ಬಂದರವಾಡ ವಸತಿ ನಿಲಯ ಸಮಸ್ಯೆಗಳ ಪರಿಹಾರಕ್ಕೆ ಗಣೇಶ ಕಟ್ಟಿಮನಿ ಒತ್ತಾಯ

0
21

ಕಲಬುರಗಿ: ಅಫಜಲಾಪುರ ತಾಲೂಕಿನ ಬಂದರವಾಡ ವಸತಿ ನಿಲಯ ದಲಿ ಸ್ವಚ್ಛತೆ ಮತ್ತು ಮೇಲ್ಚಾವಣಿ ಬೀಳುವ ಸಂಭವ ಇರುತ್ತದೆ ಮತ್ತು ಕಿಟಕಿಗಳು ಯಾವುದೇ ಸರಿಯಾಗಿ ಇರುವುದಿಲ್ಲ ಹಾವು ಮತ್ತು ಚೇಳು ವಸತಿಯಲ್ಲಿ ಬರುತ್ತವೆ ಮಕ್ಕಳು ಸಾವು ಮತ್ತು ಜೀವದ ಜೊತೆ ವಾಸ ಮಾಡುತ್ತಿದ್ದಾರೆ. ಸುಮಾರು ವರ್ಷದಿಂದ ಅಧಿಕಾರಿಗಳಿಗೆ ಎಷ್ಟೇ ಬಾರಿ ಹೇಳಿದರೂ ಕೂಡ ಎಚ್ಚೆತ್ತು ಕೊಳ್ಳುತ್ತಿಲ್ಲ ಡಿಸೆಂಬರ್ 2 ರಂದು ವಸತಿ ನಿಲಯಕ್ಕೆ ಭಾರತೀಯ ಯುವಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಗಣೇಶ್ ಕಟ್ಟಿಮನಿ ಅವರು ಭೇಟಿ ನೀಡಿದಾಗ ಹಲವಾರು ಸಮಸ್ಯೆಗಳು ಕಂಡುಬಂದವು. ಮೇಲ್ಚಾವಣಿ ಸರಿಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸದರಿ ವಸತಿ ನಿಲಯದ ಕೋಣೆಗಳ ಮೇಲ್ಬಾವಣಿ ಮತ್ತು ಗೋಡೆಗಳು ಶಿಥಿಲಗೊಳ್ಳು ತ್ತಿದ್ದು ಕುಸಿದು ಬೀಳುವ ಸಂಭವ ಇರುತ್ತದೆ. ಕಿಟಕಿಗಳು ಸರಿಯಾಗಿ ಇರುವುದಿಲ್ಲ ಕಾರಣ ಹಾವು ಮತ್ತು ಚೇಳು ನಿಲಯದಲ್ಲಿ ಬರುತ್ತಿದ್ದು ಮಕ್ಕಳು ಭಯದಲ್ಲಿ ಅಲ್ಲಿ ವಾಸ ಮಾಡಬೇಕಾಗಿದೆ. ಇದಲ್ಲದೆ ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯಗಳು ಸಹ ಸರಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಕೂಡಲೇ ಸಂಭಂದಪಟ್ಟ ಅಧಿ ಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಗ್ರಂಥಾಲಯ ಕೋಣೆಗೆ ಟೇಬಲ್ ಚೇರ್‍ಗಳು, ಪುಸ್ತಕಗಳು, ಸ್ಟಡಿ ಚೇರ್, ಡೈನಿಂಗ್ ಟೇಬಲ್, ಕ್ರೀಡಾ ಸಾಧನ ಗಳನ್ನು ಒದಗಿಸ ಬೇಕು, ಶೌಚಾಲಯಗಳ ಸ್ವಚ್ಛತೆ ಮತ್ತು ಆಟದ ಮೈದಾನ ವ್ಯವಸ್ಥೆಗೆ ಕ್ರಮ ವಹಿಸಬೇಕು ಎಂದು ಅವರು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here