ಎಸಿಸಿ ಕಾರ್ಖಾನೆಯಲ್ಲಿ ಸುರಕ್ಷತೆ ಜಾಗೃತಿ ಜಾಥಾ

0
68

ವಾಡಿ; ಐದು ಎಸ್ ಅನೋ ವಿನೂತನ ಕಾರ್ಯಕ್ರಮ ನಾವು ಕಾರ್ಖಾನೆಗಳಲ್ಲಿ ಪಾಲನೆ ಮಾಡಿದರೆ ನಮ್ಮ ಸುರಕ್ಷತೆ ಜೊತೆಗೆ ಕಾರ್ಖಾನೆ ಕೂಡ ಸುರಕ್ಷಿತವಾಗಿ ಮತ್ತು ಸ್ವಚ್ಛತೆಯಾಗಿ ಇಡಬಹುದು ಎಂದು ಐದು ಎಸ್ ಜಾಗೃತಿ ಅಭಿಯಾನ ಕುರಿತು ವಿದ್ಯುತ್ ಕಂಪನಿಯ ಮುಖ್ಯಸ್ಥರಾದ ಸಮರ್ಪನ ಧವನ್ ಮಾತನಾಡಿದರು.

ಯಾವುದೇ ವಸ್ತು ಅಥವಾ ಸಲಕರಣೆ ಆಗಲಿ ಬೇಕಾದುದನ್ನು ಇಟ್ಟುಕೊಳ್ಳುವುದು ಬೇಡವಾದುದನ್ನ ಬೀಸಾಡುವುದು. ಬೇಕಾಗಿ ಇಟ್ಟುಕೊಂಡಿರುವ ವಸ್ತುಗಳನ್ನು ಅಥವಾ ಸಲಕರಣೆಗಳನ್ನು ಒಳ್ಳೆಯ ರೀತಿಯಲ್ಲಿ ಸಂರಕ್ಷಿಸಿ ಇಡುವುದು. ಸಂರಕ್ಷಿಸಿ ಇಟ್ಟಿರುವ ವಸ್ತುಗಳು ಸದಾ ಸ್ವಚ್ಛವಾಗಿಡುವುದು. ಸ್ವಚ್ಛವಾಗಿ ಇಟ್ಟಿರುವ ವಸ್ತುಗಳನ್ನು ಅದರ ಜಾಗದಲ್ಲಿ ಅದರ ಹೆಸರು ಜೊತೆ ಇಡುವುದು ಈ ನಿಯಮಗಳನ್ನು ದಿನಾಲು ಪಾಲಿಸುವುದು ಅಥವಾ ಜಾರಿಯಲ್ಲಿ ಇಡುವುದು. ಎಂದು ಐದು ಎಸ್ ಕುರಿತು ವಿಸ್ತಾರವಾಗಿ ಮಾತನಾಡಿದರು.

Contact Your\'s Advertisement; 9902492681

ಜಾಥಾ ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ್ದ ಎಸಿಸಿ ಕಾರ್ಖಾನೆಯ ಮುಖ್ಯಸ್ಥರಾದ ಪವನ್ ಗಾಂಧಿ ಅವರು ಮಾತನಾಡುತ್ತಾ ಸುರಕ್ಷತೆ ಅನ್ನೋದು ಎಲ್ಲಾ ಕಡೆಗೆ ಅನ್ವಯಿಸುತ್ತದೆ ಅಥವಾ ಪ್ರಮುಖ ರಸ್ತೆಗಳಾಗಲಿ ನಾವು ರಸ್ತೆಗಳ ಸುರಕ್ಷತೆ ನಿಯಮಗಳನ್ನು ಚಾಚು ತಪ್ಪದೇ ಮಾಡಿದ್ದಲ್ಲಿ ಅಪಘಾತಗಳು ಕಡಿಮೆವಾಗುತ್ತವೆ ಕಾರು ದ್ವಿಚಕ್ರ ವಾಹನಗಳಲ್ಲಿ ನಾವು ಸುರಕ್ಷತೆಯ ಬೆಲ್ಟ್ ಗಳು ಹೆಲ್ಮೆಟ್ ಗಳು ಬಳಸಿದೆ ಇರುವುದರಿಂದ ಎಷ್ಟೋ ಕುಟುಂಬಗಳು ಅನಾಥವಾಗಿವೆ.

