ಸುರಪುರ: ಯಾವುದೆ ಸರಕಾರಗಳು ಬಂದರು ರೈತ,ಕಾರ್ಮಿಕರ,ಶ್ರಮಿಕರ ಬೇಡಿಕೆಗಳು ಈಡೆರಲಾರವು.ಆದ್ದರಿಂದ ನಾವೆಲ್ಲರು ಒಂದಾಗಿ ಸರಕಾರಗಳ ವಿರುಧ್ಧ ಧ್ವನಿ ಎತ್ತುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದಾವಲಸಾಬ್ ನದಾಫ್ ಮಾತನಾಡಿದರು.
ತಾಲ್ಲೂಕಿನ ನಾಗರಾಳ ಮತ್ತು ಆಲ್ದಾಳ ಗ್ರಾಮ ಘಟಕಗಳ ಪದಾಧಿಕಾರಗಳ ರಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಇಂದು ರೈತರಿಗೆ ಸರಕಾರಗಳ ಸರಿಯಾದ ನೆರವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ಕಾರ್ಮಿಕರ ಅನೇಕ ಬೇಡಿಕೆಗಳು ಹಲವಾರು ವರ್ಷಗಳಿಂದ ಹಾಗೆ ಇವೆ.ಇದಕ್ಕೆಲ್ಲ ಕಾರಣ ನಮ್ಮಲ್ಲಿಲ್ಲದ ಒಗ್ಗಟ್ಟು.ಆದ್ದರಿಂದ ತಾವೆಲ್ಲ ಸಂಘಟಿತರಾಗಿ ಹೋರಾಟಕ್ಕೆ ಧುಮುಕಿದಾಗ ಸರಕಾರ ನಮ್ಮತ್ತ ಗಮನ ಹರಿಸುತ್ತವೆ.ಆದ್ದರಿಂದ ತಾವೆಲ್ಲ ಸಂಘಟನೆಯನ್ನು ಬಲಪಡಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಆಲ್ದಾಳ ಗ್ರಾಮ ಘಟಕದ ಪದಾಧಿಕಾರಿಗಳನ್ನಾಗಿ ಹಲಕೆಪ್ಪ ಪೂಜಾರಿ ಗೌರವಾಧ್ಯಕ್ಷ,ಲಕ್ಷ್ಮೀಬಾಯಿ ಅಮಾತೆಪ್ಪ ಅಧ್ಯಕ್ಷರು,ಹುಸೇನಬಿ ಲಾಲಸಾಬ,ಮಹದೇವಿ ಉಪಾಧ್ಯಕ್ಷರು,ಶರಣಬಸವ ಪ್ರ.ಕಾರ್ಯದರ್ಶಿ ಹಾಗು ಶರಣಬಸವ ಮತ್ತು ಪುಲಕಪ್ಪ ಇವರನ್ನು ಸಹಕಾರ್ಯದರ್ಶಿಗಳನ್ನಾಗಿ ನೇಮಕಗೊಳಿಸಲಾಯಿತು.
ಅದೆರೀತಿ ನಾಗರಾಳ ಗ್ರಾಮ ಘಟಕಕ್ಕೆ ಹಯ್ಯಾಳಪ್ಪ ಕಿಲ್ಲೇದಾರ ಗೌರವಾಧ್ಯಕ್ಷರು,ಇಮಾಂಬಿ ನಬಿಸಾಬ್ ಅಧ್ಯಕ್ಷರು,ದೇವಕ್ಕೆಮ್ಮ ವೆಂಕೋಬ,ಮುಮ್ತಾಜ್ ಹುಸೇನಭಾಷಾ ಉಪಾಧ್ಯಕ್ಷರು,ಖಾಸಿಂಸಾಬ್ ಬೋನಾಳ ಪ್ರ,ಕಾರ್ಯದರ್ಶಿ,ಭೀಮಬಾಯಿ ಈರಪ್ಪ, ಭೀಮಬಾಯಿ ಈಟಗಿ ಸಹಕಾರ್ಯದರ್ಶಿ ಹಾಗು ಸಣ್ಣ ಬಸಪ್ಪ ಖಜಾಂಚಿಯನ್ನಾಗಿ ನೇಮಕಗೊಳಿಸಲಾಯಿತು.
ಸಭೆಯಲ್ಲಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸಕೇರಾ,ಜಂಟಿ ಕಾರ್ಯದರ್ಶಿಮಲ್ಲಮ್ಮ ಕೊಡ್ಲಿ,ಹುಣಸಗಿ ಸಂಚಾಲಕ ಬಸ್ಸು ಕಟ್ಟಿಮನಿ ಕಾಮನಟಿಗಿ ಉಪಸ್ಥಿತರಿದ್ದರು.