ಅಫಜಲಪುರ ವಿದ್ಯಾರ್ಥಿನಿ ಸಾವು: ತಾಯಿಯಿಂದ 7 ಜನರ ವಿರುದ್ಧ ಎಫ್ಐಆರ್ ದಾಖಲು

0
67

ಕಲಬುರಗಿ: ಅಫಜಲಪುರ ತಾಲ್ಲೂಕಿನ ಚಿಮಣಗೇರಾ ಸರಕಾರಿ ಶಾಲಾ ಬಿಸಿಯೂಟದ ಸಾಂಬಾರ್ ಪಾತ್ರೆಯಲ್ಲಿ ಬಿದ್ದಿರುವ ಎರಡನೇ ತರಗತಿ ವಿದ್ಯಾರ್ಥಿನಿ ಇಂದು ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಮೃತಪಟ್ಟ ಸಂಬಂಧಿಸಿದಂತೆ ತಾಯಿ 7 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೃತಪಟ್ಟ ವಿದ್ಯಾರ್ಥನಿ ಮಹಾಂತಮ್ಮ (8) ಅವರ ಬಾಲಕಿಯ ತಾಯಿ ಸಂಗೀತಾ ಅವರಿಂದ ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಅಡುಗೆ ಮುಖ್ಯಸ್ಥ, ಮುಖ್ಯ ಗುರುಗಳು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ, ಬ್ಲಾಕ್ ಶಿಕ್ಷಣಧಿಕಾರಿ, ಉಪ ನಿರ್ದೇಶಕರು, ಸೇರಿ 7 ಅಧಿಕಾರಿಗಳ ಹೆಸರು ದಾಖಲಿಸದೇ ಹುದ್ದೆಗಳಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Contact Your\'s Advertisement; 9902492681

ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತ ಬಾಲಕಿಯ ಕುಟುಂಬಕ್ಕೆ ಅಫಜಲಪುರ ಕ್ಷೇತ್ರದ ಶಾಸಕ ಎಂ.ವೈ ಪಾಟೀಲ್ ಅವರು ದೂರವಾಣಿ ಮೂಲಕ ಕರೆ ಮಾಡಿ ಸಾಂತ್ವಾನ ಹೇಳಿ ಧೈರ್ಯ ತುಂಬಿದ್ದಾರೆ.

ಶವಪರೀಕ್ಷೆಯ ನಂತರ ಬಾಲಕಿಯ ಮೃತ ದೇಹವನ್ನು ಬಾಲಕಿಯ ಹುಟ್ಟೂರಾದ ತಾಲೂಕಿನ ಚಿಣಮಗೇರಾ ಗ್ರಾಮಕ್ಕೆ ತರಲು ಮತ್ತೆ ಅಂಬುಲೇನ್ಸ್ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here