ಸುರಪುರ: ನಗರದ ರಂಗಂಪೇಟೆಯ ಡಾ:ಬಿ.ಆರ್ ಅಂಬೇಡ್ಕರ್ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ಗಾಂಧೀಜಿಯವರ ವಿಚಾರಧಾರೆಗಳನ್ನು ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿಯಾದ ಅನ್ವರ್ ಜಮಾದಾರ್ ಮಾತನಾಡುತ್ತಾ ,ಗಾಂಧೀಜಿಯವರು ಅಹಿಂಸೆ ಮತ್ತು ಸತ್ಯಾಗ್ರಹ ಇದು ಜಗತ್ತಿಗೆ ಕೊಟ್ಟ ಬಹುದೊಡ್ಡ ಅಸ್ತ್ರಗಳು ಅಭಿಪ್ರಾಯ ಪಟ್ಟರು.
ನಾಗಣ್ಣ ಪೂಜಾರಿ ಪ್ರಾಂಶುಪಾಲರು ಮಾತನಾಡುತ್ತಾ ಗಾಂಧೀಜಿಯವರು ಸ್ವತಂತ್ರ ಸಂಗ್ರಾಮದಲ್ಲಿ ತಮ್ಮ ಸರ್ವಸ್ವನ್ನು ತ್ಯಾಗ ಮಾಡಿ ಭಾರತದ ಉದ್ದಗಲಕ್ಕೂ ಜನರಲ್ಲಿ ಸ್ವದೇಶಿ ಬಗ್ಗೆ ಅಹಿಂಸಾತ್ಮಕ ಹೋರಾಟದ ಫಲವಾಗಿ ನಮ್ಮೆಲ್ಲರಿಗೂ ಸ್ವಾತಂತ್ರ್ಯ ಸಿಗುವಲ್ಲಿ ಪರಿಶ್ರಮ ಪಟ್ಟಿರುವರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ಕೃಷ್ಣ ಬಿಜಾಸಪುರ, ಉಪನ್ಯಾಸಕರಾದ ಡಾ: ಈಶ್ವರಪ್ಪ, ಚಂದ್ರಶೇಖರ್ ,ಭೀಮಣ್ಣ ,ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪದವಿ ವಿದ್ಯಾರ್ಥಿಗಳು ವಿಚಾರಧಾರೆಗಳ ಕುರಿತಾದ ಪ್ರತಿಯೊಬ್ಬರು ಒಂದೊಂದು ಪೋಸ್ಟರ್‍ಗಳನ್ನು ಹಿಡಿದು ಅದರಲ್ಲಿ ಬಳಸಿರುವ ವಿಚಾರಧಾರೆಗಳ ಕುರಿತು ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.