ಅದರಂತೆಯೇ ನಾವು ಕಾರ್ಖಾನೆಗಳಲ್ಲಿ ಕಾರ್ಮಿಕರ ಸುರಕ್ಷತೆಗಾಗಿ ಈ ಐದು ಎಸ್ ಅನ್ನೋ ನಿಯಮಗಳನ್ನು ತಂದಿದ್ದೇವೆ. ಇದನ್ನು ತಪ್ಪದೆ ಎಲ್ಲಾ ಕಾರ್ಮಿಕರು ಅನುಸರಿಸುವ ಮೂಲಕ ಅಪಘಾತವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದು ಹೇಳಿದರು. ಐದು ಎಸ್ ಜಾಗೃತಿ ಅಭಿಯಾನ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಾ, ದಾರಿ ಉದ್ದಕ್ಕೂ ಜಾಗೃತಿ ಫಲಕಗಳು, ಹಾಡುಗಳು ಸ್ಲೋಗನ್ ಗಳು ಹೇಳುತ್ತಾ ಮುಂದೆ ವಾಡಿ -01 ಸಿಮೆಂಟ್ ಕಾರ್ಖಾನೆಗೆ ತಲುಪಿತು.

ಕಾರ್ಯಕ್ರಮದಲ್ಲಿ ಪವನ್ ಗಾಂಧಿ ಎಸಿಸಿ ಕಾರ್ಖಾನೆಯ ಮುಖ್ಯಸ್ಥ COM, ಸಮರ್ಪನ್ ಧವನ್ ವಿದ್ಯುತ್ ಕಾರ್ಖಾನೆಯ ಮುಖ್ಯಸ್ಥ ಸುರೇಶ್ ಶೆಟ್ಟಿ  ಮ್ಯಾನೇಜರ್,  ಮಹಮ್ಮದ್ ಸಲ್ಲಾವುದ್ದೀನ್, ಸೇಫ್ಟಿ ಮ್ಯಾನೇಜರ್, ಸಂಜೆಯ ಸಿಂಗ್ ಎಸಿಸಿ ಡಿಜಿಎಂ, ಸುರೇಶ್ ಕುಮಾರ್ ಸೇಫ್ಟಿ ಅಸಿಸ್ಟೆಂಟ್ ಮ್ಯಾನೇಜರ್, ನವೀನ್ ಕುಮಾರ್ DGM, ಸೈಯದ್ ಜಾಫರ್ , ಶೇಕ್ ಅನ್ವರ್ ಪಾಷಾ, ಮಹಮ್ಮದ್ ಖಾಲೀದ್ , ನರಸಿಂಹಮೂರ್ತಿ ಮ್ಯಾನೇಜರ್, ಭೂಪೇಂದ್ರ ಸಿಂಗ್ ಚವ್ಹಾಣ, ಮಹಮ್ಮದ್ ಶೋಯಬ್, ಸಂಜೆಯ ಸಾರಂಗೀ, ಮನೋರಂಜನ ಮಾಲ್, ಆಶಿಶ್ ಕುಮಾರ್ ಮಲಕೋಡ, ಕೃಷ್ಣ ಗುಮ್ಮನೂರ, ಶ್ರೀಜೀಪ ಮನ್ನಾ, ರಮೇಶ್ ರಾಥೋಡ್, ಅಮೀತ ಮಿಸ್ರಾ,ರಾಕೇಶ್ ಮಿಸ್ರಾ, ಸಂಜಯ ಸಿನ್ಹಾ, ಪಾರಸ ಗುಪ್ತಾ, ಆಶೀಪ್ ಅಲಿ ಮತ್ತು ಸೂಮಾರು 300ಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here