ಕಲಬುರಗಿ ವಿಮಾನ ನಿಲ್ದಾಣದಿಂದ ದೆಹಲಿಗೆ ವಿಮಾನ ಪ್ರಾರಂಭಿಸಲು ಆಗ್ರಹ

0
90

ಕಲಬುರಗಿ: ಇಲ್ಲಿನ ವಿಮಾನ ನಿಲ್ದಾಣದಿಂದ ದೇಶದ ರಾಜಧಾನಿ ದೆಹಲಿಗೆ ಪುನಃ ವಿಮಾನ ಹಾರಾಟ ಪ್ರಾರಂಭಿಸಬೇಕು ಹಾಗೂ ಉಡಾನ ಸ್ಕೀಂ ಮತ್ತೆ ಜಾರಿಗೆ ತರಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರು ಕಲಬುರಗಿ ವಿಮಾನ ನಿಲ್ದಾಣ ವ್ಯವಸ್ಥಾಪಕರಿಗೆ ಹಾಗೂ ಸಂಸದ ಉಮೇಶ ಜಾಧವ್ ಅವರಿಗೆ ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅನೇಕ ವರ್ಷಗಳಿಂದ ಜನರ ಬೇಡಿಕೆಯಾಗಿದ್ದ ಕಲಬುರಗಿ ವಿಮಾನ ನಿಲ್ದಾಣ ಪ್ರಾರಂಭವಾಗಿ ವರ್ಷಗಳೇ ಕಳೆದಿವೆ.ಬೆಂಗಳೂರಿಗೆ ದಿನ ನಿತ್ಯ ವಿಮಾನಗಳು ಪ್ರಯಾಣ ಬೆಳೆಸುತ್ತವೆ.ಅದರಂತೆ ತಿರುಪತಿಗೆ ದಿನಾಲು ಹಾರಾಟ ನಡೆಸುತ್ತವೆ.ಆದರೆ ನಮ್ಮ ದೇಶದ ರಾಜಧಾನಿ ದೆಹಲಿಗೆ ವಾರದಲ್ಲಿ ಒಂದು ಕೂಡ ವಿಮಾನ ಪ್ರಯಾಣ ಮಾಡುತ್ತಿಲ್ಲ.

Contact Your\'s Advertisement; 9902492681

ಇದಕ್ಕೆ ಪ್ರಯಾಣಿಕರ ಕೊರತೆ ಇದೆ ಎಂದು ನೆಪ ಮಾಡಿಕೊಂಡು ದೆಹಲಿಗೆ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.ವ್ಯಾಪಾರಿಗಳು, ರಾಜಕೀಯ ಮುಖಂಡರು,ನೌಕರರು ಹೀಗೆ ಹಲವರು ವಾಣಿಜ್ಯ ನಗರಗಳಲ್ಲಿ ಒಂದಾದ ಕಲಬುಗಿಯಿಂದ ದೆಹಲಿಗೆ ತೆರಳುವ ಪ್ರಯಾಣಿಕರಿದ್ದರು ವಿಮಾನ ‌ಹಾರಾಟಕ್ಕೆ ಅವಕಾಶ ಕಲ್ಪಿಸಲಾಗಿಲ್ಲ.ತುರ್ತು ಕೆಲಸದ ಮೇಲೆ ದೆಹಲಿಗೆ ಹೋಗಲು ಹೈದರಾಬಾದ್ ನಿಂದ ವಿಮಾನದಲ್ಲಿ ಪ್ರಯಾಣ ಬೆಳೆಸುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಲ್ಯಾಣ ಕರ್ನಾಟಕ ವಿಭಾಗೀಯ ಕಚೇರಿಗಳು ಕಲಬುರಗಿ ನಗರದಲ್ಲಿವೆ.ರೈಲ್ವೆ ನಿಲ್ದಾಣವಿದೆ.ಸಣ್ಣ ಕೈಗಾರಿಕೆಗಳಿವೆ.ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಗಳು ಇವೆ.ಅನೇಕ ಸಂಪನ್ಮೂಲಗಳು ಇದ್ದರು ಕಲಬುರಗಿ ಸಂಸದರಾದ ಉಮೇಶ ಜಾಧವ ಅವರು ಕಲಬುರಗಿ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಲು ಇಚ್ಛಾಶಕ್ತಿ ತೋರಿಸುತ್ತಿಲ್ಲ.ಈಗಾಗಲೇ ನಿರ್ಲಕ್ಷ್ಯಕ್ಕೆ ಒಳಗಾಗಿ ಕಲಬುರಗಿ ದೂರದರ್ಶನ ಕೇಂದ್ರ ಸಂಪೂರ್ಣ ಮುಚ್ಚುವ ಹಂತದಲ್ಲಿದೆ.ಕಲಬುರಗಿ ವಿಮಾನ ನಿಲ್ದಾಣವು ಬ್ರಹತ್ ಜಾಗದಲ್ಲಿ ತಲೆಎತ್ತಿ ನಿಂತಿದೆ.

ಉದ್ದವಾದ ರನ್ ವೇ ಇದ್ದರು ವಿಮಾನಗಳ ಹಾರಾಟ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿವೆ.ಈಗಲಾದರೂ ಸಂಸದರು ಕೇಂದ್ರ ವಿಮಾನಯಾನ ಸಚಿವರಿಗೆ ಪತ್ರ ಬರೆದು ದೆಹಲಿಗೆ ವಾರಕ್ಕೆ ಎರಡು ಬಾರಿ ವಿಮಾನ ಹಾರಾಟ ನಡೆಸುವಂತೆ ಹಾಗೂ ಉಡಾನ್ ಸ್ಕೀಂ ಜಾರಿಗೆ ತಂದು ಮಧ್ಯಮ ವರ್ಗದ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವಂತೆ ಒತ್ತಡ ಹೇರಬೇಕು.ಇಲ್ಲದಿದ್ದಲ್ಲಿ ವಿಮಾನ ನಿಲ್ದಾಣದ ಎದುರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here