ಕಲಬುರಗಿ: ಜಿಲ್ಲಾ ವೀರಶೈವ ಸಮಾಜ ವತಿಯಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸಭೆ ಸೇರಿ ರಾಜ್ಯದ ಮಾಜಿ ಮುಖ್ಯಮಂತ್ರಿ, ನಾಡಕಂಡ ಶ್ರೇಷ್ಠ ಧಿಮಂತ ರಾಜಕಾರಣಿ ಮತ್ತು ಅಭಿವೃದ್ಧಿ ಹರಿಕಾರರಾದ ದಿವಂಗತ ವಿರೇಂದ್ರ ಪಾಟೀಲರವರ ಜನ್ಮ ಶತಮಾನೋತ್ಸವವನ್ನು 28-02-2024 ರಂದು ಅದ್ದೂರಿಯಾಗಿ ಆಚರಣೆ ಮಾಡಬೇಕೆಂದು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಕುರಿತು ಕಾರ್ಯಕ್ರಮದ ರೂಪರೇಷೆಯ ಬಗ್ಗೆ ವಿಸ್ತ್ರತವಾಗಿ ಚರ್ಚಿಸಲಾಯಿತು.
ಸದರಿ ಸಭೆಯಲ್ಲಿ ಬಸವರಾಜ ದೇಶಮುಖ, ಮುಖ್ಯ ಕಾರ್ಯದರ್ಶಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ, ಮಾಜಿ ಲೋಕಸಭಾ ಸದಸ್ಯ ಡಾ. ಬಿ.ಜಿ. ಜವಳಿ, ಚಿಂಚೋಳಿ ಮಾಜಿ ಶಾಸಕ ಕೈಲಾಶನಾಥ ಪಾಟೀಲ, ನಿತೀನ ಜವಳಿ, ಶಶಿಕಾಂತ ಬಿ. ಪಾಟೀಲ ಚಿತಾಪುರ, ಕಲ್ಯಾಣಪ್ಪ ಪಾಟೀಲ, ಡಾ. ಶ್ರೀಶೈಲ್ ಘೋಳಿ, ಸುಭಾಷ ಬಿಜಾಪುರೆ, ದೀಪಕ್ ನಾಗ್ ಪುಣ್ಯಶೆಟ್ಟಿ, ನಿಲಕಂಠ ಮೂಲಗೆ ಅವರು ಮಾತನಾಡಿದರು.
ಈ ಸಭೆಯಲ್ಲಿ ಸಂಗಮೇಶ ನಾಗನಳ್ಳಿ, ಮಂಜುರೆಡ್ಡಿ, ಮಲ್ಲಿಕಾರ್ಜುನ ಪಾಟೀಲ ಕಾಳಗಿ, ರಮೇಶ ಪಾಟೀಲ, ರಮೇಶ ತಿಷ್ಟೂರ, ಜಗನಾಥ ಪಟ್ಟಣಶೆಟ್ಟಿ, ಜೆ.ಕೆ. ಪಾಟೀಲ ಹರಸುರ, ಸಂಜೀವಕುಮಾರ, ಶಿವಶರಣಪ್ಪ ಮುಕರಂಬಿ ಸೇರಿದಂತೆ ಇತರರು ಇದ್ದರು.