ಮಾಲಿನ್ಯರಹಿತ ಎಲೆಕ್ಟ್ರಿಕ್‌ಲ್ ವಾಹನಗಳು ಭವಿಷ್ಯದಲ್ಲಿ ಜಗತ್ತಿನ್ನು ಆಳುವ ವಾಹನಗಳಾಗಿರುತ್ತವೆ: ಡಾ. ಚೌಧರಿ

0
41

ಕಲಬುರಗಿ: ಇಂದು ನಾವು ಕಾರ್ಬನ್ ಮೊನಾಕ್ಸೈಡ್ ನಂತಹ ವಿಷಾನಿಲಗಳನ್ನು ಹೊರಸೂಸಿ ಪರಿಸರವನ್ನು ನಾಶಮಾಡುತ್ತಿರುವ, ಪೆಟ್ರೊಲ್, ಡಿಸೆಲ್, ನಂತಹ ಇಂಧನಗಳಿಂದ ಚಲಿಸುವ ಮೆಕ್ಯಾನಿಕಲ್ ವಾಹನಗಳನ್ನು ಮೀರಿಸಿ ಮಾಲಿನ್ಯರಹಿತ ಸುರಕ್ಷಿತ ಸರಳವಾದ ಎಲೆಕ್ಟ್ರಿಕ್‌ಲ್ ವಾಹನಗಳು ಮುಂದಿನ ಭವಿಷ್ಯದಲ್ಲಿ ಜಗತ್ತಿನ್ನು ಆಳುವ ವಾಹನಗಳಾಗಿರುತ್ತವೆ. ಎಂದು ತಾಂತರಿಕಶಿಕ್ಷಣ ಮೌಲ್ಯವರ್ದನ್ ಕಾರ್ಯಕ್ರಮ ಟೆಕ್ಯೂಪನ್  ಪರರ್ಫಾಮೆನ್ಸ್ ಆಡಿಟರ್ ಡಾ. ಬಿ.ಎನ್.ಚೌಧರಿ ಯವರು ನುಡಿದರು.

ಅವರು ಪಿಡಿಎ ಇಂಜಿನಿಯರಿಂಗ ಕಾಲೇಜಿನ ಎಲೆಕ್ಟ್ರಿಕಲ್ ವಿಭಾಗ, ಆಯೋಜಿಸಿದ ಟೆಕ್ಯೂಪ್-III ರಿಂದ ಪ್ರಾಯೋಜಿತ ಎಲೆಕ್ಟ್ರಿಕಲ್ ವಹಿಕಲ್ ಕಂಟ್ರೋಲ್, ಮೊಟಾರ್, ಸ್ಟೋರೇಜ್ ಮತ್ತು ಟೆಕ್ನಾಲೋಜಿ ವಿಷಯ ಕುರಿತು. ಒಂದುವಾರದ ಫೆಕಲ್ಟಿ ಡೆವೆಲೆಪ್‌ಮೆಂಟ್ 3 ರಿಂದ 7 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳೀತ ಮಂಡಳಿಯ ಸದಸ್ಯರಾದ ಶ್ರೀ ಸತೀಶ್ಚಂದ್ರ  ಹಡಗಿಲಮಠ ರವರು ಎಲೆಕ್ಟ್ರಿಕಲ್ ವಹಿಕಲ್ ನಂತಹ ವಿಷಯದ ಮೇಲೆ ಬೆಳಕು ಚೆಲ್ಲುತ್ತ ಉಪನ್ಯಾಸಕರ ಜ್ಞಾನವೃದ್ಧಿಗೆ ಸಹಾಯವಾಗುವ ಇಂತಹ ಕಾರ್ಯಕ್ರಮ ನಮ್ಮ ಯಾವತ್ತು ಬೆಂಬಲವಿದೆ ಎಂದರು. ಪ್ರಾರಂಭದಲ್ಲಿ ಕು. ಮಾಲಾಶ್ರೀ ಪ್ರಾರ್ಥಿಸಿದರು. ವಿಭಾಗದ ಮುಖ್ಯಸ್ಥರಾದ ಡಾ. ಬಸವರಾಜ ಅಮರಾಪುರ ರವರು ಫ್ಯಾಕಲ್ಟಿಡೆವಲಪಮೆಂಟ್ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು ಎಲ್ಲರನ್ನು ಸ್ವಾಗತಿಸಿದರು.

ಕಾರ್ಯಕ್ರಮದ ಸಂಬಂದಿತ ಪ್ರೊ. ಅಕ್ಷಯ ಆಸ್ಪಲಿ ವಂದಿಸಿದರು. ವೇದಿಕಿಯ ಮೇಲೆ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ಎಸ್. ಹೆಬ್ಬಾಳ ಕಾಲೇಜಿನ ಟೆಕ್ಯೂಪ್ ಸಂಯೋಜಕರಾದ ಪ್ರೊ.ಶರಣ ಪಡಶೆಟ್ಟಿ ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಮಹಾದೇವಿ ಬಿರಾಧಾರ, ಪ್ರೊ. ಅಕ್ಷಯ ಆಸ್ಪಲಿ ಉಪಸ್ಥಿತರಿದ್ದರು. ಪ್ರೊ. ಪ್ರೀಯಾ ಪಾಟೀಲ ನಿರುಪಿಸಿದಿರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಂದ ಸುಮಾರು ನೂರುಜನ ಪ್ರಾದ್ಯಾಪಕ ವಿದ್ಯಾರ್ಥಿಗಳು ಭಾಗವಹಿಸಿದರು. ಕಾಲೇಜಿನ ಡಿನ್. ಡಾ. ಎಸ್.ಆರ್.ಪಾಟೀಲ., ಡಾ. ನಾಗಭೂಷಣ ಪಾಟೀಲ, ಡಾ. ಮೃತುಂಜಯ ಆಸ್ಪಲಿ, ಪ್ರೊ. ಚಂದ್ರಕಲಾ ಪಾಟೀಲ, ಆಕಾಶ ಪಾಟೀಲ, ಪ್ರೊ. ಚಂದ್ರಶೇಖರ, ಪ್ರೊ. ಮಹಾದೇವಿ. ಪ್ರೊ.ಗೋಪಿನಾಥ, ಡಾ. ಬಾಬುರಾವ ಸೇರಿಕಾರ, ಡಾ. ಶಶಿಧರ ಕಲೆಶಟ್ಟಿ, ಡಾ. ಭಾರತಿ ಹರಸೂರ, ಮತ್ತು ಡಾ. ಗೀತಾಪಾಟೀಲ (ಹಂಜಿ) ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here