- ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ
- ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್ ಆದ್ಮೇಲೆ ನರೇಂದ್ರ ಮೋದಿ ರಾಜೀನಾಮೆ ಕೊಟ್ಟಿದ್ರಾ?
- ಈಗಿನ ಕೇಂದ್ರ ಸಚಿವರಾದ ಅಮೀತ್ ಷಾ, ಎಚ್‌ಡಿಕೆ, ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೊಟ್ಟಿದ್ದಾರಾ?
- ಎಫ್‌ಐಆರ್ ಆದವ್ರೆಲ್ಲಾ ತನಿಖೆಗೂ ಮುನ್ನ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ
ಕಲಬುರಗಿ; ಮುಡಾ ಹಗರಣ ಮುಂದಿಟ್ಟುಕೊಂಡು ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷರು, ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಧರ್ಮಸಿಂಗ್ ಟಾಂಗ್ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಡಾ. ಅಜಯ್ ಸಿಂಗ್, ಹಿಂದೆ ಗೋಧ್ರಾ ಪ್ರಕರಣದಲ್ಲಿ ಎಫ್‌ಐಆರ್ ಆಗಿದ್ದಾಗ ನರೇಂದ್ರ ಮೋದಿ ರಾಜೀನಾಮೆ ಕೊಟ್ಟಿದ್ರಾ? ಎಂದು ಪ್ರಸ್ನಿಸುವ ಮೂಲಕ ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ.
ಎಫ್‌ಐಆರ್ ಆದಮೇಲೂ ಮೋದಿ ರಾಜೀನಾಮೆ ಕೊಟ್ಟಿರಲಿಲ್ಲ, ಇದೀಗ ಕೇಂದ್ರದಲ್ಲಿ ಸಚಿವರಾಗಿರುವ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್, ಎಚ್‌ಡಿ ಕುಮಾರಸ್ವಾಮಿ ಇವರ್ಯಾರೂ ರಾಜೀನಾಮೆ ಕೊಟ್ಟಿಲ್ಲ. ಸಿಎಂ ಯಾಕೆ ರಾಜೀನಾಮೆ ಕೊಡಬೇಕು. ವಿಷಯದ ತನಿಖೆಯಾಗಲಿ, ಸತ್ಯಾಸತ್ಯತೆ ಹೊರಬರಲಿ, ಬಿಜೆಪಿ ವಿನಾಕಾರಣ ಇದನ್ನೇ ದಡ್ಡದು ಮಾಡುತ್ತ ರಾಜೀನಾಮೆಗೆ ಆಗ್ರಹಿಸುತ್ತಿದೆ, ಬಿಜೆಪಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಿವಿಮಾತು ಹೇಳಿದ್ದಾರೆ.
ಬಿಜೆಪಿ ನೇತ್ವದ ಕೇಂದ್ರ ಸರ್ಕಾರದಲ್ಲಿ ಆರೋಪ ಇರೋರೆಲ್ಲರೂ ರಾಜೀನಾಮೆ ಕೊಟ್ರೆ ಅರ್ಧ ಕ್ಯಾಬಿನೆಟ್ಟೇ ಖಾಲಿಯಾಗುತ್ತದೆ, ಬಿಜೆಪಿ ಇಂತಹ ವಿಷಯಗಳಲ್ಲಿ ರಾಜಕೀಯ ಮಾಡಬಾರದು. ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.ಎಚ್‌ಡಿ ಕುಮಾರಸ್ವಾಮಿ ಮೇಲೂ ಆರೋಪಗಳಿವೆ,. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಲೂ ಆರೋಪಗಳಿವೆ. ಇವರು ರಾಜೀನಾಮೆ ಕೊಟ್ರಾ? ಎಂದು ಡಾ. ಅಜಯ್ ಸಿಂಗ್ ಆಕ್ರೋಶ ಹೊರಹಾಕಿದ್ದಾರೆ.
ಎಫ್‌ಐಆರ್ ಆದ್ಮೇಲೆ ತನಿಖೆ ಆಗಬೇಕಲ್ಲ, ತನಿಖೆ ಆಗುವ ಮುನ್ನವೇ ರಾಜೀನಾಮೆ ಅಂತ ಬಿಡೆಪಿಯವರು ಆಗ್ರಹಿಸ ರೀತಿಯಲ್ಲೇ ನಡೆದರೆ ಕೇಂದ್ರದ ಕ್ಯಾಬಿನೆಟ್ಟೇ ಖಾಲಿಯಾಗಲಿದೆ ಎಂದು ಲೇವಡಿ ಮಾಡಿದರು. ಬಿಜೆಪಿ ತನ್ನ ಬಳಿಯೇ ಇಂತಹದ್ದನ್ನೆಲ್ಲ ಇಟ್ಟುಕೊಂಡು ಸಿಎಂ ಬಗ್ಗೆ ಮಾತನಾಡುತ್ತ ರಾಜೀನಾಮೆ ಒತ್ತಡ ಹಾಕುತ್ತಿರೋದು ಸರ್ವಥಾ ಸರಿಯಲ್ಲ ಎಂದು ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ. ಆದಾಗ್ಯೂ ಕೆಲವರು ಅರ್ಜಿ ಹಾಕಿ ಆರೋಪ ಮಾಡಿದ್ದಾರೆ. ತನಿಖೆಯಾಗಲಿ, ಸತ್ಯಾಸತ್ಯತೆ ಹೊರಬರಲಿ. ಅದಕ್ಕೂ ಮುನ್ನವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲವೆಂದು ಡಾ. ಅಜಯ್ ಸಿಂಗ್ ಪ್ರತಿಪಾದಿಸಿದ್ದಾರೆ.