ಕಲಬುರಗಿ: ನ್ಯಾ. ಸದಾಶಿವ ಆಯೋಗದ ವರದಿ ಹಾಗೂ ಕಾಂತರಾಜು ಆಯೋಗ ವರದಿ ಹಾಗೂ ಕಾಂತರಾಜು ಆಯೋಗ ವರದಿ ಹಾಗೂ ನಾಗಮೋಹನ್ ದಾಸ್ ಆಯೋಹ ವರದಿಯನ್ನು 2023ರ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ ಜಾರಿಗೊಳಿಸಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಅವರಿಗೆ ಮನವಿ ಸಲ್ಲಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ಜಗನ್ನಾಥ ಎಸ್.ಬೀಜನಳ್ಳಿಕರ್, ಜಿಲ್ಲಾ ಸಂಚಾಲಕ ಭೀಮರಾವ ಎಸ್.ಕಟ್ಟಿಮನಿ, ರಾಮು ಮಳಖೇಡ, ಮಹಾದೇವ ಗುಡೇಪಲ್ಲಿ, ಚಂದ್ರಶೇಖರ ಮಳಖೇಡ, ನಾಗಪ್ಪ ನಂದೂರ ಸೇರಿದಂತೆ ಇತರರು ಇದ್ದರು.