ಕಲಬುರಗಿ: ಕನ್ನಡ ಭಾಷೆ,ಸಾಹಿತ್ಯ,ಸಂ ಸ್ಕೃತಿ,ಕಲೆ, ಸಾಂಸ್ಕೃತಿಕ.ಪರಂಪರೆ ಅಗಾಧವಾದುದು. ಪ್ರಾಚೀನ ಕಾಲದಿಂದ ಇಂದಿನವರೆಗೂ ಕನ್ನಡ ಬೆಳೆಯುತ್ತಲಿದೆ .ಸ್ವತಂತ್ರವಾದಾಗ ಮೈಸೂರು ಕರ್ನಾಟಕ ರಾಜ್ಯವೆಂದು ನಾಮಕರಣವಾದಾಗ ಉತ್ತರ ಕರ್ನಾಟಕದ ಜನ ಏಕೀ ಕರಣಕ್ಕಾಗಿ ಹೋರಾಟ ಮಾಡಿ ಅಖಂಡ ಕರ್ನಾಟಕವಾ ಯಿತು.ಕರ್ನಾಟಕ ಪದ ಬಳ ಕೆಯಾಗಿ ೫೦ ವರ್ಷದ ಸುವ ರ್ಣ ಸಂಭ್ರಮದ ಆಚರಣೆಯಲ್ಲಿದೆ.
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡೆಂದ ಹುಯಿಲಗೋಳರು, ಹೊತ್ತಿತೋ ಕನ್ನಡ ದೀಪವೆಂದು ಕಾವ್ಯಾನಂದರು,ಹಚ್ಚೇವು ಕನ್ನಡ ದೀಪವೆಂದು ಕರ್ಕಿ ಬೆಳಗಿದರು.ಕುವೆಂಪು ಬಾರಿಸು ಕನ್ನಡ ಡಿಂ ಡಿಮವೆಂದರೆ ಕಣವಿಯವರು ಹೆಸರಾಗಲಿ ಕನ್ನಡ ಉಸಿರಾಗಲಿ ಕನ್ನಡ ಎಂದು ಮೊಳಗಿಸಿದ ಕನ್ನಡ ಕವನಗಳು ಜನರಲ್ಲಿ ಕನ್ನಡಾಭಿಮಾನ ಉಂಟಾದವು ಹೀಗಾಗಿ ಕನ್ನಡ ಇಂದು ಅನ್ನದ ಭಾಷೆಯಾಗಬೇಕಾದ ಅವಶ್ಯಕತೆ ಇದೆ ಎಂದು ಹಿರಿಯ ಸಾಹಿತಿ ಚಿಂತಕ ಡಾ.ಗವಿಸಿದ್ಧಪ್ಪ ಪಾಟೀಲ ನುಡಿದರು.
ಕರ್ನಾಟಕ ಜಾನಪದ ಪರಿ ಷತ್ತು ಜಿಲ್ಲಾ ಕಲಬುರಗಿ ಹಾ ಗೂ ಸರಕಾರಿ ಕನ್ಯಾ ಪ್ರೌಢ ಶಾಲೆ ಅವರ ಸಹಯೋಗ ದೊಂದಿಗೆ ಶ್ರೀಮತಿ ಶಾಂತಾ ಪಸ್ತಾಪೂರ ಇವರು ರಚಿಸಿದ “ಕಾವ್ಯ ಪ್ರಪಂಚ”ಕೃತಿ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡುತ್ತ, ಹಿರಿಯ ಸಾಹಿತಿ ಶಾಂತಾ ಪಸ್ತಾಪೂರ ಅವರು ಕನ್ನಡ ಪ್ರೇಮದಿಂದ ಕಾವ್ಯ ಪ್ರಪಂಚ ಕೃತಿ ನೀಡಿದ್ದು ಕನ್ನಡಿಗರ ಹೃದಯ ಪ್ರಪಂಚಕ್ಕೆ ನಾಂದಿ ಹಾಡಿದೆ ಎಂದರು.
