ಭಾಲ್ಕಿಯ ಬಿಕೆಐಟಿನಲ್ಲಿ ಶತಮಾನೋತ್ಸವ ಸಮಾರಂಭ | ಉಭಯ ಶ್ರೀಗಳಿಗೆ ಸಚಿವ ಖಂಡ್ರೆ ಸನ್ಮಾನ

0
22

ಭಾಲ್ಕಿ; ಕಲ್ಯಾಣ ಕರ್ನಾಟಕ ಭಾಗದ ಧೀಮಂತ ನಾಯಕ, ಹೋರಾಟಗಾರರು ಆಗಿರುವ ಡಾ.ಭೀಮಣ್ಣ ಖಂಡ್ರೆ ಅವರ ಶತಮಾನೋತ್ಸವ ಸಮಾರಂಭಕ್ಕೆ ನಾಡಿನ ಎಲ್ಲ ಮಠಾಧೀಶರನ್ನು ಆಹ್ವಾನಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಭಾನುವಾರ ಉಭಯ ಶ್ರೀಗಳನ್ನು ಸನ್ಮಾನಿಸಿ, ಡಾ.ಭೀಮಣ್ಣ ಖಂಡ್ರೆ ಅವರ ಶತಮಾನೋತ್ಸವ ಸಮಾರಂಭಕ್ಕೆ ಆಹ್ವಾನಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಶ್ರೀಮಠದ ಶಿಷ್ಯರು ಆಗಿರುವ ಲೋಕನಾಯಕ ಡಾ.ಭೀಮಣ್ಣ ಖಂಡ್ರೆ ಅವರು ಈ ಭಾಗಕ್ಕೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದ ಮೂಲಕ ಅದ್ಭುತ ಕೊಡುಗೆ ನೀಡಿದ್ದಾರೆ. ಅವರ ಶತಮಾನೋತ್ಸವ ಹಬ್ಬದ ರೀತಿಯಲ್ಲಿ ಆಚರಣೆ ಆಗಬೇಕು. ಶತಮಾನೋತ್ಸವ ಸಮಾರಂಭಕ್ಕೆ ಸಾಕ್ಷಿಯಾಗುವ ನಾಡಿನ ಪೂಜ್ಯರಿಗೆ ಶ್ರೀಮಠದಲ್ಲಿ ವಸತಿ, ಪೂಜೆ, ಪ್ರಸಾದದ ವ್ಯವಸ್ಥೆ ಮಾಡಲಾಗುವುದು. – ಡಾ.ಬಸವಲಿಂಗ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ

ಪಟ್ಟಣದ ಬಿಕೆಐಟಿ ಆವರಣದಲ್ಲಿ ಡಿ.2ರಂದು ಡಾ.ಭೀಮಣ್ಣ ಖಂಡ್ರೆ ಅವರ ಶತಮಾನೋತ್ಸವ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಜರುಗಲಿದೆ. ಡಾ.ಭೀಮಣ್ಣ ಖಂಡ್ರೆ ಅವರ ಬಗ್ಗೆ ನಾಡಿನ ಪೂಜ್ಯರಿಗೆ ಅಪಾರ ಗೌರವ ಇದೆ. ಹಾಗಾಗಿ ಎಲ್ಲ ಪೂಜ್ಯರನ್ನು ಶತಮಾನೋತ್ಸವ ಸಮಾರಂಭಕ್ಕೆ ಆಹ್ವಾನ ನೀಡಲಾಗುವುದು ಎಂದರು.

ಈ ಭಾಗದ ಸರ್ವತೋಮುಖ ಅಭಿವೃದ್ಧಿಯಲ್ಲಿ ಡಾ.ಭೀಮಣ್ಣ ಖಂಡ್ರೆ ಅವರ ಕೊಡುಗೆ ದೊಡ್ಡದಿದೆ. ಗಡಿಯಲ್ಲಿ ಡಾ.ಚನ್ನಬಸವ ಪಟ್ಟದ್ದೇವರ ಜತೆಗೂಡಿ ಡಾ.ಭೀಮಣ್ಣ ಖಂಡ್ರೆ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ. ಜಿಲ್ಲೆಯಾದ್ಯಂತ ಶಾಲಾ-ಕಾಲೇಜು ತೆರೆದು ಬಡವರು, ರೈತರು, ಕಾರ್ಮಿಕರು ಸೇರಿ ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣ ಕಲ್ಪಿಸಿದರ ಪರಿಣಾಮ ಗಡಿಭಾಗ ಪ್ರಗತಿ ಹೊಂದುತ್ತಿದೆ ಎಂದರು.

ಅಪ್ಪಟ್ಟ ಕನ್ನಡ ನೆಲದ ಬಗ್ಗೆ ಅಪಾರ ಅಭಿಮಾನ ಹೊಂದಿದ ಅವರು ನಿಜಾಂನ ಆಳ್ವಿಕೆಯಲ್ಲಿ ಹೋರಾಟ ನಡೆಸಿ ಗಡಿಭಾಗದ ನೆಲ ಕರ್ನಾಟಕದಲ್ಲಿ ಉಳಿಸಿದರು. 1996ರ ಸಂದರ್ಭದಲ್ಲಿ ಡಾ.ಚನ್ನಬಸವ ಪಟ್ಟದ್ದೇವರ ಶತಮಾನೋತ್ಸವ ಸಮಾರಂಭ ಐತಿಹಾಸಿಕವಾಗಿ ನಡೆದಿತ್ತು. ಅವರ ಪ್ರೀತಿಯ ಶಿಷ್ಯರಾಗಿರುವ ಡಾ.ಭೀಮಣ್ಣ ಖಂಡ್ರೆ ಅವರ ಶತಮಾನೋತ್ಸವ ಕೂಡ ದಾಖಲೆ ಪುಟದಲ್ಲಿ ಸೇರಬೇಕು. ಈ ನಿಟ್ಟಿನಲ್ಲಿ ಅರ್ಥಪೂರ್ಣ ಶತಮಾನೋತ್ಸವ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯ ಎಲ್ಲ ಅಭಿಮಾನಿಗಳು, ಕಾರ್ಯಕರ್ತರು, ಸಾರ್ವಜನಿಕರು ಸಹಸ್ರ ಸಂಖ್ಯೆಯಲ್ಲಿ ಭಾಗಿಯಾಗಿ ಶತಮಾನೋತ್ಸವ ಸಮಾರಂಭಕ್ಕೆ ಸಾಕ್ಷಿಯಾಗೋಣ ಎಂದು ತಿಳಿಸಿದರು.

ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದರು. ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ರವಿ ಬೊರವೇಲ್ಸ್ ಮಾಲೀಕ ರವೀಂದ್ರ ಚಿಡಗುಪ್ಪೆ, ಹಿರಿಯ ಸಾಹಿತಿ ಬಸವರಾಜ ಬಲ್ಲೂರ, ವಿಲಾಸ ಬಕ್ಕಾ, ಯುವ ಮುಖಂಡ ಸಿದ್ದು ತುಗಶೆಟ್ಟೆ, ದೀಪಕ ಠಮಕೆ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here