ಓದುಗಳ ಸಂಖ್ಯೆ ಕ್ಷೀಣ – ಮೋದೆ ಕಳವಳ

0
22

ಆಳಂದ; ಗ್ರಂಥಾಲಯ ಎಂಬುವುದು ಜ್ಞಾನ ಭಂಡಾರ ಇದ್ದಂತೆ, ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಿ,ಓದುಗಳ ಸಂಖ್ಯೆ ಕ್ಷೀಣಿಸುತ್ತೀರುವುದಕ್ಕೆ’ ಶಿಕ್ಷಕ ಪರಮೇಶ್ವರ ಮೋದೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.

ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಹಾಗೂ ಆಳಂದ ಕೇಂದ್ರ ವತಿಯಿಂದ ಗುರುವಾರ ಪಟ್ಟಣದ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2023 ಹಾಗೂ ಪುಸ್ತಕ ಪ್ರದರ್ಶನ,ಸದಸ್ಯತ್ವ ನೊಂದಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

Contact Your\'s Advertisement; 9902492681

ಜಿಲ್ಲಾ ಗ್ರಂಥಾಲಯ ಉಪನಿರ್ದೇಶಕ ಶರಣಬಸಪ್ಪ ಎಸ್ ಪಾಟೀಲ್ ಮಾತನಾಡಿ,ಡಿಜಿಟಲ್ ಗ್ರಂಥಾಲಯದಲ್ಲಿ ವಿಶ್ವದಲ್ಲಿಯೇ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ,ಅಸಂಖ್ಯಾತ ಪುಸ್ತಕಗಳು ಒಳಗೊಂಡಿದೆ.ಓದುಗರು ಸದುಪಯೋಗ ಪಡೆದುಕೊಳ್ಳಿ ಎಂದು ಓದುಗರಿಗೆ ಕರೆ ನೀಡಿದರು.

ಶ್ರೀನಿವಾಸ ದೇವಾಯಿ ಪ್ರೌಢಶಾಲೆಯ ಮುಖ್ಯಗುರು ಶಂಕರ್ ಎನ್ ಬುಟ್ನಾಳ ಮಾತನಾಡಿದರು. ಕಾರ್ಯಕ್ರಮದಲ್ಲಿ ಇಲಾಖೆಯ ಶ್ರೀಪಾದ ಪಾಟೀಲ್, ಅನೀಲ ಕುಮಾರ ಬಿರಾದಾರ,ಶೀವಕುಮಾರ,ಘೋಭಿ,ಮಲ್ಲಿಕಾರ್ಜುನ ದೊಡ್ಡಮಣಿ, ವಿದ್ಯಾರ್ಥಿಗಳಾದ ಕಾವೇರಿ ಶ್ರೀಮಂತ, ಸಮರ್ಥ ಪಾಯಲ್ ಪರಿಮಳಾ ಸೇರಿದಂತೆ ಓದುಗರ ಮತ್ತಿತರರು ಇದ್ದರು.

ಮುಖ್ಯ ಗ್ರಂಥಪಾಲಕ ಶ್ರೀಶೈಲ ಜೀ ತೊಗರೆ,ಅನೀಲ ಕುಮಾರ ಬಿರಾದಾರ ವಂದಿಸಿದರು.ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಬಹುಮಾನ ವಿತರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here