ಕೆಬಿಎನ್: ಅಂತರಾಷ್ಟ್ರೀಯ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

0
57

ಕಲಬುರಗಿ : ಕೆಬಿಎನ್ ವಿಶ್ವವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ ಮತ್ತು ಕರ್ನಾಟಕ ರಾಜ್ಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸಂಘವು ಜಂಟಿಯಾಗಿ ‘ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಇತ್ತೀಚಿನ ಪ್ರಗತಿಗಳು’ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಜ. 5 ರಂದು ಕೆಬಿಎನ್ ವಿವಿಯ ಸಭಂಗಣದಲ್ಲಿ ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ವಿವಿಯ ಸಮ ಕುಲಾಧಿಪತಿ ಜನಾಬ್ ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸ್ಸೇನಿ ಉದ್ಘಾಟಿಸಲಿದ್ದಾರೆ. ಉಪಕುಲಪತಿ ಪ್ರೊ ಅಲಿ ರಜಾ ಮೂಸ್ವಿ, ವಿವಿ ನಿರ್ದೇಶಕ ಡಾ ಸಯ್ಯದ್ ಮುಸ್ತಫಾ ಅಲ್ ಹುಸ್ಸೇನಿ, ಪ್ರಭಾರಿ ಕುಲಸಚಿವೆ ಪ್ರೊ ರುಕ್ಸರ್ ಫಾತಿಮಾ ಭಾಗವಹಿಸಲಿದ್ದಾರೆ.

Contact Your\'s Advertisement; 9902492681

ಇದುವರೆಗೆ ಸುಮಾರು 280 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಡಾ. ಆಶಾ ರಿಝಸಿಂಘಾನಿ ಪ್ಲೇಸ್ಮೆಂಟ ಅಕ್ರಿಟಾ ಸಿಂಡ್ರೋಮ ವಿಷಯದ ಬಗ್ಗೆ ಆನ್ಲೈನ್ ಮೂಲಕ ಮಾತನಾಡಲಿದ್ದಾರೆ, ಡಾ. ಸುನಂದ ಗರ್ಗೆಶ್ವರಿ ಇವರು” ಪ್ರಸೂತಿ ಮತ್ತು ಸ್ತ್ರೀರೋಗದ ಇತ್ತೀಚಿನ ಪ್ರವೃತ್ತಿಗಳು” ಎಂಬ ವಿಷಯ ಕುರಿತು ಡಾ. ವಿದ್ಯಾ ಥೋಬ್ಬಿ ಗೌರವಾನ್ವಿತ ಮಾತೃತ್ವ ಆರೈಕೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ಡಾ ಹೇಮಾ ದಿವಾಕರ ಆನ್ಲೈನ್ ಮೂಲಕ ರಿಚಿಂಗ್ ದಿ ಅನರಿಚಡ ಟ್ರೂ ಟೆಕ್ನಾಲಜಿ, ಡಾ ರಾಜಶ್ರೀ ಪಾಲದಿ ಸೀಜರೆನ್ ಸ್ಕ್ಯಾರ ಡಿಫೆಕ್ಟ್ ಅಂಡ್ ಅಬ್ಬನಾರ್ಮಲ ಯುಟೇರೈನ್ ಬ್ಲೀಡಿಂಗ ಎಂಬ ವಿಷಯದ ಬಗ್ಗೆ ವಿಷಯ ಮಂಡಿಸುವರು.

ನಂತರ ನಡೆಯುವ ಪ್ಯಾನೆಲ್ ಚರ್ಚೆಯಲ್ಲಿ ಡಾ. ಆಯಿಷಾ ಹುಮೆರಾ, ಡಾ. ಹರ್ಷ ರಾಮದುರ್ಗ, ಡಾ. ಸುಪ್ರಿಯಾ, ಡಾ. ಸ್ನೇಹಕೃಪಾ, ಡಾ. ಮೀತಾ, ಡಾ. ಫರ್ಹತ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ಪೇಂಟಿಂಗ್ ಮತ್ತು ಪ್ರಬಂಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಗುವುದು ಎಂದು ಕೆಬಿಎನ್ ಪ್ರಕಟಣೆ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here