ಹೈದರಾಬಾದ್ ಕರ್ನಾಟಕ ಇಂದು ಕಲ್ಯಾಣ ಕರ್ನಾಟಕವಾಗಿದೆ ಇದೇ ಪ್ರ ದೇಶವು ಕನ್ನಡ ಸಾಹಿತ್ಯದ ಪ್ರಾರಂಭದ ಕವಿರಾಜಮಾ ರ್ಗ,ಆರಾಧನಾ ಕರ್ಣಾಟೀ ಕೆ,ವಡ್ಡಾರಾಧನೆ,ವಚನ,ದಾಸ ಸಾಹಿತ್ಯ ಹುಟ್ಟಿಗೆ ಕಾರಣ ವಾಯಿತು.ಸ್ವರ ವಚನ,ತತ್ವ ಪದ,ಪುರಾಣ ಮಹಾಕಾವ್ಯ, ಜನಪದ ಹಾಗೂ ಶಿಷ್ಟ ಮ ಹಾಕಾವ್ಯ ರಚನೆ ಆದಂತೆ ಆ ಧುನಿಕ ಕಾವ್ಯಗಳಾದ ವಚನ ಚುಟುಕು,ಸಾನೇಟ್ ಮಕ್ಕಳ ಸಾಹಿತ್ಯ,ಶಾಹಿರಿ ದೋಹೆ, ಹಾಯಿಕು,ಗಜಲ್,ತಾಂಕಾ, ರುಬಾಯಿ,ಮುಕ್ತಕದಂತ ಕಾವ್ಯ ಪ್ರಯೋಗವಾದುದು ನಮ್ಮನೆಲದಿಂದ ಕನ್ನಡ ಕೇವಲ ಮೂರು ಅಕ್ಷರವಲ್ಲ ಅದು ನಮ್ಮ ಜೀವನ ವಿಧಾನವಾಗಿದೆ ಎಂದು ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡದ ಕುರಿತು ಸಾಹಿತಿ ಡಾ. ಗವಿಸಿದ್ಧಪ್ಪ ಪಾಟೀಲ ಮಾತ ನಾಡಿದರು.
ಕಾರ್ಯಕ್ರಮವನ್ನುಸಸಿಗೆ ನೀರೆರೆವ ಮೂಲಕ ಉದ್ಘಾಟಿಸಿದ ಶ್ರೀ ಎ.ಕೆ.ರಾಮೇಶ್ವರ,ನಂತರ ಕಾವ್ಯ ಪ್ರಪಂಚ ಕೃತಿಯನ್ನು ಸಿ.ಎಸ್ ಮಾಲಿಪಾಟೀಲ ಬಿಡುಗಡೆ ಮಾಡಿದರು. ಅಧ್ಯಕ್ಷತೆಯನ್ನು ಉಪ ಪ್ರಾಚಾರ್ಯರಾದ ವಿಜಯ ಕುಮಾರಬೆಳಮಗಿ ವಹಿಸಿದ್ಧರು. ಶಿಕ್ಷಕಿ ಕವಯಿತ್ರಿ ರೇಣುಕಾ ಡಾಂಗೆ ಕೃತಿ ಪರಿಚಯಿಸಿದರು.
ಈ ಸಂದರ್ಭದಲ್ಲಿ ಸಾಹಿತಿಗಳಾದ ಶ್ರೀಮತಿ ಶಾಂತಾ ಪಸ್ತಾಪೂರ ಈ ಶಾಲೆಯ ಹಳೆಯ ವಿದ್ಯಾ ರ್ಥಿನಿ ಅವರು ಶಾಲೆಗೆ ಒಂದು ಮೈಕ್ ಸೆಟ್ ನ್ನು ನೀಡಿದ ರು,ಇದೇ ಶಾಲೆಯಲ್ಲಿ ತಮ್ಮೊಂದಿಗೆ ಕಲಿತ ಆತ್ಮೀಯ ಗೆಳತಿಯರಾದ ವಸಂತಾ ಸೋಳಸೆ,ವಿಜಯ ಲಕ್ಷ್ಮಿ ಹಾಲಪ್ಪಗೋಳ,ಲಕ್ಷೀ ಪಾಟೀಲ,ಗಾಯತ್ರಿ ಇವ ರೊಂದಿಗೆ ಶಾಲೆಯ ಇಬ್ಬರು ಶಿಕ್ಷಕಿಯರನ್ನು ಸನ್ಮಾನಿಸ ಲಾಯಿತು.ಶಿಕ್ಷಕಿ ರೇಖಾ ಸ್ವಾಗತಿಸಿದರು ಮಲ್ಲಿಕಾರ್ಜುನ ರೋಣದ ನಿರೂಪಿಸಿದರು ಡಿ.ಪಿ. ಸಜ್ಜನ ವಂದಿಸಿದರು.