ಬಣಗಾರ ಪೌಂಡೇಶನ್ ಸಿದ್ದೇಶ್ವರ ಶ್ರೀಗಳ ಪ್ರಥಮ ಪುಣ್ಯಸ್ಮರಣೆ

0
85

ಸುರಪುರ: ಓದು,ಬರಹ,ಚಿಂತನ,ಮಂಥನ,ಅಧ್ಯಾತ್ಮ ಪ್ರವಚನ ಹಾಗೂ ಕಾಯಕ ದಾಸೋಹ ಮುಂತಾದ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಮರ್ಪಿಸಿಕೊಂಡಿದ್ದ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಗಳು ದೇಶ ಕಂಡ ಅದ್ಭುತ ತತ್ವಜ್ಞಾನಿ ಎಂದು ಸಾಹಿತಿ ಹಾಗೂ ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಶರಣಗೌಡ ಪಾಟೀಲ ಜೈನಾಪುರ ಹೇಳಿದರು.

ನಗರದ ರಂಗಂಪೇಟೆಯ ಸದ್ಗುರು ಸಹಜಾನಂದ ಸರಸ್ವತಿ ಸ್ವಾಮಿಗಳ ಮಠದಲ್ಲಿ ಬಣಗಾರ ಫೌಂಡೇಷನ್ ಹಾಗೂ ಮಠದ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸಿದ್ದೇಶ್ವರಸ್ವಾಮಿಗಳ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಭಕ್ತರ ದೃಷ್ಟಿಯಲ್ಲಿ ಸಿದ್ದೇಶ್ವರ ಸ್ವಾಮಿಗಳಾಗಿ ಅಂತರಂಗದಲ್ಲಿ ಪ್ರಕೃತಿಯ ಪ್ರೇಮಿಯಾಗಿದ್ದ ಅವರು ಕಥೆ,ವಚನ,ತ್ರಿಪದಿ,ಗೀತಸಾರ ಹಾಗೂ ರಾಮಾಯಣ ಮತ್ತು ಮಹಾಭಾರತ ಉಪನಿಷತ್ತುಗಳಲ್ಲಿ ಬರುವ ಸನ್ನಿವೇಶ ಹಾಗೂ ಸಂದರ್ಭ ಸಂಗತಿಗಳನ್ನು ಹೇಳಿ ಮನ ತಣಿಸುತ್ತಿದ್ದರು ಸಮಯಪ್ರಜ್ಞೆ,ಸರಳ ಜೀವನ ಹಾಗೂ ಉನ್ನತ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದ ಅವರು ಶತಮಾನದ ಸಂತರೆಂದೇ ತಣಿಸುತ್ತಿದ್ದರು ಎಂದು ಹೇಳಿದರು.

Contact Your\'s Advertisement; 9902492681

ಸಾನಿಧ್ಯ ವಹಿಸಿದ್ದ ಕೋನಾಳದ ಪರಮಾನಂದ ಶರಣರು ಮಾತನಾಡಿ, ಸಿದ್ದೇಶ್ವರ ಸ್ವಾಮಿಗಳ ವ್ಯಕ್ತಿತ್ವ ಹಾಗೂ ನಾಡು ನುಡಿಯ ಮೇಲೆ ಅವರಿಗೆ ಇದ್ದ ಅಭಿಮಾನ ಕುರಿತು ತಿಳಿಸಿದರು, ಅಧ್ಯಕ್ಷತೆ ವಹಿಸಿದ್ದ ರಂಗಂಪೇಟ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿ ಸಿದ್ದೇಶ್ವರ ಶರಣರು ಅಧ್ಯಾತ್ಮಿಕ ಪ್ರವಚನ ಮೂಲಕ ನಾಡಿನಲ್ಲಿ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದ ಮಹಾನ್ ಪುರುಷ ಎಂದು ಹೇಳಿದರು.

ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ ಹಾಗೂ ಉಪನ್ಯಾಸಕ ಗಂಗಾಧರ ಮಾತನಾಡಿದರು. ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಶರಣಪ್ಪ ಕಮ್ಮಾರ,ನಿಂಗಣ್ಣ ರಾಯಚೂರಕರ,ಸೋಮಶೇಖರ ಶಾಬಾದಿ,ಶಿಲ್ಪಾ,ಲಕ್ಷ್ಮೀ ಹಳಿಜೋಳ,ಮಹೇಂದ್ರ ಅಂಗಡಿ,ರಾಜಶೇಖರ ಗೆಜ್ಜಿ,ಮುರುಳಿಧರ ಅಂಬೂರೆ,ರಮೇಶ ಕುಲಕರ್ಣಿಗೋಪಾಲ ಗುಳೇದ ಇತರರು ಉಪಸ್ಥಿತರಿದ್ದರು. ಮುದ್ದಪ್ಪ ಅಪ್ಪಾಗೋಳ ನಿರೂಪಿಸಿದರು ಪ್ರಕಾಶ ಬಣಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು ವಿಜಯಕುಮಾರ ಬಣಗಾರ ಸ್ವಾಗತಿಸಿದರು ಸಾಹೇಬರೆಡ್ಡಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here