ಕಲಬುರಗಿಯ ಮೆಡಿಕಲ್ ಕಾಲೇಜು ವಸತಿ ನಿಲಯದಲ್ಲಿ “ಡಿಫ್ತೀರಿಯಾ” ಸೋಂಕು ಪತ್ತೆ: ಆತಂಕದಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು

0
70

ಕಲಬುರಗಿ: ಇಲ್ಲಿನ ಸರಕಾರಿ ಜಿಮ್ಸ್ ಮೆಡಿಕಲ್ ಕಾಲೇಜಿನ ವಸತಿ ನಿಲಯದ ವಿದ್ಯಾರ್ಥಿನಿಯರಲ್ಲಿ ಗಂಟಲು ಮಾರಿ (ಡಿಫ್ತೀರಿಯಾ) ಸೋಂಕು ಪತ್ತೆಯಾಗಿದ್ದು ಆಸ್ಪತ್ರೆಯ ವಸತಿ ನಿಯಲದ ಆವರಣದಲ್ಲಿ ಆತಂಕದ ವಾತವರಣ ಸೃಷ್ಠಿಯಾಗಿದೆ.

ಜಿಲ್ಲೆಯ ಸರಕಾರಿ ಜಿಮ್ಸ್ ಮೆಡಿಕಲ್ ವಸತಿ ನಿಲಯದ 21 ವಿದ್ಯಾರ್ಥಿನಿಯರಲ್ಲಿ ಗಂಟಲು ಮಾರಿ ಈ ಸೋಂಕು ಕಾಣಿಸಿಕೊಂಡಿದ್ದು, ಸೋಂಕು ತಗುಲಿದ ವಿದ್ಯಾರ್ಥಿನಿಯರಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ನಗರದ ಸರಕಾರಿ ಆಸ್ಪತ್ರೆಯ ಎರಡನೇ ಅಂತಸ್ಥಿನಲ್ಲಿ ಸೋಂಕು ಪತ್ತೆಯಾದ ವಿದ್ಯಾರ್ಥಿಯರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಮೇಲಿನ ಅಂತಸ್ಥಿಗೆ ಸಾಮಾನ್ಯ ಜನರಿಗೆ ಪ್ರವೇಶ ನಿರ್ಭಂದಿಸಲಾಗಿದೆ ಎಂದು ತಿಳಿದು ಬಂದಿದೆ.

ನಗರದ ಸರಕಾರಿ ಮೆಡಿಕಲ್ ಕಾಲೇಜಿನ ವಸತಿ ನಿಲಯದಲ್ಲಿನ 110 ವಿದ್ಯಾರ್ಥಿನಿಯರು ಸೇರಿ 30ಕ್ಕೂ ಹೆಚ್ಚು  ಸಿಬ್ಬಂದಿಗೂ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದ್ದು,  ಈ ಪೈಕಿ 21 ವಿದ್ಯಾರ್ಥಿನಿಯರಲ್ಲಿ ಡಿಫ್ತೀರಿಯಾ ಸೋಂಕು ಪತ್ತೆಯಾಗಿದ್ದು‌, ಈ ಸೋಂಕು ಇತರರಿಗೆ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತ್ಯೇಕ ವಾರ್ಡ್​ನಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಸೋಂಕು ಪತ್ತೆಯಾಗಿದ ತಪಾಸಣೆಯ ಮಾದರಿ ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ಲ್ಯಾಬ್​ಗೆ ರವಾನೆ ಮಾಡಲಾಗಿದೆ‌ ಎಂದು ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮಾಹಿತಿ ನೀಡಿರೋ ಜಿಮ್ಸ್ ಅಧಿಕಾರಿಗಳು, ಜಿಮ್ಸ್ ವಸತಿ ನಿಲಯದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಿರುವುದಾಗಿ ಮಾಹಿತಿ ತಿಳಿದು ಬಂದಿದೆ.

ಒಟ್ಟಾರೆಯಾಗಿ ಜಮ್ಸ್ ಆಸ್ಪತ್ರೆಯ ಆವರಣದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here