ಕಲಬುರಗಿ: ವೇಗವಾಗಿ ಬದಲಾಗುತ್ತಿರುವ ಉದ್ಯೋಗ ಜಗತ್ತಿನಲ್ಲಿ ವಿದ್ಯಾರ್ಥಿಗಳು ಬಹುರೂಪಿ ಕೌಶಲ್ಯ ಸ್ವಾಧಿನತೆಯಿಂದ ತಮ್ಮ ಉದ್ಯೋಗ ಅವಕಾಶಗಳನ್ನು ಮತ್ತು ತಮ್ಮ ವೃತ್ತಿ ಮೌಲ್ಯ ಹೆಚ್ಚಿಸಿ ಕೊಳ್ಳಬಹುದು ಯಂದು ಶ್ರೀ ಸಮ್ಯುಲ್ ಪ್ರಶಾಂತಕುಮಾರ್ ಅಭಿಪ್ರಾಯ ವ್ಯಕ್ತ ಪಡಿಸಿದರು.
ಜಗತ್ತಿನೆಲ್ಲೆಡೆ ವೇಗವಾಗಿ ಬೆಳೆಯುತ್ತಿರುವ ತಾಂತ್ರಿಕ ಮತ್ತು ಆರ್ಥಿಕ ಅಭಿರುದ್ದಿ ಉದ್ಯೋವಕಾಶಗಳನ್ನು ವಿಭಿನ್ನ ಗೊಳಿಸಿದ್ದು, ಇವುಗಳ ಬೇಡಿಕೆ ಅತ್ತು ಭರಿಸುವಿಕೆ ಉದ್ಯೋಗ ಆಕಾಂಕ್ಷಿಗಳ ಕೌಶಲ್ಯದ ಮೇಲೆ ನಿರ್ಭರವಾಗಿರುತ್ತದೆ ಯಂದು ಅವರು ವಿಧ್ಯಾರಥಿಗಳಿಗೆ ತಿಳಿ ಹೇಳಿದರು. ಅವರು ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ, ಕೆಜಿಟಿಟಿಐ ಮತ್ತು ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾ ವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾದ, ಕೌಶಲ್ಯ ತರಬೇತಿಯ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಕಾಲೇಜಿನ ಪ್ರಾಚಾರ್ಯರಾದ ಡಾ: ರಾಜೇಂದ್ರ ಕೊಂಡ ಅವರು ಕೌಶಲ್ಯ ಅಭಿರುದ್ದಿ ವಿದ್ಯಾರ್ಥಿ ಜೀವನದ ಬಹು ಮುಖ್ಯ ಭಾಗ ಆದುದ್ದರಿಂದ ಪ್ರತಿ ಹಂತದಲ್ಲೂ ಹೊಸ ಕೌಶಲ್ಯವನ್ನು ಸ್ವಾಧಿನ ಪಡಿಸಿಕೊಳ್ಳಬೇಕು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಇದಲ್ಲದೆ ಕೆಜಿಟಿಟಿಐ ಮತ್ತು ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾ ವಿದ್ಯಾಲಯದ ಒಡಂಬಡಿಕೆ ಯ ಅಡಿಯಲ್ಲಿ ಕಾಲೇಜಿನ ಸುಮಾರು 200 ವಿದ್ಯಾರ್ಥಿನಿಯರನ್ನು ಗಣಕ ಯಂತ್ರದ ಕೌಶಲ್ಯ ಮತ್ತು ಟ್ಯಾಲಿ ಸಾಪ್ಟರ್ ನಲ್ಲಿ ತರಬೇತಿ ನೀಡಲಾಗಿದೆ ಎಂದು ಶ್ರೀಮತಿ ಉಮಾ ರೇವೂರ್ ತಿಳಿಸಿದರು.
ಮುಖ್ಯ ಅತಿಥಿಗಳೊಂದಿಗೆ ಸಂವಾದ ಮಾಡುತ್ತಾ ವಿದ್ಯಾರ್ಥಿನಿಯರು, ಈ ಕೌಶಲ್ಯ ತರಬೇತಿ ಅವರಿಗೆ ವರದಾನವಾಗಿದೆ ಮತ್ತು ಇದೇ ತರಬೇತಿ ಖಾಸಗಿ ತರಬೇತಿ ಕೇಂದ್ರಗಳಲ್ಲಿ ಪಡೆದರೆ ವೆಚ್ಚ ಹೆಚ್ಚಾಗಿರುತಿತ್ತು ಎಂದು ತಮ್ಮ ಅಭಿಪ್ರಾಯ ಮತ್ತು ಸಂತೋಷ ವ್ಯಕ್ತಪಡಿಸಿದರು.
ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಅಶ್ವಿನಿ ಪಾಟೀಲ್ ಪ್ರಾರ್ಥನೆ ಗೀತೆಯನ್ನು ಹಾಡಿದರು. ಕಾಲೇಜಿನ ಉಪ ಪ್ರಾಚಾರ್ಯರು ಆದ ಶ್ರೀಮತಿ ಉಮಾ ರೇವೂರ ಸಭೆಯನ್ನು ಮತ್ತು ಮುಖ್ಯ ಅತಿಥಿಗಳನ್ನು ಸ್ವಾಗತಸಿದರು, ಶ್ರೀಮತಿ ನಮ್‍ಋತ ಹವಾ ಅವರು ವಂದಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.