ಕಲಬುರಗಿ: ವಿಶ್ವ ಏಡ್ಸ್ ದಿನಾಚರಣೆ. ಈ ವರ್ಷದ ದೇಹ ವಾಕ್ಯ “ಏಡ್ಸ ದಿನಾಚರಣೆ ನೆನಪಿನಲ್ಲಿ ಇಟ್ಟಕೊಳ್ಳಿ – ಬದ್ದರಾಗಿ. ಮಹಾದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜು ಕಲಬುರಗಿ ವತಿಯಿಂದ ಏಡ್ಸ ದಿನಾಚರಣೆ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸಲು ದೂರನಡೆ ವಾಕ್ಥಾನ್ ಅನ್ನು ನಗರದ ಎಂ ಆರ್ ಮೆಡಿಕಲ್ ಕಾಲೇಜಿನಿಂದ ವಲ್ಲಭಭಾಯಿ ಪಟೇಲ್ ವೃತ್ತದ ವರೆಗೆ ಮಾಡಲಾಯಿತು.
ದೂರನಡೆ ವಾಕ್ಥಾನ್ ಅನ್ನು ಹೈ ಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಭೀಮಾಶಂಕರ ಬಿಲಗುಂದಿ ಬಲೂನಗಳನ್ನು ಆಕಾಶಕ್ಕೆ ಹಾರಿಸುವುದರ ಮೂಲಕ ಚಾಲನೆ ನೀಡಿದರು. ಕಾಲೇಜಿನ ಡೀನರಾದ ಡಾ ಎಸ್ ಎಂ ಪಾಟೀಲರು ಮಾತನಾಡಿ ಏಡ್ಸ ರೋಗಿಗಳನ್ನು ನಿರ್ಲಕ್ಷಿಸದೆ ನಮ್ಮ ಜೋತೆ ಸಹಜೀವನ ನಡೆಸಲು ಅವಕಾಶಮಾಡಿ, ಏಡ್ಸ್ ರೋಗ ಪ್ರಸರಣದ ಬಗ್ಗೆ ಜಾಗ್ರತೆ ಮೂಡಿಸಿ, ಏಡ್ಸ ಮುಕ್ತ ಭಾರತ ಮಾಡಲು ಕರೆ ನೀಡಿದರು.
ಹೈ ಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ ಎಸ್ ಆರ್ ಹರವಾಳ, ಕೌನ್ಸಿಲ್ ಸದಸ್ಯರಾದ ಡಾ ಅನೀಲ ಪಟ್ಟಣ, ಕಾಲೇಜಿನ ಉಪ-ಡೀನರಾದ ಡಾ ಅನುರಾದಾ ಪಟೀಲ, ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕರಾದ ಡಾ ಬಸವರಾಜ ಪಾಟೀಲ ರಾಯಕೊಡ, ಸಂಗಮೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ ಮಹಾನಂದಾ ಮೇಳಕುಂದಿ, ಓಬಿಜಿ ವಿಭಾಗದ ಮುಖ್ಯಸ್ಥರಾದ ಡಾ ನೀತಾ ಹರವಾಳ, ಡಾ ಮೀನಾಕ್ಷಿ ದೇವರಮನಿ, ಡಾ ಅನೀತಾ ಗೌರಾ, ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಸುನೀಲ ದೇಶಮುಖ, ಡಾ ಕವಿರಾಜ, ಡಾ ಪಲ್ಲವಿ, ಡಾ ಮುಬನ್, ಡಾ ಶ್ವೇತಾ, ಡಾ ಶಿವಾನಂದ, ಡಾ ಶ್ರೀಶೈಲ ಘೂಳಿ, ದೀಪ್ತಿ ಭಂಡಕ್, ಶ್ರೀದೇವಿ ಪಾಟೀಲ ,ಸಮಾತಾ, ಹಾಗೂ ಮೆಡಿಶನ್ ವಿಭಾಗದ ಮುಖ್ಯಸ್ಥರಾದ ಡಾ ಭರತ ಕೊಣಿನ, ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ ವಾಲಿ ಖeಜioಟogಥಿ ವಿಭಾಗದ ಡಾ ನಾಗರಾಜ ಪಾಟೀಲ, ಇನ್ನಿತರ ಪ್ರದ್ಯಾಪಕರು ಉಪಸ್ಥಿತಿ ಇದ್ದರು.
ಸುಮಾರ 300 ವೈದ್ಯ ವಿದ್ಯಾರ್ಥಿಗಳು, ಹೋಮಿಯೋಪತಿ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿ ವರ್ಗದವರು ವಾಕ್ಥಾನ್ ದಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ವೈದ್ಯ ವಿದ್ಯಾರ್ಥಿಗಳು ಏಡ್ಸ ಕುರಿತಾಗಿ ಕಿರು ನಾಟಕ ಹಾಗೂ ಡ್ಯಾನ್ಸ್ ಜನರ ಗಮನ ಸೆಳೆಯಿತು ಹಾಗೂ ಪೆÇೀಸ್ಟರ್‍ಗಳು, ಪ್ಲೇ ಕಾರ್ಡ್‍ಗಳು ಅತ್ಯಂತ ಆಕರ್ಷಕವಾಗಿದ್ದವು ಬಹುಜನರ ಹಮನ ಸೆಳೆದವು.