ಆಳಂದ; ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಸೋಮವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪತ್ರಕರ್ತರ ಸಂಘದ ವತಿಯಿಂದ ಹಿರಿಯ ವಕೀಲ ದಿ.ಅಭಿಮನ್ಯು ತೋಳೆ ನಿಧನ ಹಿನ್ನೆಲೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಆಳಂದ ಜೆಎಂಎಫ್ಸಿ ನ್ಯಾಯಾಧೀಶ ಎಸ್.ಎಂ. ಅರುಟಗಿ ಅವರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ,ಅವರ ಸೇವೆಯ ಕುರಿತು ಮೇಲಕು ಹಾಕಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಯಲ್ಲಪ್ಪ ಕಲ್ಲಾಪುರೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸ್ನೇಹಾ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಕಮಲಾಕರ ರಾಠೋಡ ಸೇರಿದಂತೆ ಸಂಘದ ಪದಾಧಿಕಾರಿಗಳು,ವಕೀಲರು,ಸಿಬ್ಬಂದಿ ಇದ್ದರು.ನಂತರ ವಕೀಲರು ಅವರ ಸೇವೆಯ ಕುರಿತು ನೆನಪು ಮಾಡಿಕೊಂಡರು.ವಕೀಲ ಮಹಾದೇವ ಹತ್ತಿ ನಿರೂಪಿಸಿದರು.