ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಡವಟ್ಟು- ಅಭ್ಯರ್ಥಿಗಳಿಗೆ ಸಂಕಷ್ಟ

0
35

ಶಹಾಬಾದ :ಈಗಾಗಲೇ ಕೆ ಸೆಟ್ ಪರೀಕ್ಷೆಗಾಗಿ ಕಲಬುರಗಿ ಹಾಗೂ ವಿಜಯಪುರ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳಿಗೆ ಬೆಂಗಳೂರು ಹಾಗೂ ತುಮಕೂರು ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆ ಬರೆಯಲು ಹೋಗಬೇಕೆಂದು ನಿರ್ದೇಶನ ಮಾಡಿರುವದು ಅಭ್ಯರ್ಥಿಗಳಿಗೆ ಸಂಕಷ್ಟ ಎದುರಾಗಿದೆ.ಈ ಆದೇಶ ಅತ್ಯಂತ ಖಂಡನೀಯವಾದುದು ಎಂದು ಡಾ. ಚಿದಾನಂದ ಕುಡ್ಡನ ತಿಳಿಸಿದ್ದಾರೆ.

ಅಭ್ಯರ್ಥಿಗಳು ತಮಗೆ ಅನುಕೂಲಕ್ಕೆ ತಕ್ಕಂತೆ ಆಯಾಯ ಜಿಲ್ಲೆಯ ಪರೀಕ್ಷೆ ಕೇಂದ್ರಗಳನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬೇರೆ ಜಿಲ್ಲೆಗಳಲ್ಲಿ ಪರೀಕ್ಷೆ ಬರೆಯಬೇಕೆಂಬ ಆದೇಶವನ್ನು ಹೊರಡಿಸಿರುವುದು ತೊಂದರೆಗಳಿಗೆ ದಾರಿ ಮಾಡಿ ಕೊಟ್ಟಂತಾಗಿದೆ.ಇದು ಖಂಡನೀಯವಾಗಿದೆ.

Contact Your\'s Advertisement; 9902492681

ಅಲ್ಲದೇ ಪ್ರಯಾಣದ ಖರ್ಚು ವೆಚ್ಚವನ್ನು ಕೂಡಾ ಅಭ್ಯರ್ಥಿಗಳೇ ಭರಿಸಬೇಕಾಗಿರುತ್ತದೆ, ಪ್ರಾಧಿಕಾರವು ಅಭ್ಯರ್ಥಿಗಳಿಂದ ಒಂದು ಸಾವಿರ ರೂಪಾಯಿ ಶುಲ್ಕವನ್ನು ಭರಿಸಿಕೊಂಡಿರುತ್ತದೆ ಅದರ ಜೊತೆಗೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಪರೀಕ್ಷೆ ಬರೆಯಲು ಬೇರೆ ಕೇಂದ್ರಕ್ಕೆ ಹೋಗುವುದು ಗಾಯದ ಮೇಲೆ ಬರೆ ಎಳೆದಂತೆ, ಇದರಿಂದ ಅಭ್ಯರ್ಥಿಗಳ ಹಣ ಹಾಗೂ ಸಮಯವನ್ನು ಹಾಳು ಮಾಡಿದಂತಾಗುತ್ತದೆ.

ಆದ್ದರಿಂದ ಕೂಡಲೇ ಕಾರ್ಯ ನಿರ್ವಾಹಕ ನಿರ್ದೇಶಕರು ಈ ಆದೇಶವನ್ನು ಹಿಂಪಡೆದು ಪರೀಕ್ಷೆ ಸುಸೂತ್ರವಾಗಿ ನಡೆಯಲು ನಕಲು ತಡೆಯಲು ಅಗತ್ಯ ಕ್ರಮವನ್ನು ತೆಗೆದುಕೊಂಡು ಅಭ್ಯರ್ಥಿಗಳು ಯಾವ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಆಯ್ಕೆ ಮಾಡಿಕೊಂಡಿಕೊಂಡಿರುತ್ತಾರೆ ಆ ಜಿಲ್ಲೆಯಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕೆಂದು ಡಾ.ರಾಜೇಂದ್ರ ಯಾದಗಿರಿ, ಡಾ.ಕೈಲಾಸ ಡೋಣಿ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here