ಕಲಬುರಗಿ: ಉಪ ಕಾರ್ಮಿಕ ಆಯುಕ್ತರು ಕಲಬುರಗಿ, ಪ್ರಾದೇಶಿಕ ಇವರ ವರದಿಯಲ್ಲಿ ಸಾಬೀತಾದಂತೆ, ಜಿಲ್ಲಾ ಕಾರ್ಮಿಕ ಅಧಿಕಾರಿ “ರಮೇಶ ಸುಂಬಡ್” ರವರು ಅಧಿಕಾರ ದುರುಪಯೋಗ ಅಧಿಕಾರದಲ್ಲಿ ನಿರ್ಲಕ್ಷ ಮತ್ತು ಹಣ ದುರುಪಯೋಗ ಮಾಡಿದಕ್ಕಾಗಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳ ಸೆಕ್ಷನ್-10(1) ಡಿ. ಅಡಿ “ಅಮಾನತ್ತು” ಗೊಳಿಸಬೇಕೆಂದು ದಲಿತ ಸೇನೆ ಅಧ್ಯಕ್ಷ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ನಗರಕ್ಕೆ ಆಗಮಿಸಿದ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿಯಾದ ರಮೇಶ ಸುಂಬಡ್ ರವರ ವಿರುದ್ಧ ಈ ಹಿಂದೆ ಸಾಕಷ್ಟು ಕಾರ್ಮಿಕ ಸಂಘಟನೆಗಳು ಹಾಗೂ ಇತರೆ ಸಂಘ ಸಂಸ್ಥೆಗಳು ದೂರು ಸಲ್ಲಿಸಿ, ಸದರಿ ಕಾರ್ಮಿಕ ಅಧಿಕಾರಿ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತರು ಕಲಬುರಗಿ ರವರಿಗೆ ದೂರು ಸಲ್ಲಿಸಿ ತನಿಖೆಗೆ ಒತ್ತಾಯಿಸಿದೇವು. ಅದರಂತೆ, ವಿವಿಧ ಸಂಘ ಸಂಸ್ಥೆಗಳ ದೂರು ಸಲ್ಲಕೆ ಹಿನ್ನಲೆಯಲ್ಲಿ ಉಪ ಕಾರ್ಮೀಕ ಆಯುಕ್ತರು ಜಿಲ್ಲಾ ಕಾರ್ಮಿಕ ಅಧಿಕಾರಿ ಮೇಲೆ ತನಿಖೆ ನಡೆಸಿ, ದಾಖಲೆಗಳ ಸಮೇತ ಸುಮಾರು 311 ಪುಟಗಳ “ತನಿಖಾ” ವರದಿಯನ್ನು ಕಾರ್ಮಿಕ ಆಯುಕ್ತರಿಗೆ ಹಾಗೂ ಕಲ್ಯಾಣ ಮಂಡಳ ಕಾರ್ಯದರ್ಶಿಯವರಿಗೆ ದಿನಾಂಕ: 4-07-2023 ರಂದು ಸಲ್ಲಿಸಿದ್ದಾರೆ.
