ಪ್ರಶಾಂತ ಕಲ್ಲೂರಗೆ ವೀರಶೈವ ಲಿಂಗಾಯತ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ : ನಾಗನಹಳ್ಳಿ

0
511

ಕಲಬುರಗಿ: ಕಳೇದ 12 ವರ್ಷಗಳಿಂದ ಸಮುದಾಯಕ್ಕಾಗಿ ಸಮುದಾಯದ ಏಳಿಗೆಗಾಗಿ ಹಗಲೀರುಳು ಎನ್ನದೇ ಶ್ರಮೀಸುತ್ತಿರುವ ರಾಜ್ಯದ ಏಕೈಕ ಸಂಘಟನೆ ವೀರಶೈವ ಲಿಂಗಾಯತ ಮಹಾ ವೇದಿಕೆ ರಾಜ್ಯಧ್ಯಕ್ಷರಾದ ಪ್ರಶಾಂತ ಕಲ್ಲೂರ ಅವರಿಗೆ ವೀರಶೈವ ಲಿಂಗಾಯತ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಶ್ರೀ ವೀರಶೈವ ಲಿಂಗಾಯತ ಮಹಾ ವೇದಿಕೆಯ ರಾಜ್ಯ ಸಮಿತಿ ಸದಸ್ಯ ಶ್ರಿಧರ ಎಮ್.ನಾಗನಹಳ್ಳಿ ಹಾಗೂ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ ಅವರು ಪ್ರಕಟಣೆ ತಿಳಿಸಿದ್ದಾರೆ.

ಸುಮಾರು 1 ದಶಕಗಳ ಕಾಲ ಸಮುದಾಯಕ್ಕಾಗಿ ಸಮುದಾಯದ ಕಟ್ಟಕಡೆ ವ್ಯಕ್ತಿಯ ಪರವಾಗಿ ನಿಲ್ಲುವ ನಮ್ಮ ವೇದಿಕೆಯ ರಾಜ್ಯಧ್ಯಕ್ಷರಾದ ಪ್ರಶಾಂತ ಕಲ್ಲೂರ ರವರು ಸಮುದಾಯಕ್ಕಾಗಿ ಸಮುದಾಯದ ಯುವ ಮಿತ್ರರಿಗೆ ಮತ್ತು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿರುತ್ತಾರೆ. ಮತ್ತು ನೇರೆ ಬಂದಾಗ ನೇರೆ ಸಂತ್ರಸ್ತರಿಗೆ ಮನೆ ಇಲ್ಲದೇ ಇದ್ದಾಗ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಹೆಸರಲ್ಲಿ ಮನೆ ನಿರ್ಮಿಸಿಸಕೊಟ್ಟ ಕಕೀರ್ತಿ ವೇದಿಕೆಯದ್ದು, ಕೋವಿಡ್ ಸಂದಂರ್ಭದಲ್ಲಿ ಮಠಮಂದಿರಗಳಿಗೆ ಅಟೋಮೆಟಿಕ್ ಸ್ಯಾನಿಟೇಜರ್ ಮಶೀನ್ ಒದಗಿಸಿಕೊಟ್ಟಿರುತ್ತಾರೆ. ಮಲ್ಲಿಕಾರ್ಜುನ ಬಂಡೆ ಅವರ ಕುಟುಂಬಕ್ಕೆ ಅನ್ಯಾಯಾವಾದಗ ನ್ಯಾಯ ಒದಗಿಸಿಕೊಟ್ಟ ವೇದಿಕೆ, ಸರ್ಕಾರ ನೌಕರರ ಮೇಲೆ ದೌರ್ಜನ್ಯ ನಡೆದಾಗ ರಾಜ್ಯರಾಜ್ಯಧಾನಿಯಲ್ಲಿ ಹೋರಾಟ ಮಾಡಿ ಸರ್ಕಾರ ನೌಕರಿಗೆ ಸೂಕ್ತ ಭದ್ರತೆ ಒದಗಿಸಲು ಆಗ್ರಹಿಸಿದರು.

Contact Your\'s Advertisement; 9902492681

ನಗರದಲ್ಲಿ ನಮ್ಮ ಸಮುದಾಯದ ಮುಖಂಡರ ಮೇಲೆ ಸುಳ್ಳು ಅಟ್ರಾಸಿಟಿ ಕೇಸ್ ವಿರೊಧಿಸಿ ಉಪವಾಸ ಸತ್ಯಗ್ರಹ ನಡೆಸಿ ಸಮುದಾಯದ ಪರವಾಗಿ ನಿಂತ ನಾಯಕ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿ ನೇಮಕಕ್ಕಾಗಿ ಕಲಬುರಗಿ ಜಿಲ್ಲೆಯಲ್ಲಿ ನೂರುಕ್ಕಿಂತ ಹೆಚ್ಚು ಪರಮಪೂಜ್ಯರ ದಿವ್ಯಸಾನಿಧ್ಯದಲ್ಲಿ ಮತ್ತು ಸುಮಾರು 10 ಸಾವಿರಕ್ಕು ಹೆಚ್ಚು ಸಮುದಾಯದ ಬಂಧುಗಳ ಜೊತೆಗೂಡಿ ಕಲಬುರಗಿ ಜಿಲ್ಲೆಯ ಜಗತ ವೃತ್ತದ ವಿಶ್ವಗುರು ಬಸವಣ್ಣನವರ ಪುತ್ತಳಿಯಿಂದ ವಿಧಾನಸೌಧದವರೆಗು ಬೃಹತ ಪಾದಾಯಾತ್ರೆ ಹಮ್ಮಿಕೊಳ್ಳಲಾಯಿತ್ತು. ಮನವಿ ಸಲ್ಲಿಸಿದ 60 ದಿನಗಳಲ್ಲಿ ನಿಗಮ ಸ್ಥಾಪಿಸಿ ಮಾನ್ಯ ಮುಖ್ಯಮಂತ್ರಿಗಳು ಆದೇಶ ಹೋರಡಿಸಿ ಮೊದಲ ಹಂತದಲ್ಲಿ 500 ಕೋಟಿ ರೂ. ಮೀಸಲಿಡಲು ಆದೇಶಿಸಿದರು.

ಯುವ ನಾಯಕರನ್ನು ರಾಜ್ಯಧ್ಯಕ್ಷರನ್ನಾಗಿ ಮಾಡಲು ಸಮುದಾಯದ ರಾಜಕೀಯ ಗಣ್ಯರು, ಉದೈಮಿಗಳು, ಸಮುದಾಯದ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ವಿಧಾನ ಪರಿಷತ್ ಸದಸ್ಯರು, ಲೋಕ ಸಭಾ ಸದಸ್ಯರು, ಮಾಜಿ ಲೋಕಾಸಭಾ ಸದಸ್ಯರು, ಸರ್ಕಾರದ ಮೇಲೆ ಒತ್ತಡ ಹಾಕಿ ಇಚ್ಛಾಶಕ್ತಿ ಮತ್ತು ಸರ್ವರನ್ನು ಜೊತೆ ತೆಗೆದುಕೊಂಡು ಹೋಗುವ ನಮ್ಮ ನಾಯಕರನ್ನು ರಾಜ್ಯ ವೀರಶೈವ ಲಿಂಗಾಯತ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here