ಕಲಬುರಗಿ: ನಗರದ ರಾಮ ಮಂದಿರ ಬಳಿಯ ಹೊಂಗಿರಣ ಎಜುಕೇಶನ್ ಚಾರಿಟೆಬಲ್ ಟ್ರಸ್ಟ್ ಮತ್ತು ಬೈಟ್ ಆನ್ ಕೋಚಿಂಗ್ ಅಕಾಡೆಮಿ ವತಿಯಿಂದ ಆನ್ ಲೈನ್ ಲನಿರ್ಂಗ್ ಆಪ್ ಬಿಡುಗಡೆ ಹಾಗೂ ಕೆ ಸಿಇಟಿ ,ನೀಟ್,ಎಸ್ ಎಸ್ ಎಲ್ ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಮತ್ತು ಸಂಸ್ಥೆಯ ಪ್ರತಿಭಾನ್ವಿತ ಉಪನ್ಯಾಸಕರಿಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭಕ್ಕೆ ಎಂಎಲ್‍ಸಿ ಶಶೀಲ ಜಿ. ನಮೋಶಿ ಅವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. ನಂತರ ಅವರು ಮಾತನಾಡಿದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಕೋಚಿಂಗನ ತುಂಬಾ ಅವಶ್ಯಕತೆ ಇದೆ ಹಾಗೂ ಟ್ರೇನಿಂಗ್ ಆಫ್ ದಿ ಟೀಚರ್ಸ್ ಯಟ್ ಮೋಸ್ಟ್ ಇಂಪೆÇೀಟೆಂಟ್ ತಿಂಗ್ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶರಣಬಸವ ವಿವಿಯ ಕಲಸಚಿವ ಡಾ. ಅನೀಲಕುಮಾರ ಜಿ ಬಿದ್ವೆ, ವೈಜನಾಥ ಎಸ್ ಪಾಟೀಲ್, ಶಾಂತ ಮಲ್ಲಪ್ಪ ಪಾಟೀಲ್, ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಕಿರಣ್ ಎಸ್ . ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೇಜಶ್ರೀ ಜಿ ಅವರು ಕಾರ್ಯಕ್ರಮ ನಿರುಪಿಸಿದರು.