ಅವಹೇಳನಕಾರಿ ಹೇಳಿಕೆ; ಕಲ್ಲಡ್ಕ ಪ್ರಭಾಕರ್ ಭಟ್ ಬಂಧನಕ್ಕೆ ಜನವಾದಿ ಮಹಿಳಾ ಸಂಘಟನೆ ಆಗ್ರಹ

0
47

ಕಲಬುರಗಿ: ಮಹಿಳೆಯರ ಬಗ್ಗೆ ಕೀಳಾಗಿ ಮತ್ತು ಅವಹೇಳನಕಾರಿ ಯಾಗಿ ಮಾತನಾಡಿರುವ ಹಾಗೂ ಯುವತಿಗೆ ಬೆದರಿಕೆ ಹಾಕಿರುವ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಸ್ವಯಂ ಪ್ರೆರಿತ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಮೀನಾಕ್ಷಿ ಬಾಳಿ ಒತ್ತಾಯಿಸಿದ್ದಾರೆ.

ಈ ಕುರಿತು ರಾಜ್ಯ ಉಪಾಧ್ಯಕ್ಷ ಕೆ ನೀಲಾ, ಜಿಲ್ಲಾ ಅಧ್ಯಕ್ಷರಾದ ಚಂದಮ್ಮ ಗೋಳಾ, ರ್ಯದರ್ಶಿ ಜಿಲ್ಲಾ ಪದ್ಮಿನಿ ಕಿರಣಗಿ ಜಂಟಿ ಪತ್ರಿಕಾ ಹೇಳಿಕೆ ನೀಡಿ ಮುಸ್ಲಿಂ ಮಹಿಳೆಯರು ದಿನಕೊಬ್ಬ ಗಂಡನ ಜೊತೆ ಇರುತ್ತಿದ್ದರು. ಅವರಿಗೆ ಪರ್ಮನೆಂಟ್ ಗಂಡನ ಕೊಟ್ಟಿದ್ದು ಮೋದಿ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ನಿನ್ನೆ ಮಂಡ್ಯದಲ್ಲಿ ನಡೆದ ಹನುಮ ಸಂಕೀರ್ತನ ಕಾರ್ಯಕ್ರಮದಲ್ಲಿ ಹೇಳಿರುವುದು ಮಾಧ್ಯಮಗಳಲ್ಲಿ ಬಿತ್ತರಗೊಂಡಿವೆ. ಕಲ್ಲಡ್ಕ ಪ್ರಭಾಕರ್ ಭಟ್ ಆಡಿದ ಈ ಮಾತುಗಳನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸಿ ಮತ್ತು ತಕ್ಷಣವೇ ಸ್ವಯಂ ಪ್ರೇರಿತ ದೂರು ದಾಖಲಿಸಿ ಆತನನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಮಹಿಳೆಯರ ಬಗ್ಗೆ ಕೀಳಾಗಿ ಮತ್ತು ಅವಹೇಳನಕಾರಿಯಾಗಿ ಮಾತನಾಡುವುದು, ಅವರನ್ನು ಎರಡನೇ ದರ್ಜೆ ಪ್ರಜೆಗಳಾಗಿ ಕಾಣುವುದು ಆರ್.ಎಸ್.ಎಸ್ ನ ಮನಃಸ್ಥಿತಿ. ಈ ಮನಃ ಸ್ಥಿತಿಯ ಭಾಗವಾಗಿಯೇ ಕಲ್ಲಡ್ಕ ಪ್ರಭಾಕರ್ ಭಟ್ ಈ ರೀತಿಯ ಅವಹೇಳನ ಕಾರಿ ಹೇಳಿಕೆ ನೀಡಿ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಯು ಆರ್ ಎಸ್ ಎಸ್ ನ ಅಂತರಂಗದ ಭಾಗವಾಗಿದೆ. ಸ್ತ್ರೀಯರು ಪೂಜ್ಯನೀಯರು ಎಂದು ಬೊಗಳೆ ಕೊಚ್ಚುತ್ತಲೆ ಮುಸ್ಲಿಂರು ಎಂದಾಕ್ಷಣ ಅಪಮಾನಿಸುಬಹುದೇ? ಇದೇನಾ ಇವರ ಪವಿತ್ರ ಸಂಸ್ಕೃತಿ? ಪ್ರಭಾಕರ್ ಭಟ್ ಈ ಹೇಳಿಕೆ ಅವರ ಕೀಳು ಸಂಸ್ಕೃತಿಯ ಪ್ರತೀಕವೆ ಆಗಿದೆ. ಇವರು ಮಹಿಳೆಯರ ಬಗ್ಗೆ ಹೊಂದಿರುವ ಮನಸ್ಥಿತಿಗೆ ಈ ಮಾತು ಸಾಕ್ಷಿಯಾಗಿದೆ ಕೀಡಿಕಾರಿದ್ದಾರೆ.

