ಪೌಷ್ಟಿಕ ಆಹಾರ ಹಣ್ಣು ತರಕಾರಿ ಆರೋಗ್ಯವಂತ ಬದುಕಿಗೆ ಅವಶ್ಯ: ಡಾ. ಶ್ರೀಶೈಲ ಗೂಳಿ

0
17

ಕಲಬುರಗಿ: ಮನುಷ್ಯ ಆರೋಗ್ಯವಂತನಾಗಿರಲು ಪೌಷ್ಟೀಕ ಆಹಾರ ಸೇವನೆಯ ಅವಶ್ಯಕತೆ ಇದೆ ಎಂದು ಶ್ರೀ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯ ಕಲಬುರಗಿ ಪ್ರಾಧ್ಯಾಪಕರಾದ ಡಾ.ಶ್ರೀಶೈಲ ಘೂಳಿ ಹೇಳಿದರು.

ಶ್ರೀವಿದ್ಯಾ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ರಾ.ಸೇ.ಯೋ.ಘಟಕಗಳು ಮತ್ತು UNICEF ಯುನಿಸೆಫ್ ಹಾಗೂ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯದ ನಗರ ಸಮುದಾಯ ಆರೋಗ್ಯ ಕೇಂದ್ರ ರಾಜಾಪುರ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ರಕ್ತಹೀನತೆ ಮುಕ್ತ ಪೌಷ್ಟಿಕ ಕರ್ನಾಟಕ” ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಮುಂದುವರೆದು ಮಾತನಾಡಿದ ಅವರು ಇಂದು ಯುವಕ ಯುವತಿಯರು ಪೌಷ್ಟಿಕ ಆಹಾರ ಹಾಗೂ ಹಣ್ಣುಗಳನ್ನು ಸೇವಿಸುವದರಿಂದ ದೂರಸರಿದು ಝಂಕ್ ಪದಾರ್ಥಗಳ ಹಿಂದೆ ಬಿದ್ದು ತಮ್ಮ‌ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ ಅದರಲ್ಲೂ ವಿಶೇಷವಾಗಿ ಯುವಕ- ಯುವತಿಯರು ಹೆಚ್ಚಾಗಿ ಚಹಾ,ಕಾಫಿ ಸೇವನೆ ಮಾಡುವುದರಿಂದ ಹಸಿರು ತರಕಾರಿಗಳನ್ನು ಸೇವಿಸದೆ ಇರುವುದರಿಂದ ಹದಿಹರೆಯದ ವಯೋಮಾನದವರಲ್ಲಿ ರಕ್ತಹೀನತೆಯಂತಹ ತೊಂದರೆ ಜೊತೆಗೆ ಮಾನಸಿಕ ಮತ್ತು ದೈಹಿಕ ದುರ್ಬಲತೆ ಹೆಚ್ಚಾಗುತ್ತಿವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ಕವಿರಾಜ ಪಾಟೀಲ ಅವರು ವಹಿಸಿಕೊಂಡು ಮಾತನಾಡುತ್ತಾ ಇಂದಿನ ಯುವಕ ಯುವತಿಯರಿಗೆ ಊಟ ಮಾಡುವ ಬಗ್ಗೆ ತರಗತಿಗಳನ್ನು ಆಯೋಜಿಸಬೇಕಾದ ಅವಶ್ಯಕತೆ ಇದೆ ಇಂದು ಸಮಯಕ್ಕೆ ಸರಿಯಾಗಿ ಊಟ ಮಾಡುತ್ತಾ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಇಂತಹ ಜಾಗೃತಿ ಮುಡಿಸುವ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದು ಹೇಳಿದರು.

ರಾ.ಸೇ.ಯೋ.ಕಾರ್ಯಕ್ರಮಾಧಿಕಾರಿ ಡಾ.ಮಹೇಶ ಗಂವ್ಹಾರ ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನೂ ಸ್ವಾಗತಿಸಿದರು. ರಾ.ಸೇ.ಯೋ.ಸ್ವಯಂ ಸೇವಕರಾದ ಕುಮಾರಿ ಸುಷ್ಮಾ ಬೆನುರ ಇವರು ಕಾರ್ಯಕ್ರಮ ನಿರುಪಿಸಿದರು.  ಸುಮತಿ ಪ್ರಾರ್ಥಿಸಿದರು. ರುಚಿತಾ ಹಂಪ್ಲಿ ವಂದಿಸಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪ್ರೇಮಚಂದ ಚವ್ಹಾಣ,ಡಾ.ಸುಭಾಸ ದೊಡ್ಡಮನಿ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಭಾಗವಹಿಸಿದ್ದರು,ಎಂದು ಪ್ರಾಚಾರ್ಯರಾದ ಡಾ.ಕವಿರಾಜ ಪಾಟೀಲ ಪತ್ರಿಕೆಗೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here