ಉಪ ಕಾರ್ಮಿಕ ಆಯುಕ್ತರ ತನಿಖಾ ವರದಿಯಲ್ಲಿ ಸಾಬೀತಾಗಿರುವ ಅಂಶಗಳಾದ ಶೈಕ್ಷಣಿಕ ಧನ ಸಹಾಯ ಮಂಜೂರಾತಿಗಾಗಿ 9000/- ಆದರೆ ಕಾರ್ಮಿಕ ಅಧಿಕಾರಿಯವರ ನಿರ್ಲಕ್ಷದಿಂದ ಫಲಾನುಭವಿಗಳಗೆ 90.000/- ರೂ ಜಮೆ ಮಾಡಿದ್ದಾರೆ, ಒಟ್ಟು-37 ಮದುವೆ ಧನ ಸಹಾಯದ ಅರ್ಜಿಗಳಿಗೆ ಸರ್ಕಾರದ ನಿಯಮ ಉಲ್ಲಂಘಿಸಿ 06 ತಿಂಗಳ ನಂತರ ಅರ್ಜಿ ಸಲ್ಲಿಸಿದ ಮದುವೆ ಧನ ಸಹಾಯದ ಅರ್ಜಿಗಳಿಗೆ ಮಂಜೂರಾತಿ ನೀಡಿ ಹಣ ಬಿಡುಗಡೆ ಮಾಡಿದ್ದಾರೆ. (ಸರ್ಕಾರದ ನಿಯಮ 49-ಸಿ ಅನ್ವಯ ಫಲಾನುಭವಿಗಳು ಮದುವೆಯಾದ 06 ತಿಂಗಳ ಒಳಗೆ ಮದುವೆ ಧನ ಸಹಾಯ ಪಡೆಯಲು ಅರ್ಜಿ ಸಲ್ಲಿಸಬೇಕೆಂದು ಆದೇಶವಿದೆ, ಒಟ್ಟು-21 ಮದುವೆ ಧನಸಹಾಯದ ಪ್ರಕರಣಗಳಲ್ಲಿ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾದ 3-6 ತಿಂಗಳ ಅರ್ಜಿಗಳಗೆ ಮದುವೆ ಧನ ಸಹಾಯ ಮಂಜೂರಾತಿ ಮಾಡಿ ಹಣ ಬಿಡುಗಡೆ ಮಾಡಿದ್ದಾರೆ.
(ಸರ್ಕಾರದ ನಿಯಮ 49-ಸಿ ಅನ್ವಯ ಮಂಡಳಿಯಲ್ಲಿ ನೋಂದಣಿಯಾಗಿ ಒಂದು ವರ್ಷದ ನಂತರ ಮದುವೆಯಾಗಿರಬೇಕು ಎಂಬ ಷರತ್ತು ಇದೆ, ಸೆಸ್ ಕಾಯಿದೆ-1996 ಪ್ರಕಾರ 10 ಲಕ್ಷ ಮೇಲ್ಪಟ್ಟ ಕಟ್ಟಡ ನಿರ್ಮಾಣ ಕಾಮಗಾರಿಗಳಿಂದ ಕಲ್ಯಾಣ ಮಂಡಳಿಗೆ ಬರಬೇಕಾದ ಸೆಸ್ ಮೊತ್ತ ವಸೂಲಿ ಮಾಡುವಲ್ಲಿ ವಿಫಲತೆ, ಕರ್ನಾಟಕ ಸಕಾಲ ಕಾಯ್ದೆ ನಿಯಮ ಉಲ್ಲಂಘನೆ ಕಾರ್ಮಿಕರ ಅರ್ಜಿಗಳು 1-2 ವರ್ಷಗಳು ಕಳೆದರೂ ಏಲೆಮಾಡದೇ ಇರುವುದು, ಅರ್ಜಿಗಳ ವಿಲೆವಾರಿಯಲ್ಲಿ ಜೇಷ್ಠತೆ ಪಾಲನೆ ಮಾಡದೇ ಕೆಲವು ಅರ್ಜಿಗಳು 1-7 ದಿನಗಳಲ್ಲಿ ಏಲೆವಾರಿ ಮತ್ತೆ ಕೆಲವು ಅರ್ಜಿಗಳು 01 ವರ್ಷದ ನಂತರ ಅರ್ಜಿಗಳ ವಿಲೇವಾರಿ ಮಾಡಿದ್ದಾರೆ, ಡಾಟಾ ಎಂಟ್ರಿ ಆಪರೇಟರ್ ಗಳಾದ ದಿಗಂಬರ ಹಾಗೂ ಬಸವರಾಜ ಕಲಶೆಟು ಅವರನ್ನು ಸಾಕಷ್ಟು ಕಾರ್ಮಿಕ ಸಂಘಟನೆಗಳ ದೂರುಗಳು ಸ್ವೀಕೃತವಾಗಿರುವದರಿಂದ ಸದರಿಯವರನ್ನು ಕಲ್ಯಾಣ ಕರ್ನಾಟಕ ಭಾಗ ಹೊರತು ಪಡಿಸಿ ಬೇರೆ ಜಿಲ್ಲೆಗೆ ವರ್ಗಾಯಿಸಬೇಕೆಂದು ವರದಿಯಲ್ಲಿ ನಮೂದಾಗಿದೆ. ಅದಲ್ಲದೆ ಕಾರ್ಮಿಕ ಸಂಘಟನೆಯಾದ IಓಖಿUಅ ಕಲಬುರಗಿ ಜಿಲ್ಲಾ ಸಮಿತಿಯು 23-08- 2023 ರಂದು “ಕಾರ್ಮಿಕ ಅಧಿಕಾರಿ” ಅಮಾನತ್ತು ಮಾಡುವಂತೆ ನೂರಾರು ಕಾರ್ಮಿಕರು ಸೇರಿ ಉಪ ಕಾರ್ಮೀಕ ಆಯುಕ್ತರ ಕಛೇರಿ, ಕಲಬುರಗಿ ಎದುರುಗಡೆ ಧರಣಿ ಮಾಡಲಾಗಿತ್ತು.