ಮಂಡ್ಯದಲ್ಲಿ ಹನುಮ ಸಂಕೀರ್ತನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅನಗತ್ಯವಾಗಿ ಮುಸ್ಕಾನ್ ಎಂಬ ಯುವತಿಯನ್ನ ಆಲ್ ಖೈದ ಸಂಘಟನೆ ಜೊತೆ ಸಂಬಂಧ ಕಲ್ಪಿಸಿ ಅವಹೇಳನ ಮಾಡಿರುವುದು ಹಾಗೂ ಕಾಲೇಜಿಗೆ ಹೋಗದ ಹಾಗೇ ತಡೆಯುತ್ತೇವೆಂದು ಬೆದರಿಕೆ ಹಾಕಿರುವುದು ಎಷ್ಟು ಸರಿ ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಸಿದಾಗ, ಮಹಿಳಾ ಕ್ರೀಡಾಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದವರನ್ನು ರಕ್ಷಿಸುವ ಮೋದಿ ಸರ್ಕಾರ, ಮರ್ಯಾದ ಪುರುಷೋತ್ತಮ ಶ್ರೀರಾಮ ದೇವಸ್ಥಾನ ಉದ್ಘಾಟಿಸಲು ಹೊರಟಿದೆ. ಮಹಿಳೆ ಎಂದರೆ ಮಾತೆ ಎನ್ನುವ ದೇಶದಲ್ಲಿ ಮಹಿಳೆಯನ್ನು ಎರಡನೆಯ ದರ್ಜೆಯ ಪ್ರಜೆಯಾಗಿ ಕಾಣುವುದು ಅವಳ ಆಯ್ಕೆಯ, ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ದಕ್ಕೆ ತರುವುದು ಆರ್.ಎಸ್ .ಎಸ್. ನ ನೀತಿಯಾಗಿದೆ ಎಂದು ದುರಿದ್ದಾರೆ.

ಮಂಡ್ಯದಂತಹ ಸೌಹಾರ್ದ ನೆಲದಲ್ಲಿ ಸೌಹಾರ್ದತೆಗೆ ಬೆಂಕಿ ಹಚ್ಚುವುದನ್ನು ನಾವು ವಿರೋಧಿಸುತ್ತೇವೆ. ಕೋಮು ವಿಷ ಬೀಜ ಬಿತ್ತವುದು ಸಂವಿಧಾನ ವಿರೋಧೀ ನಡೆಯಾಗಿದೆ.ಇಂತಹ ಮಾನವ ವಿರೋಧಿ, ಸೌಹಾರ್ತತೆಗೆ ಧಕ್ಕೆ ತಂದು ಅಶಾಂತಿ ಉಂಟುಮಾಡುವ ಕಲ್ಲಡ್ಕ ಪ್ರಭಾಕರ್ ಭಟ್ಟನ ಮೇಲೆ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here