ಕಲಬುರಗಿ; ನಗರದ ರೈಲು ನಿಲ್ದಾಣದ ಹತ್ತಿರದ ಇಂದಿರಾ ಕ್ಯಾಂಟೀನ್ ಆವರಣದಲ್ಲಿ ಭಾರತ ದೇಶದ ಉಕ್ಕಿನ ಮಹಿಳೆ ಎಂದು ಹೆಸರು ಪಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಜನ್ಮದಿನದ ನಿಮಿತ್ತ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ ಉಪಹಾರ ಕಾರ್ಯಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೇವ ಗುತ್ತೇದಾರ, ಪಾಲಿಕೆಯ ಕ.ರ.ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ರಾಗಮ್ಮಾ ಇನಾಮದಾರ ಇವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರವಿ ರಾಠೋಡ, ಪಾಲಿಕೆ ಸದಸ್ಯೆ ನಿಂಗಮ್ಮ ಕಟ್ಟಿಮನಿ, ರೇಣುಕಾ ಸಿಂಗೆ, ಸೈರಾ ಬಾನು, ಸಂಧ್ಯ ಪವಾರ, ಆಯಿಶಾ, ರಬಿಯಾ, ಅಮಿನಾ, ನಿರ್ಮಲಾ, ಭಾರತಿಭಾಯಿ, ಅಂಜಲಿ ರಾಠೋಡ, ಸುಜಾತಾ, ನಿಲಾಂಬಿಕಾ, ಅನುರಾಧ, ಶಹಿರಜಾ ಇದ್ದರು.