ಕಲಬುರಗಿ: ಜ. 3ರಂದು ಭೀಮಕೋರೆಗಾಂವ್ ವಿಜಯೋತ್ಸವ ಹಾಗೂ ಸಾವಿತ್ರಿ ಬಾ ಪುಲೆ ಅವರ 193ನೇ ಜಯಂತ್ಯುತ್ಸವ ಸಮಾರಂಭ ಆಯೋಜನೆ ಮಾಡಲಾಗಿದೆ ಎಂದು ಭೀಮಪುತ್ರಿ ಬ್ರಿಗೇಡ್ ಸಾಮಾಜಿಕ ಸಂಘಟನೆಯ ಜಿಲ್ಲಾಧ್ಯಕ್ಷ ರಾಜಕುಮಾರ ತಿಳಿಸಿದರು.
ನಗರದ ಎಸ್ ಎಮ್ ಪಂಡಿತ ರಂಗಮಂದಿರದಲ್ಲಿ ಜನವರಿ 03ರಂದು 11:30ಕ್ಕೆ ಭೀಮಪುತ್ರಿ ಬ್ರಿಗೇಡ್ ಸಾಮಾಜಿಕ ಸಂಘಟನೆ ಜಿಲ್ಲಾ ಸಮಿತಿ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಸ್ಪೃಶ್ಯತೆ ಅಸಮಾನತೆಯ ವಿರುದ್ಧ ಬಂಡೆದ್ದ ಮಹಾರ ವೀರರು ತಮ್ಮ ಯಶೋಗಾಥೆಯನ್ನು ದಾಖಲಿಸಿ ಶೋಷಿತರ ಪಾಲಿಗೆ ಹೊಸ ಅಧ್ಯಯ ತೆರೆದು ಶೋಷಿತರ ಆತ್ಮ ಗೌರವ ತೆಲೆಯೆತ್ತುವಂತೆ ಮಾಡಿದ ವೀರ ಸೈನಿಕರ ಸ್ಮರಣಾರ್ಥ ಭೀಮ ಕೋರೆಗಾವ್ ವಿಜಯೋತ್ಸವ ಆಚರಣೆ ಹಾಗೂ ಭಾರತದಲ್ಲಿ ಹೆಣ್ಣಿಗೆ ವಿದ್ಯ ನಿರಾಕರಿಸಿದ ಕಾಲಘಟ್ಟದಲ್ಲಿ ತುಳಿತಕೊಳಗಾದ ಹೆಣ್ಣು ಮಕ್ಕಳಿಗಾಗಿ ಮೊಟ್ಟಮೊದಲ ಶಾಲೆತೆರೆದು ಹೆಣ್ಣುಮಕ್ಕಳ ಬಾಳಿಗೆ ಬೆಳಕಾದ ಅಕ್ಷರದವ್ವ ಸಾವಿತ್ರಿ ಬಾಪೂಲೆ ಅವರ ಜಯಂತೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಸಮಾರಂಭಕ್ಕೆ ಭಂತೆ ವರಜ್ಯೋತಿ, ಭೀಮಪುತ್ರಿ ಸಂಘಟನೆಯ ಸಂಸ್ಥಾಪಕರಾದ ರೇವತಿರಾಜ್, ವಿಠ್ಠಲ ವಗ್ಗನ್, ವಿ. ಟಿ. ಕಾಂಬಳೆ ರಾಜಶೇಖರ ಚೌರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಇದೇವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳಾ ಸಾಧಕರಿಗೆ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೊಷ್ಠಿಯಲ್ಲಿ ಸಂಘಟನೆಯ ಮಹಿಳಾ ಅಧ್ಯಕ್ಷ ಜಗದೇವಿ, ಸಾಯಬಣ್ಣ, ಗುಲಾಮ ನಬಿ, ಡಾ.ರಾಹುಲ್ ಶ್ರೀಮಾನಕರ್ ಸೇರಿದಂತೆ ಇತರರಿದ್ದರು