ಕಳೆದ ಬಾರಿಯಂತೆ ದೂರು ಬಂದರೆ ಕ್ರಮ ಖಂಡಿತ: ಜಿಲ್ಲಾಧಿಕಾರಿ ಕೂರ್ಮರಾವ್

0
155

ಸುರಪುರ: ಹಿಂದೆ ನಡೆದ ಚುನಾವಣೆಗಳಲ್ಲಿ ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದ ಬಗ್ಗೆ ಅನೇಕ ದೂರುಗಳು ಬಂದಿದ್ದು,ಅದರಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ದೂರುಗಳು ಸುರಪುರ ತಾಲ್ಲೂಕಿನಿಂದ ಬಂದಿವೆ.ಆದ್ದರಿಂದ ಕಳೆದ ಬಾರಿಯಂತಿ ದೂರು ಬಂದರೆ ಕ್ರಮ ಖಂಡಿತ ಎಂದು ಯಾದಗಿರಿ ಜಿಲ್ಲಾಧಿಕಾರಿ ಕೂರ್ಮರಾವ್ ತಿಳಿಸಿದರು.

ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ನಡೆದ ಬಿಎಲ್‌ಒಗಳಿಗಾಗಿ ನಡೆಸಿದ ಎಲೆಕ್ಟೊರಲ್ ವೆರಿಫೀಕೇಷನ್ ಪ್ರೋಗ್ರಾಂ ತರಬೇತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಈಬಾರಿ ಮತದಾರರ ಪಟ್ಟಿಯಲ್ಲಿ ಹೆಸರು,ಸೇರ್ಪಡೆ ಮತ್ತು ತಿದ್ದುಪಡೆಗಳಿಗೆ ಸಂಬಂಧಿಸಿದಂತೆ ಸಪ್ಟೆಂಬರ್ ಒಂದರಿಂದ ಮೂವತ್ತೊಂದರ ವರೆಗೆ ಅಭಿಯಾನ ನಡೆಯಲಿದ್ದು,ಎಲ್ಲಾ ಬಿಎಲ್‌ಒ ಈಬಾರಿ ಮತದಾರರ ಯಾವುದೆ ರೀತಿಯ ಅರ್ಜಿ ನಮೂನೆಯನ್ನು ಕಾದದ ಬದಲು ಅಂತರ್ಜಾಲದ ಮೂಲಕ ತುಂಬ ಬೇಕಿದೆ.ಅಲ್ಲದೆ ಕಂಪ್ಯೂಟರಲ್ಲಿ ಅರ್ಜಿ ತುಂಬಲು ಗೊಂದಲವಾಗುತ್ತಿದ್ದರೆ ಮೊಬೈಲ್ ಯಾಪ್ ಮೂಲಕ ಮತದಾರರ ಅರ್ಜಿಗಳನ್ನು ತುಂಬಿ ಸಲ್ಲಿಸಬಹುದೆಂದು ತಿಳಿಸಿದರು.

Contact Your\'s Advertisement; 9902492681

ಎಲ್ಲಾ ಬಿಎಲ್‌ಒಗಳಿಗೆ ಸಪ್ಟೆಂಬರ್ ನಾಲ್ಕು ಮತ್ತು ಐದರಂದು ಪ್ರತಿ ಹೋಬಳಿ ಮಟ್ಟದಲ್ಲಿ ತರಬೇತಿ ನಡೆಯಲಿದ್ದು ಎಲ್ಲರೂ ಈ ತರಬೇತಿಗಳಲ್ಲಿ ಭಾಗವಹಿಸಿ ಮಾಹಿತಿ ಪಡೆಯುವಂತೆ ಕರೆ ನೀಡಿದರು.ಪ್ರತಿಯೊಬ್ಬ ಮತದಾರನ ಗುರುತಿನ ಚೀಟಿ ಪರಿಶೀಲನೆ ಮಾಡಬೇಕು ಮತ್ತು ಸತ್ಯಾಸತ್ಯತೆ ಬಗ್ಗೆ ದೃಢಿಕರಿಸಿ ಮಾಹಿತಿ ನೀಡುವದು ಕಡ್ಡಾಯವಾಗಿದೆ ಎಂದರು.ಉತ್ತಮವಾಗಿ ಕಾರ್ಯನಿರ್ವಹಿಸಿದ ಬಿಎಲ್‌ಒಗಳಿಗೆ ಈಬಾರಿ ಅಂಕ ನೀಡಲಾಗುತ್ತದೆ ಮತ್ತು ಪ್ರಶಸ್ತಿಯನ್ನು ಕೂಡ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಆದೇಶವಿದ್ದು ಸಭೆಗೆ ಬಾರದ ಬೂತ್ ಸಂಖ್ಯೆ ೧೩,೭,೭೧ ಮತ್ತು ೮೧ ರ ಬಿಎಲ್‌ಒಗಳ ಕುರಿತು ಬೇಸರಗೊಂಡ ಜಿಲ್ಲಾಧಿಕಾರಿಗಳು ತಹಸೀಲ್ದಾರರು ಮತ್ತು ಇತರೆ ಅಧಿಕಾರಿಗಳ ಮೇಲೆ ಗರಂ ಆದ ಘಟನೆಯು ನಡೆಯಿತು.

ಸಭೆಯಲ್ಲಿ ಸಹಾಯಕ ಆಯುಕ್ತ ಶಂಕರಗೌಡ,ಸುರಪುರ ತಹಸೀಲ್ದಾರ ಸುರೇಶ ಅಂಕಲಗಿ,ಹುಣಸಗಿ ತಹಸೀಲ್ದಾರ ಸುರೇಶ ಚವಲ್ಕರ್ ಚುನಾವಣಾ ವಿಭಾಗದ ಅಶೋಕ ಸುರಪುರಕರ್ ಸೇರಿದಂತೆ ಕೆಂಭಾವಿ,ಕಕ್ಕೇರಾ ಹೋಬಳಿ ಕಂದಾಯಾಧಿಕಾರಿಗಳು ಮತ್ತು ತಾಲ್ಲೂಕಿನ ಎಲ್ಲಾ ಬಿಎಲ್‌ಒಗಳು ಮತ್ತಿತರೆ ಅಧಿಕಾರಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here