ಕನಕದಾಸರ ನೀತಿ ಎಲ್ಲರು ಬದುಕಿನಲ್ಲಿ ಅಳವಡಿಸಿಕೊಳ್ಳೋಣ; ಶಾಸಕ ರಾಜಾ ವೆಂಕಟಪ್ಪ ನಾಯಕ

0
19

ಸುರಪುರ: ಕನಕದಾಸರು ತಮ್ಮ ಸಾಹಿತ್ಯ ಮತ್ತು ಸಂಗೀತದ ಮೂಲಕ ಸಮಾಜ ಸುಧಾರಣೆಗಾಗಿ ತಿಳಿಸಿಕೊಟ್ಟ ನೀತಿಯನ್ನು ಎಲ್ಲರು ಬದುಕಿನಲ್ಲಿ ಅಳವಡಿಸಕೊಳ್ಳೋಣ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.

ತಾಲೂಕು ಆಡಳಿತ ದಿಂದ ನಗರದ ತಹಸೀಲ್ದಾರ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಕನಕದಾಸರು ತಮ್ಮ ದಾಸ ಸಾಹಿತ್ಯದ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ,ಅದರಂತೆ ಕನಕದಾಸರು,ಬಸವಣ್ಣ,ವಾಲ್ಮೀಕಿಯವರಂತಹ ಮಹಾತ್ಮರು ಕೊಟ್ಟ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಜಯಂತಿ ಆಚರಿಸಿದಲ್ಲಿ ಸಾರ್ಥಕವಾಗಲಿದೆ.ಅದು ಬಿಟ್ಟು ಯಾವುದೇ ಮಹಾತ್ಮರ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಿಗೊಳಿಸಿದಲ್ಲಿ ಅದರಿಂದ ಯಾವ ಉಪಯೋಗವು ಇರುವುದಿಲ್ಲ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಕೆಪಿಎಸ್ ಶಾಲೆ ಪ್ರಾಂಶುಪಾಲ ಬಸವರಾಜ ಕೊಡೇಕಲ್,ಭಾಗ್ಯ ದೊರೆ ಮಾತನಾಡಿ,ಕನಕದಾಸರು ಸಾಮತ ಅರಸನಾಗಿದ್ದವರು,ಯುಧ್ಧ ದಿಂದಾಗುವ ಸಾವು ನೋವುಗಳಿಂದ ಮರುಗಿ ಅವರು ರಾಜತ್ವವನ್ನು ತೊರೆದು ಸಂತರಾಗಿದ್ದಾರೆ,ಅವರು ಬರೆದ ಕುಲ ಕುವೆಂದು ಒಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಎನ್ನುವ ಮೂಲಕ ಜಾತಿ ಮತಗಳಿಗಿಂತ ಎಲ್ಲರು ಒಂದೆ ಎನ್ನುವುದು ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ ಎಂದರು.

ಅಲ್ಲದೆ ಕನಕದಾಸರು ನಮ್ಮ ಸುರಪುರ ನಾಡಿಗು ಬಂದು ಹೋಗಿದ್ದಾರೆ ಎನ್ನುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ,ಕೊಡೇಕಲ್‍ಗು ಕನಕದಾಸರಿಗೂ ಅವಿನಾಭಾವ ನಂಟಿದೆ,ಕೊಡೇಕಲ್ ಬಸವಣ್ಣನವರ ಮೂರು ಜನ ಪುತ್ರರಲ್ಲಿ ಸಂಗಯ್ಯ ಎನ್ನುವವರು ಕಾಗಿನೆಲೆಯಲ್ಲಿಯೇ ಹೋಗಿ ಲಿಂಗೈಕ್ಯರಾಗಿದ್ದಾರೆ,ಇಂದಿಗೂ ಪ್ರತಿ ವರ್ಷ ಸಾವಿರಾರು ಜನರು ಕೊಡೇಕಲ್ ಸೇರಿದಂತೆ ಎರಡೂ ತಾಲೂಕಿನ ಸಾವಿರಾರು ಜನರು ಕಾಗಿನೆಲೆಗೆ ಪಾದಯಾತ್ರೆ ಮೂಲಕ ತೆರಳುತ್ತಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಡಾ:ಬಿ.ಆರ್.ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿ ವರೆಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.ಶಾಸಕ ರಾಜಾ ವೆಂಕಟಪ್ಪ ನಾಯಕ ಭಾವಚಿತ್ರವಿದ್ದ ವಾಹನ ಚಲಾಯಿಸಿ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದುರ.ನಂತರ ವೇದಿಕೆಯಲ್ಲಿ ತಾಲೂಕು ಹಾಲುಮತ ಸಮಾಜ ದಿಂದ ಶಾಸಕರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ತಹಸಿಲ್ದಾರ್ ಕೆ.ವಿಜಯಕುಮಾರ,ಪಿ.ಐ ಆನಂದ ವಾಘಮೊಡೆ,ತಾ.ಪಂ ಇಓ ಬಸವರಾಜ ಸಜ್ಜನ್,ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಸೇರಿದಂತೆ ಅನೇಕ ಮುಖಂಡರು ಹಾಗೂ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here