ಮಣ್ಣಿನ ಗಣೇಶ ಮೂರ್ತಿಗಳತ್ತ ಯುವಕರ ಚಿತ್ತ

0
111

ವಾಡಿ: ಪಟ್ಟಣದ ಮಾರುಕಟ್ಟೆಗೆ ಇದೇ ಮೊದಲ ಬಾರಿಗೆ ಮಣ್ಣಿನ ಗಣಪತಿ ಮೂರ್ತಿಗಳು ಕಾಲಿಟ್ಟಿದ್ದು, ಮನೆಯಲ್ಲಿಟ್ಟು ಪೂಜಿಸಲು ಸಾರ್ವಜನಿಕರು ಈ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳ ಖರೀದಿಗೆ ಮುಂದಾಗಿದ್ದಾರೆ.

ಸಿಮೆಂಟ್ ನಗರಿ ವಾಡಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪ್ರತಿವರ್ಷವೂ ಪ್ಲಾಸ್ಟೆರ್ ಆಫ್ ಪ್ಯಾರೀಸ್ (ಪಿಒಪಿ)ನಿಂದ ಸಿದ್ಧಪಡಿಸಲಾದ ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದು ಸಾಮಾನ್ಯ. ಈ ವರ್ಷವೂ ಗಣೇಶೋತ್ಸವ ಮಂಡಳಿ ಸದಸ್ಯರು ಪಿಒಪಿ ಮೂರ್ತಿಗಳಿಗೆ ಮೊರೆ ಹೋಗಿದ್ದಾರೆ. ಆದರೆ ಗೌರಿ ಗಣೇಶ ಹಬ್ಬವನ್ನು ಮನೆಗಳಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸುವ ಸ್ಥಳೀಯರು ಮನೆಯ ಜಗುಲಿಗೆ ಮಣ್ಣಿನ ಗಣಪ ಮೂರ್ತಿಗಳನ್ನು ತಂದಿಡಲು ಉತ್ಸುಕರಾಗಿರುವುದು ಕಂಡುಬಂದಿದೆ.

Contact Your\'s Advertisement; 9902492681

ಪರಿಸರ ಮಾಲಿನ್ಯ ತಡೆಗಟ್ಟುವ ವಿಚಾರದಲ್ಲಿ ಪಿಒಪಿ ಮೂರ್ತಿ ಹಾಗೂ ಮಣ್ಣಿನ ಮೂರ್ತಿಗಳ ಕುರಿತು ಸಾಕಷ್ಟು ಜಾಗೃತಿ ಉಂಟಾಗಿದ್ದರಿಂದ ಮಣ್ಣಿನ ಗಣೇಶ ಮೂರ್ತಿಗಳತ್ತ ಹಲವರ ಚಿತ್ತ ಹರಿದಿದೆ. ಪತಂಜಲಿ ಉತ್ಪನ್ನ ಮಳಿಗೆಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳು ಮಾರಾಟವಾಗುತ್ತಿದ್ದು, ಕೆಂಪು ಜೇಡಿ ಮಣ್ಣಿನಿಂದ ಇವು ಸಿದ್ಧಗೊಂಡಿವೆ. ಪ್ರತಿಯೊಂದು ಮೂರ್ತಿಗಳು ಒಂದರಿಂದ ಹತ್ತು ಕೆಜಿ ತೂಕವಿದ್ದು, ರೂ.೩೦೦ ರಿಂದ ೨೦೦೦ ರೂ. ದರ ನಿಗದಿಪಡಿಸಲಾಗಿದೆ. ಕಾಪರ್ ಬಣ್ಣದಲ್ಲಿ ಮೂರ್ತಿಗಳು ಆಕರ್ಷಕವಾಗಿದ್ದು, ಖರೀದಿಸುವವರ ಗಮನ ಸೆಳೆಯುತ್ತಿವೆ.

ಶಿಸ್ತುಬದ್ಧ ಶ್ರಧ್ಧಾಭಕ್ತಿಯಿಂದ ಹಬ್ಬ ಆಚರಣೆಗೆ ಆಧ್ಯತೆ ನೀಡುವ ಮೂಲಕ ಸ್ವಚ್ಚತೆ ಕಾಪಾಡಬೇಕಾದ್ದು ನಮ್ಮ ಜವಾಬ್ದಾರಿಯಾಗಿದೆ. ರಾಸಾಯನಿಕ ಮಿಶ್ರಿತ ಪಿಒಪಿ ಮೂರ್ತಿಗಳಿಂದ ಜಲಮಾಲಿನ್ಯ ಉಂಟಾಗುತ್ತೀದೆ. ನೀರಿನಲ್ಲಿ ಕರಗದ ಪಿಒಪಿ ಮೂರ್ತಿಗಳು ಜಲಮೂಲಗಳಲ್ಲಿ ತ್ಯಾಜ್ಯವಾಗಿ ಶೇಖರಣೆಯಾಗುತ್ತಿವೆ. ಪರಿಣಾಮ ಮೂರ್ತಿಗಳನ್ನು ಮಾರುವ ವರ್ತಕರು ಮತ್ತು ಖರೀದಿಸುವ ಗ್ರಾಹಕರಿಬ್ಬರಲ್ಲೂ ಪರಿಸರ ಕಾಳಜಿ ಮೂಡಿದಾಗ ಮಾತ್ರ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಬರುತ್ತದೆ ಎಂದು ಪತಂಜಲಿ ಯೋಗ ಶಿಕ್ಷಕ, ಮಣ್ಣಿನ ಗಣೇಶ ಮೂರ್ತಿ ವರ್ತಕ ವೀರಣ್ಣ ಯಾರಿ ಪ್ರತಿಕ್ರೀಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here