ಫೆ. 27 ರಂದು ಶ್ರೀ ಸರಡಗಿ ಮಹಾಲಕ್ಷ್ಮೀ ಶಕ್ತಿಪೀಠದಲ್ಲಿ ಸಾಮೂಹಿಕ ವಿವಾಹ

0
18

ಕಲಬುರಗಿ: ಶ್ರೀ ಸರಡಗಿ ಮಹಾಲಕ್ಷ್ಮೀ ಶಕ್ತಿಪೀಠದ ಸಂಭ್ರಮದ ಜಾತ್ರಾ ಮಹೋತ್ಸವ 2024 ಹಾಗೂ ಪೂಜ್ಯ ಶ್ರೀ ಡಾ. ಅಪ್ಪಾರಾವ ದೇವಿ ಮುತ್ಯಾ (ಮಹಾರಾಜರು) ಶಕ್ತಿ ಪೀಠಾಧಿಪತಿಗಳು, ಇವರ 60 ವರ್ಷದ ಷಷ್ಠಿಪೂರ್ತಿ ಕಾರ್ಯಕ್ರಮದ ನಿಮಿತ್ಯ ಫೆಬ್ರವರಿ  27 ಮಂಗಳವಾರ ಮದ್ಯಾಹ್ನ  12.30 ಗಂಟೆಗೆ ಸಾಮೂಹಿಕ ವಿವಾಹ ಮತ್ತು ಧರ್ಮ ವೇದಿಕೆ ಕಾರ್ಯಕ್ರಮ ಹಾಗೂ ಮಹಾನಗರ ಪಾಲಿಕೆಯ ಮಹಿಳಾ ಕಾರ್ಮಿಕರಿಗೆ ಶ್ರೀಶಕ್ತಿಪೀಠದಿಂದ ಸನ್ಮಾನ ಹಾಗೂ ಸಾಯಂಕಾಲ 7 ಗಂಟೆಗೆ ಬೆಂಗಳೂರು ಕಲಾ ತಂಡದಿಂದ ‘ಹಾಸ್ಯಸಂಜೆ’ ಕಾರ್ಯಕ್ರಮವನ್ನು ತಾಲೂಕಿನ ಶ್ರೀನಿವಾಸ್ ಸರಡಗಿ ಗ್ರಾಮದ ಮಹಾಕ್ಷ್ಮೀ ಶಕ್ತಿ ಪೀಠದದಲ್ಲಿ ಆಯೋಜಿಸಲಾಗಿದೆ.

ಬುಧುವಾರ ರಂದು ಮದ್ಯಾಹ್ನ12.10 ಗಂಟೆಗೆ 11000 ಮುತ್ತೈದರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಧರ್ಮ ವೇದಿಕೆ ಹಾಗೂ ರಾತ್ರಿ 10 ಗಂಟೆಗೆ ಮಹಾದಾಸೋಹಿ ಶರಣಬಸವೇಶ್ವರರ ಮಹಾತ್ಮ ಭಕ್ತಿ ಪ್ರಧಾನ ನಾಟಕ, ಗುರುವಾರ ಬೆಳಿಗ್ಗೆ 11 ಗಂಟೆಗೆ ಹೆಲಿಕ್ಯಾಪ್ಟರ್ ಮುಖಾಂತರ ಪುಷ್ಪಾರ್ಚನೆ ಮಾಡಲಾಗುವುದು ನಂತರ ಮದ್ಯಾಹ್ನ: 2.00 ಗಂಟೆಗೆ ಭವ್ಯ ಮೆರವಣಿಗೆ, ಸಾಯಂಕಾಲ 6 ಗಂಟೆಗೆ ರಥೋತ್ಸವ ಹಾಗೂ ಸಾಯಂಕಾಲ 7 ಗಂಟೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 60 ಜನ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಮತ್ತು ಸಮಾರೋಪ ಸಮಾರಂಭ ನಂತರ ರಾತ್ರಿ 10 ಗಂಟೆಗೆ ಮಹಾದಾಸೋಹಿ ಶರಣಬಸವೇಶ್ವರರ ಮಹಾತ್ಮ ಭಕ್ತಿ ಪ್ರಧಾನ ನಾಟಕ ಈ ಕಾರ್ಯಕ್ರಮದಲ್ಲಿ ನಾಡಿನ ಅನೇಕ ಮಠಾಧೀಶರು ಹಾಗೂ ರಾಜ್ಯದ ರಾಜಕೀಯ ಧುರಣಿಯ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಗ್ರಾಮಿಣ ಶಾಸಕರು ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ಮತ್ತಿಮಡು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here