು, ಪ್ರಮುಖರಾದ ವಿಠ್ಠಲ ಯಾದವ, ಮಲ್ಲಣ್ಣ ಸಾಹುಕರ ಮುಧೋಳ, ಸುರಪುರ ಬ್ಲಾಕ್ ಕಾಂಗೈ ಅಧ್ಯಕ್ಷ ನಿಂಗರಾಜ್ ಬಾಚಿಮಟ್ಟಿ, ಭಂಡಾರಿ ನಾಟೇಕರ್, ಭೀಮು ನಾಯಕ ಮಲ್ಲಿಭಾವಿ, ಕಂದಾಯ ಇಲಾಖೆಂiÀ ಚನ್ನಬಸವ, ರವಿನಾಯಕ ಬೆನಕನಹಳ್ಳಿ, ಭೀಮು ಯಾದವ ಮಂಗಳೂರು ಸೇರಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here