ಸುರಪುರ: ತಾಲೂಕಿನ ಸೂಗೂರು ಗ್ರಾಮದಲ್ಲಿರುವ ಗ್ರಾಮ ಪಂಚಾಯತಿ ಅಡಿಯಲ್ಲಿರುವ ಗ್ರಾಮೀಣ ಗ್ರಂಥಾಲಯ ಕಟ್ಟಡ ದುರಸ್ಥಿಗೊಳಿಸುವಂತೆ ಕರ್ನಾಟಕ ಯುವ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಆಗ್ರಹಿಸಿ ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ.
ಗ್ರಂಥಾಲಯ ಕಟ್ಟಡ ಸೋರುತ್ತಿದ್ದು ದುರಸ್ಥಿಗೊಳಿಸುವಂತೆ ಈಗಾಗಲೇ ಅನೇಕ ಬಾರಿ ಮೌಖಿಕವಾಗಿ ತಿಳಿಸಿದರು.
ದುರಸ್ಥಿಗೊಳಿಸುತ್ತಿಲ್ಲ, ಕಟ್ಟಡದ ಸುತ್ತಲು ಜಾಲಿ ಗಿಡಗಳು ಬೆಳೆದು ಸ್ವಚ್ಛತೆ ಇಲ್ಲದೆ ಹಾವು ಚೇಳುಗಳ ಆವಾಸ ತಾಣವಾಗಿದೆ.ಓದುಗರು ಭಯದಲ್ಲಿ ಕೂಡುವಂತ ಸ್ಥಿತಿ ಇದೆ,ಕೂಡಲೇ ಕಟ್ಟಡ ದುರಸ್ಥಿಗೊಳಿಸಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು,ಇಲ್ಲವಾದಲ್ಲಿ ಗ್ರಾಮ ಪಂಚಾಯತಿಗೆ ಮುಳ್ಳು ಬೇಲಿ ಹಚ್ಚಿ ಪ್ರತಿಭಟನೆ ನಡೆಸಲಾಗುವುದು,ಇದಕ್ಕೂ ಕ್ರಮ ಕೈಗೊಳ್ಳದಿದ್ದಲ್ಲಿ ಮೇಲಧಿಕಾರಿಗಳ ಕಚೇರಿ ಮುಂದೆ ಪಿಡಿಓ ಅಮಾನತ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ಸಂತೋಷ ಭೂಮಶೆಟ್ಟಿ,ಗ್ರಾಮ ಘಟಕದ ಅಧ್ಯಕ್ಷ ಬಸವರಾಜ ಕಡಿಮನಿ,ಉಪಾಧ್ಯ್ಕಷ ಸುನಿಲ್ ಹೊಸಮನಿ,ಆನಂದ ವಿಶ್ವಕರ್ಮ,ಶಂಕರ ವಿಟಿ,ನಾಗರಾಜ ಬ್ಯಾಳಿ,ಬಸವರಾಜ ವಿಶ್ವಕರ್ಮ,ಶಾಂತಗೌಡ ಭೂಮಶೆಟ್ಟಿ ಸೇರಿದಂತೆ ಇತರರಿದ್ದರು.