ಎಲ್ಲಾ ಅಂಶಗಳು ಪರಿಗಣಿಸಿ ಮತ್ತು ಸರ್ಕಾರಕ್ಕೆ ಆರ್ಥಿಕ ನಷ್ಟ ಅಧಿಕಾರದಲ್ಲಿ ನಿರ್ಲಕ್ಷ ಅಧಿಕಾರ ದುರುಪಯೋಗ, ಬ್ರಷ್ಟಾಚಾರ ಹಾಗೂ ನಾಗರೀಕ ಸೇವಾ ನಿಯಮಗಳು ಉಲ್ಲಂಘಿಸಿದ ಕಾರ್ಮಿಕ ಅಧಿಕಾರಿಯಾದ ರಮೇಶ ಸುಂಬಡ್ ಅವರನ್ನು ಕೂಡಲೇ ಅಮಾನತ್ತು ಮಾಡಬೇಕು, ಜೊತೆಗೆ ಇಬ್ಬರು ಡಾಟಾ ಎಂಟ್ರಿ ಆಪರೇಟರ್ ಗಳಾದ ದಿಗಂಬರ್ ಹಾಗೂ ಬಸವರಾಜ ಕಲಶೆಟ್ಟಿ ಅವರುಗಳನ್ನು ಕಲ್ಯಾಣ ಕರ್ನಾಟಕ ಭಾಗ ಹೊರತು ಪಡಿಸಿ ಬೇರೆ ಜಿಲ್ಲೆಗೆ ವರ್ಗಾಯಿಸಬೇಕು 15 ದಿನಗಳಲ್ಲಿ ಯಾವುದೇ ಕ್ರಮ ಜರುಗಿಸದಿದ್ದಲ್ಲ. ಕಾರ್ಮೀಕ ಕಛೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ತಾಲೂಕಾ ಅಧ್ಯಕ್ಷ ರಾಜು ಲೇಂಗಟಿ, ಉಪಾಧ್ಯಕ್ಷ ಕಫಿಲ್ ಜೆ. ವಾಲ, ಕ.ಕ.ಇ.ನಿ ಕಾರ್ಮಿಕರ ಮಂಡಳಿಯ ಮಾಜಿ ಸದಸ್ಯ ಶಂಕರ ಕಟ್ಟಿಸಂಗಾವಿ, ಕಾರ್ಮಿಕ ಮುಖಂಡರಾದ ಶಿವಲಿಂಗ ಹಾವನೂರ, ಮಲ್ಲಿಕಾರ್ಜುನ ಮಾಳಗೆ, ಹಣಮಂತರಾಯ ಪೂಜಾರಿ, ಸಂಜುಕುಮಾರ ಗುತ್ತೇದಾರ, ದಲಿತ ಮುಖಂಡ ಶ್ರೀಕಾಂತ ರೆಡ್ಡಿ, ನಾಗಪ್ಪ ರಾಯಚೂರಕರ್, ಮೈಲಾರಿ ದೊಡ್ಡಮನಿ ಇದ್ದರು.