ಕಸಾಪದ ವರ್ಷದ ವ್ಯಕ್ತಿಗಳಾಗಿ ಆರ್.ವಿ ನಾಯಕ, ಡಾ. ಸತ್ಯನಾರಾಯಣ ಆಲದರ್ತಿ ಆಯ್ಕೆ

0
59

ಸುರಪುರ: ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕಸಾಪ ವರ್ಷದ ವ್ಯಕ್ತಿ ಆಯ್ಕೆಗಾಗಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಗೌರವಾಧ್ಯಕ್ಷರು ಹಾಗೂ ರಿಕ್ರಿಯೆಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗಳಿನಲ್ಲಿ ವರ್ಷದ ವ್ಯಕ್ತಿ ಎಂದು ಒಬ್ಬ ಹಿರಿಯ ಸಾಹಿತಿಯನ್ನು ಕ.ಸಾ.ಪ. ಸದಸ್ಯರು ಹಾಗೂ ಎಲ್ಲಾ ಕನ್ನಡ ಮನಸ್ಸುಗಳ ಅಭಿಪ್ರಾಯದೊಂದಿಗೆ ಆಯ್ಕೆ ಮಾಡಲಾಗುತ್ತಿದ್ದು 2023 ನೇ ಸಾಲಿಗಾಗಿ ಹಿರಿಯ ಸಾಹಿತಿ ಕಾದಂಬರಿ ಕಾರ ಡಾ. ಸತ್ಯನಾರಾಯಣ ಆಲ್ದಾರ್ತಿ ಅವರನ್ನು ” ವರ್ಷದ ವ್ಯಕ್ತಿ ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಮತ್ತು ಕೊರೊನಾ ಕಾಲಘಟ್ಟದಲ್ಲಿ ತಮ್ಮ ಜೀವದ ಹಂಗು ತೊರೆದು ರೋಗಿಗಳ ಸೇವೆಯನ್ನು ಮಾಡುವ ಮೂಲಕ ರೋಗಿಗಳ ಹೃದಯವನ್ನು ಗೆದ್ದ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ|| ವೆಂಕಪ್ಪ ನಾಯಕ್ ಅವರನ್ನು ಕೊರೋನಾ ಕಾಲದಲ್ಲಿನ ಅವರ ಸೇವೆ ಸ್ಮರಣೀಯವಾಗಿರುವುದರಿಂದ ” ವರ್ಷದ ವ್ಯಕ್ತಿ ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

Contact Your\'s Advertisement; 9902492681

ಸಭೆಯ ನೇತೃತ್ವವನ್ನು ವಹಿಸಿದ್ದ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ್ ಅವರು ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಪ್ರಬುದ್ಧತೆಯನ್ನು ಪಡೆದ ನಮ್ಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವಿಶಿಷ್ಟ ಪೂರ್ಣವಾದ ಪರಂಪರೆಯನ್ನು ಹೊಂದಿದ್ದು ಪಾರದರ್ಶಕವಾಗಿ ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಎಂದ ಅವರು ಗೃಹ ಸನ್ಮಾನ ಮಾಡುವ ಮೂಲಕ ಸಾಹಿತಿಗಳನ್ನು ಗೌರವಿಸುವ ಕೆಲಸ ಮಾಡುತ್ತಿದೆ. ಸರ್ಕಾರವು ಅರ್ಜಿ ಹಾಕಿದವರನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸುತ್ತದೆ ಆದರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಅರ್ಜಿಯನ್ನು ಕರೆಯದೆ ಎಲೆಮರೆಯ ಕಾಯಿಯಂತಿರುವ ಸ್ವಾಭಿಮಾನಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಸಾಹಿತಿಗಳನ್ನು ಗೌರವಿಸುತ್ತದೆ ಎಂದರು.

ಸಾಹಿತಿಗಳಾದ ಶಾಂತಪ್ಪ ಬೂದಿಹಾಳ್, ಶ್ರೀನಿವಾಸ ಜಾಲವಾದಿ, ನಬೀಲಾಲ್ ಮಕಾಂದಾರ ಸಿದ್ದಯ್ಯ ಮಠ, ಕನಕಪ್ಪ ವಾಗನಗೇರಿ, ವೆಂಕಟೇಶ ಪಾಟೀಲ್, ಪ್ರಕಾಶ್ ಅಲಬನೂರ್, ಮಲ್ಲಿಕಾರ್ಜುನ ಸತ್ಯಂ ಪೆಟ್, ಮಲ್ಲಿಕಾರ್ಜುನಯ್ಯ ಹಿರೇಮಠ, ನಿಂಗಣ್ಣ ಚಿಂಚೋಡಿ, ಪ್ರಕಾಶ ಸಜ್ಜನ್, ಸೋಮಶೇಖರ್ ಶಾಬಾದಿ, ಮಹೇಶ್ ಜಹಗೀರ್ದಾರ್, ಸೋಮರೆಡ್ಡಿ ಮಂಗಿಹಾಳ್, ಎ.ಕಮಲಾಕರ, ದೇವು ಹೆಬ್ಬಾಳ್,ಮಲ್ಲಿಕಾರ್ಜುನ ಗುಳಗಿ, ಮುದ್ದಣ್ಣ ಅಪ್ಪಾಗೋಳ್, ಅನ್ವರ್ ಜಮಾದಾರ್, ರಾಘವೇಂದ್ರ ಬಕ್ರೀ, ಸಾಹೇಬರೆಡ್ಡಿ ಇಟಗಿ, ಶ್ರೀಶೈಲ್ ಯಂಕಂಚಿ, ರವಿಚಂದ್ರ ಠಾಣಾಗುಂದಿ, ಅಂಬರೀಶ್ ಬಿರಾದಾರ್, ಗೌರಿಶಂಕರ್ ಯೆನಗುಂಟಿ, ಹನುಮಂತರಾಯ ಭಜಂತ್ರಿ,ತಿಮ್ಮಣ್ಣ ಪೂಜಾರಿ, ಶಂಕರ್ ಬಡಿಗೇರ್ , ಶಿವಪ್ಪ , ತಿಮ್ಮಣ್ಣ ದೇವಿಕೇರಿ, ಎಂ ಗಂಗಾಧರ , ಪಾಂಡುರಂಗ ಲಕ್ಷ್ಮಿಪುರ ಸೇರಿದಂತೆ ಹಲವಾರು ಕನ್ನಡದ ಮನಸುಗಳು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು . ದೇವು ಹೆಬ್ಬಾಳ್ ನಿರೂಪಿಸಿದರು ಗೌರವಕೋಶಾಧ್ಯಕ್ಷ ವೆಂಕಟೇಶ್ ಪಾಟೀಲ್ ಅಭಿಪ್ರಾಯ ಸಂಗ್ರಹಿಸಿದರು ಶ್ರೀಶೈಲ್ ಯಂಕಂಚಿ ವಂದಿಸಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here