ಸುರಪುರ: ಬಸವಣ್ಣನವರು ಮತ್ತು ಬಸವಾದಿ ಶರಣರು ಈ ನಾಡಿಗೆ ಮಹತ್ತರವಾಗಿ ಕೊಡುಗೆ ನೀಡಿದ ವಚನ ಸಾಹಿತ್ಯ ಸರ್ವಕಾಲಕ್ಕು ಪ್ರಸ್ತುತವಾಗಿದೆ ಎಂದು ಹಿರಿಯ ಸಾಹಿತಿ ಬಸವರಾಜ ರುಮಾಲ ನುಡಿದರು.
ರಂಗಂಪೇಟೆಯ ಬಸವೇಶ್ವರ ಕಾಲೇಜಿನ ಸಭಾಂಗಣಾದಲ್ಲಿ ಇಂದು ಅಖಿಲ ಭಾರತ ಶರಣಸಾಹಿತ್ಯ ಪರಿಷತ್ ಸುರಪುರ ತಾಲೂಕಾ ಘಟಕದವತಿಯಿಂದ ಏರ್ಪಡಿಸಿದ್ದ ವಚನದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಚನ ಸಾಹಿತ್ಯವು ಮಾನವಿಯ ಮೌಲ್ಯಗಳ ಸಂಗಮವಾಗಿದೆ ಜೊತೆಗೆ ವಚನಸಾಹಿತ್ಯ ನಮಗೆ ಬದುಕನ್ನು ಕಟ್ಟಿಕೊಡುತ್ತದೆ ಹಾಗೂ ನಮ್ಮ ಬದುಕಿನ ಪ್ರತಿ ಗಳಿಗೆಗೂ ವಚನಗಳ ಸಾರ ಅನ್ವಯವಾಗುತ್ತವೆ ಎಂದು ಹೆಳಿದರು.
ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ್ದ ಕೋಡೆಕಲ್ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸಣ್ಣ ಗೊಡ್ರಿ ಮಾತನಾಡಿ ವಿದ್ಯಾರ್ಥಿಗಳು ಮತ್ತು ಯುವಜನರು ಹೆಚ್ಚಾಗಿ ಶರಣ ಸಾಹಿತ್ಯ ಮತ್ತು ವಚನಸಾಹಿತ್ಯದ ಅದ್ಯಾಯನಮಾಡುವುದು ಪ್ರಸ್ತುತ ಸಂದರ್ಭಕ್ಕೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳಲ್ಲಿ ನೈತಿಕ ಪ್ರಜ್ಞ ಜೊತೆಗೆ ಸಾಂಸ್ಕೃತಿಕ ಸ್ಥಿತಿ, ವ್ಯಕ್ತಿತ್ವ ವಿಕಸನ ಈ ಎಲ್ಲವುಗಳ ಬಲವರ್ಧನೆಯಲ್ಲಿ ವಚನಸಾಹಿತ್ಯದ ಕೊಡುಗೆ ಮಹತ್ತರವಾಗಿದೆ ಎಂದು ಹೆಳಿದರು. ಮುಖ್ಯ ಅತಿಥಿಗಳಾಗಿ ಶರಣ ಪರಿಷತ್ತಿನ ಉಪಾಧ್ಯಕ್ಷ ಶಿವಶರಣಪ್ಪ ಹೆಡಿಗಿನಾಳ, ಕಾಲೇಜಿನ ಪ್ರಾಚಾರ್ಯ ವೀರೆಶ ಹಳಿಮನಿ ಪಾಲ್ಗೊಂಡಿದ್ದರು, ತಾಲೂಕ ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶರಣಸಾಹಿತ್ಯ ಪರಿಷತ್ತಿನ ೩೩ನೇ ವರ್ಷದ ಸಂಸ್ಥಾಪನಾದಿನ ಹಾಗೂ ಲಿಂ. ಸೂತ್ತುರು ಶಿವರಾತ್ರಿ ಸ್ವಾಮಿಜಿಗಳ ಜನ್ಮದಿನವನ್ನು ಆಚರಿಸಲಾಯಿತು, ಇದೆ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳಿಂದ ವಚನ ಕಂಟಪಾಠ ಸ್ಪರ್ದೆ ಹಾಗೂ ವಿಧ್ಯಾರ್ಥಿನಿಯರಿಂದ ವಚನಗಾಯನ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮವನ್ನು ಮೌನೇಶ ಐನಾಪೂರ ನಿರೂಪಿಸಿದರು, ಬಸವರಾಜ ಚನ್ನಪಟ್ನ ಸ್ವಾಗತಿಸಿದರು, ಬಲಭೀಮ ಪಾಟಿಲ್ ವಂದಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಶಾಂತುನಾಯಕ, ರುದ್ರಪ್ಪ ಕೆಂಭಾವಿ, ಚಂದ್ರು ಸುರಪುರ ಸೇರಿದಂತೆ ಇತರರಿದ್ದರು.