ಕಲಬುರಗಿ: ತಾಲೂಕಿನ ಆಲಗೂಡ ವ್ಯಾಪ್ತಿಯಲ್ಲಿರುವ ಬಜಾಜ್ ಸೋಯಲ್ ಕಂಪನಿಯು ಕಲುಷಿತ ವಾಯು ಮತ್ತು ಯಾಸೀಡ್ ಮಿಶ್ರಿತ ನೀರು, ವಿವಿಧ ವಿಷಕಾರಿ ರಾಸಾಯನಿಕ ಹೊರಸುಸುತ್ತಿರುವುದರಿಂದ ಅಲ್ಲಿನ ಸುತ್ತಮುತ್ತಲಿನ ಕೃಷಿ ಭೂಮಿಗಳು ಬರುಡು ಆಗುತ್ತಿವೆ. ಹೀಗಾಗಿ ಬಜಾಜ್ ಸೋಯಲ್ ಕಂಪನಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ಬಸವರಾಜ ಬಿ.ಮತ್ತಿಮೂಡ್ ಅಣ್ಣಾಜಿ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಪ್ರಶಾಂತ ಎಸ್.ವಾಗ್ಮೋರೆ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ಆಲಗೂಡ ಗ್ರಾಮದ ಸುತ್ತಾಮುತ್ತಲಿನ ಜಮೀನುಗಳ ಸಮೀಪದಲ್ಲಿ ಇರುವ ಬಜಾಜ ಸೋಯಲ್ ಕಂಪನಿಯು ಸುಮಾರು ವರ್ಷಗಳಿಂದ ಕಂಪನಿಯು ತನ್ನ ಚಟುವಟಿಕೆ ನಡೆಸುತ್ತಾ ಬಂದಿದೆ. ಇಲ್ಲಿ ಸಿಮಾರು ವರ್ಷಗಳಿಂದ ಕಲುಷಿತ ವಾಯು, ಯಾಸೀಡ್ ಮೀಶ್ರಿತ ನೀರು ಹೊರಸುಸುತ್ತಿದೆ. ಇದರಿಂದ ಪಕ್ಕದಲ್ಲಿರುವ ಜಮೀನಗಳು ಹಾಳಾಗುತ್ತಿದೆ. ಈ ಕುರಿತು ಜಿಲ್ಲಾಡಳಿತಕ್ಕೆ ಹಾಗೂ ಪರಿಸರ ಇಲಾಖೆಗೆ ಮನವಿ ಸಲ್ಲಿಸಿದರು ಇನ್ನೂವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರಕಾರ ಇದರ ಬಗ್ಗೆ ಎಚ್ಚರ ವಹಿಸಲಬೇಕು ಎಂದು ಆಗ್ರಹಿಸಿದ್ದಾರೆ.
ಆಲಗೂಡ ವ್ಯಾಪ್ತಿಯ ಸುತ್ತಮುತ್ತ ದುರ್ವಾಸನೆಯಿಂದ ಬೀರುತ್ತಿದೆ. ದನ, ಕರಗಳು ಕಲುಷಿತ ನೀರು ಕುಡಿದು ಸಾವನ್ನೊಪ್ಪುತ್ತಿವೆ. ಗ್ರಾಮದ ಮಕ್ಕಳಿಗೆ ಹಾಗೂ ವಯಸ್ಸಾದವರಿಗೆ ಹಲವಾರು ಆರೋಗ್ಯದ ತೊಂದರೆಯಾಗುತ್ತಿದೆ. ಹೀಗಾಗಿ ಬಜಾಜ್ ಸೋಯಲ್ ಕಂಪನಿ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಮ್ಮ ಮನವಿಗೆ ಸ್ಪಂಧಿಸದೇ ಹೋದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.