ದೀಪದಿಂದ ಬಾಹ್ಯ ಕತ್ತಲೆ, ವಚನಗಳಿಂದ ಆಂತರಿಕ ಕತ್ತಲೆ ದೂರ

0
31

ಕಲಬುರಗಿ: ದೀಪಗಳು ಬೆಳಕನ್ನು ನೀಡಿ ಹೊರಗಿನ ಕತ್ತಲೆಯನ್ನು ಕಳೆಯುತ್ತವೆ. ಬಸವಾದಿ ಶರಣರು ರಚಿಸಿರುವ ವಚನಗಳನ್ನು ಅಧ್ಯಯನ ಮಾಡಿ, ಅದರ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಜ್ಞಾನ, ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ ಎಂಬ ಆಂತರಿಕ ಕತ್ತಲೆ ದೂರವಾಗಿ ಬದುಕು ಸುಂದರವಾಗುತ್ತದೆ ಎಂದು ಪೂಜ್ಯ ಪ್ರಭುಶ್ರೀ ತಾಯಿ ಹೇಳಿದರು.

ನಗರದ ಬಿದ್ದಾಪುರ ಕಾಲನಿಯ ಅಕ್ಕಮಹಾದೇವಿ ಆಶ್ರಮದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ ಸರಣಿ ಕಾರ್ಯಕ್ರಮ-14 ಹಾಗೂ ಬಳಗದ ಅಧ್ಯಕ್ಷ, ಸಮಾಜ ಸೇವಕ ಎಚ್.ಬಿ.ಪಾಟೀಲ ಅವರ 43ನೇ ಹುಟ್ಟು ಹಬ್ಬದ ಪ್ರಯುಕ್ತ ಸೋಮವಾರ ಏರ್ಪಡಿಸಲಾಗಿದ್ದ ವಚನ ದೀಪೋತ್ಸವ ವಿಶೇಷ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶರಣರ ವಚನಗಳು ಹಾಗೂ ಜೀವನ ಚರಿತ್ರೆಯ ಪುಸ್ತಕಗಳನ್ನು ವಿತರಿಸಿ, ನಂತರ ಅವರು ಆಶೀರ್ವಚನ ನೀಡಿದರು.

Contact Your\'s Advertisement; 9902492681

ಲಾಭ-ನಷ್ಟದ ಲೆಕ್ಕಾಚಾರದ ಸ್ವಾರ್ಥ ಜೀವನ ನಡೆಸುವವರೇ ಇಂದಿನ ದಿನಗಳಲ್ಲಿ ಹೆಚ್ಚಾಗಿರುವಾಗ, ಸಮಾಜದ ಒಳಿತಿಗಾಗಿ ಎಚ್.ಬಿ.ಪಾಟೀಲ ಅವರು ನಿರಂತರವಾಗಿ ಹಗಲು-ರಾತ್ರಿಯೆನ್ನದೇ ನಿಸ್ವಾರ್ಥವಾಗಿ ಕಳೆದ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ, ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ. ಅವರಲ್ಲಿರುವ ಸಮಾಜಪರ ಕಾಳಜಿ ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಸಮಾಜ ಸೇವಕ ಎಚ್.ಬಿ.ಪಾಟೀಲ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಪ್ರಮುಖರಾದ ಭೀಮಾಶಂಕರ ಬಾಬಾ, ಸುನಂದಾ ಕರಜಗಿ, ಶಾರದಾ ಇಂಗಳೆ, ವಿಜಯಲಕ್ಷ್ಮೀ, ಶ್ರೀನಿಧಿ ಬೇಲಿ, ಪ್ರತೀಕ್ಷಾ, ಪ್ರಗತಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here