ಸುರಪುರ: ತಾಲೂಕಿನ ದೇವರಗೋನಾಲ್ ಗ್ರಾಮದಲ್ಲಿ ಕರ್ನಾಟಕ ಸಂಭ್ರಮ ರಥಯಾತ್ರೆಗೆ ಅದ್ದೂರಿ ಸ್ವಾಗತ ಕೋರಿದರು. ಕೆಂಭಾವಿಯಿಂದ ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ರಥ ಯಾತ್ರೆಗಳು ಸಹಕರಿಸಿದ ಅನೇಕ ಅಧಿಕಾರಿಗಳು ಕಲಾ ಸಾಂಸ್ಕøತಿಕ ತಂಡಗಳು ಗ್ರಾಮ ಪಂಚಾಯಿತಿ ಮತ್ತು ಪ್ರೌಢಶಾಲೆ ಸಹಯೋಗದೊಂದಿಗೆ ತಯಾರಿಸಿದ ಪ್ರೌಢ ಶಾಲೆಯಲ್ಲಿ ಉಪಹಾರ ಮಾಡಿಕೊಂಡು ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನ ಆವರಣದಲ್ಲಿ ಮೌನೇಶ್ವರ ಅರ್ಚಕರಿಂದ ವಿಶೇಷ ಪೂಜೆ ಸಲ್ಲಿಸಿ ಮಕ್ಕಳಿಂದ ವಿಶೇಷ ಕೋಲಾಟ ಲೇಜಿಮು ನೃತ್ಯ ಡೊಳ್ಳು ಕುಣಿತ ಬಾಜಾ ಭಜಂತ್ರಿಗಳೊಂದಿಗೆ ಪ್ರಮುಖ ಬೀದಿಗಳೊಂದಿಗೆ ಹಾಡುತ್ತ ಕುಣಿಯುತ್ತ ಕನ್ನಡ ದ್ವಜದೊಂದಿಗೆ ಮೆರವಣಿಗೆ ಬಂದು ಕೆಂಭಾವಿ ಮಾರ್ಗವಾಗಿ ಸುರಪುರಕ್ಕೆ ಕಳಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರರಾದ ಕೆ.ವಿಜಯಕುಮಾರ,ತಾ.ಪಂ ಇಓ ಬಸವರಾಜ ಸಜ್ಜನ್,ಶಿಕ್ಷಣ ಇಲಾಖೆಯ ಯಲ್ಲಪ್ಪ ಕಾಡ್ಲೂರ,ವೆಂಕಟೇಶ ಬೇಟೆಗಾರ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಿಬ್ಬಂದಿ ವರ್ಗ ಮತ್ತು ಪ್ರೌಢಶಾಲೆಯ ಶಿಕ್ಷಕರು ಮಕ್ಕಳು ಮತ್ತು ಕನ್ನಡ ಸಾಂಸ್ಕೃತಿಕ ಸಂಘ ಶಿಶು ಅಭಿವೃದ್ಧಿ ಮೇಲ್ವಿಚಾರಕರು ಅಂಗನವಾಡಿ ಕಾರ್ಯಕರ್ತೆಯರು ಸ್ವ ಸಹಾಯ ಸಂಘದ ಅಧಿಕಾರಿಗಳು ಪೊಲೀಸ್ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯತಿಯ ಸದಸ್ಯರುಗಳು ಊರಿನ ಹಿರಿಯರು ಯುವಕರು ಕನ್ನಡಾಂಬೆಯ ಮಕ್ಕಳು ಪಾಲ್ಗೊಂಡರು.