ರಾಜ್ಯೋತ್ಸವ ಶಕ್ತಿ- ಪ್ರತಿಭಾ ಪುರಸ್ಕಾರ ಪ್ರದಾನ; ಕನ್ನಡ ನಾಡು-ನುಡಿ ಕಟ್ಟುವ ಕೆಲಸ ನಿತ್ಯ ನಿರಂತರವಾಗಲಿ

0
67

ಕಲಬುರಗಿ: ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಕರ್ನಾಟಕ ಯುವ ಶಕ್ತಿ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ, ಕರ್ನಾಟಕ ನಾಮಕರಣದ 50ನೇ ವರ್ಷದ ಸುವರ್ಣ ಸಂಭ್ರಮ ಸಂಗೀತೋತ್ಸವ, ಯುವ ಜಾಗೃತಿ ಸಮಾರಂಭ, ಸೇವಾ ಸಾಧಕರಿಗೆ ರಾಜ್ಯೋತ್ಸವ ಶಕ್ತಿ ಪ್ರಶಸ್ತಿ ಪ್ರದಾನ ಮತ್ತು ಎಸ್‍ಎಸ್‍ಎಲ್‍ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಿತು.

ಈ ವೇಳೆ ಉದ್ಘಾಟಿಸಿ ಆಶೀರ್ವಚನ ನೀಡಿದ ತೋನಸನಹಳ್ಳಿ (ಎಸ್) ಅಲ್ಲಮಪ್ರಭು ಸಂಸ್ಥಾನ ಮಠದ ಪೂಜ್ಯ ಡಾ. ಮಲ್ಲಣ್ಣಪ್ಪ ಮುತ್ತ್ಯಾ, ಕನ್ನಡ ಕಟ್ಟುವ ಕೆಲಸ ನಿತ್ಯ ನಿರಂತರವಾಗಲಿ, ನವೆಂಬರ್ ತಿಂಗಳಕ್ಕೆ ಸೀಮಿತವಾಗಬಾರದು. ಕನ್ನಡ, ಕನ್ನಡಿಗ, ಕರ್ನಾಟಕ ಬಗ್ಗೆ ಕನ್ನಡ ಪರ ಸಂಘಟನೆಗಳು ಜವಾಬ್ದಾರಿ ಅಲ್ಲ, ಅನ್ಯಾಯ ಕಂಡುಬಂದಾಗ ಕನ್ನಡಿಗರು ಸಿಡಿದೆದ್ದು ಕನ್ನಡದ ಅಸ್ಮಿತೆಗೆ ಸದಾಸಿದ್ಧರಾಗಿರಬೇಕು ಎಂದು ತಿಳಿಹೇಳಿದರು.

Contact Your\'s Advertisement; 9902492681

ವೇದಿಕೆ ಮೇಲೆ ಎಪಿಎಂಸಿ ಮಾಜಿ ಅಧ್ಯಕ್ಷ ಅವ್ವಣ್ಣ ಮ್ಯಾಕೇರಿ, ಯುವ ಶಕ್ತಿಯ ರಾಜ್ಯ ಗೌರವ ಅಧ್ಯಕ್ಷ ಚಿನ್ನಸ್ವಾಮಿ ಕನಕಪುರ, ಕನ್ನಡದ ಖ್ಯಾತ ಚಿತ್ರನಟಿ ಸಾಕ್ಷಿ ಮೇಘನಾ, ಗರುಡ ಪುರಾಣ ಚಿತ್ರ ತಾರೆಯರಾದ ಮಂಜುನಾಥ ನಾಗಬಾ, ದಿಶಾ ಶೆಟ್ಟಿ, ಕೆಂಚಣ್ಣ ಎಸ್, ಉದ್ಯಮಿದಾರರಾದ ಮಡಿವಾಳಪ್ಪ ನರಬೋಳಿ, ನಿಂಗಣ್ಣ ಹುಳಗೋಳ, ಕಲ್ಯಾಣರಾವ ಬಿರಾದಾರ್, ಮೋಹನ ಪಾಟೀಲ್, ದೇವಿಂದ್ರ ಜೈನಾಪುರ, ಶರಣು ಜಮಾದಾರ ಮತ್ತಿತರರಿದ್ದರು.

ನಂತರ ಚಿಣಮಗೇರಿಯ ಶ್ರೀಮಠದ ಪೂಜ್ಯರ ಸಾನ್ನಿಧ್ಯದಲ್ಲಿ ವಿಶಾಲಾಕ್ಷ್ಮೀ ವಿ. ಕರಡ್ಡಿ (ಸಾಹಿತ್ಯ ಕ್ಷೇತ್ರ), ಗಿರೀಶ ಕುಲಕರ್ಣಿ, ಬಾಬುರಾವ ಕೋಬಾಳ, ಭೀಮಾಶಂಕರ ಫಿರೋಜಾಬಾದ್, ಸ(ಮಾಧ್ಯಮ ಕ್ಷೇತ್ರ), ಬಸಯ್ಯ ಗುತ್ತೇದಾರ್ (ಸಂಗೀತ ಕ್ಷೇತ್ರ), ಶರಣು ಹೊನ್ನಗೆಜ್ಜೆ (ಶಿಕ್ಷಣ ಕ್ಷೇತ್ರ), ಶರಣಬಸಪ್ಪ ದೊಡ್ಡಮನಿ (ಆರೋಗ್ಯ ಕ್ಷೇತ್ರ), ಶರಣಪ್ಪ ಆಲೂರ, ಸದ್ದಾಂ ವಜೀರಗಾಂವ (ಸಾಮಾಜಿಕ ಸೇವೆ), ರಾಜೇಂದ್ರ ರಾಜವಾಳ, ದೇವಿಂದ್ರ ಚಿಗರಳ್ಳಿ (ಹೋರಾಟಗಾರ ಕ್ಷೇತ್ರ) ಸೇರಿದಂತೆ ವಿವಿಧ ಸಾಧಕರಿಗೆ ರಾಜ್ಯೋತ್ಸವ ಶಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಅವ್ವಣ್ಣಗೌಡ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶೇಖರ ತಲಾರಿ ಸ್ವಾಗತಿಸಿದರು. ಎಸ್.ಎಂ. ಭಕ್ತಕುಂಬಾರ ನಿರೂಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here